/newsfirstlive-kannada/media/media_files/2025/12/14/sliper-2025-12-14-12-50-13.jpg)
ಇಟಾಲಿಯನ್ ಐಷಾರಾಮಿ ಬ್ರ್ಯಾಂಡ್ ಪ್ರಾಡಾ (PRADA) ಈಗ ಭಾರತೀಯ ‘ಕೊಲ್ಹಾಪುರಿ ಚಪ್ಪಲಿ’ (kolhapuri slippers)ಗಳನ್ನು ‘ಗ್ಲೋಬಲ್ ಫ್ಯಾಷನ್ ಹೈ ಸ್ಟ್ರೀಟ್’ಗೆ ಕೊಂಡೊಯ್ದಿದೆ. ಕಂಪನಿಯು ಮಹಾರಾಷ್ಟ್ರ ಮತ್ತು ಕರ್ನಾಟಕದ ಕುಶಲಕರ್ಮಿಗಳೊಂದಿಗೆ ಸೀಮಿತ ಆವೃತ್ತಿಯ ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಚಪ್ಪಲಿಗಳ ಬೆಲೆ ಸುಮಾರು 800 ಯುರೋಗಳು (ಅಂದರೆ ಸುಮಾರು ರೂ. 84,000). ಇದು ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ.
ಐಷಾರಾಮಿ ಸಂಪರ್ಕಕ್ಕಾಗಿ ಸಿದ್ಧತೆ..!
ಸಾಂಪ್ರದಾಯಿಕ ಶೈಲಿಯ ಈ ಚಪ್ಪಲಿಗಳಿಗೆ ‘ಮಾಡರ್ನ್​ ಟಚ್’ ಕೊಡುವ ಉದ್ದೇಶ ಪ್ರಾಡಾ ಕಂಪನಿಯದ್ದು. ಇದರರ್ಥ ಪ್ರಾಡಾ ನಮ್ಮ ಸಾಂಪ್ರದಾಯಿಕ ಟೆಕ್ನಿಕ್​ಗಳನ್ನು ಪ್ರೀಮಿಯಂ ಗುಣಮಟ್ಟ ಮತ್ತು ಆಧುನಿಕ ವಿನ್ಯಾಸದೊಂದಿಗೆ ಪ್ರಸ್ತುತಪಡಿಸುತ್ತದೆ. ಕುಶಲಕರ್ಮಿಗಳ ಪ್ರಕಾರ, ಕೊಲ್ಹಾಪುರಿ ಚಪ್ಪಲ್‌ಗಳ ಜಾಗತಿಕ ಮೌಲ್ಯವನ್ನು ಹೆಚ್ಚಿಸುವುದಲ್ಲದೆ, ಸ್ಥಳೀಯ ಕುಶಲಕರ್ಮಿಗಳು ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಮಹತ್ವದ ಅವಕಾಶ ಒದಗಿಸುತ್ತದೆ.
ಇದನ್ನೂ ಓದಿ: ತಾಳಿ ಕಟ್ಟುವ ಶುಭಗಳಿಗೆ.. ಮಂಟಪಕ್ಕೆ ನುಗ್ಗಿದ ಯುವತಿ.. ಮದ್ವೆ ನಿಲ್ಲಿಸುವಂತೆ ರಂಪಾಟ..!
ಪ್ರಾಡಾ ಕಂಪನಿಯು ಇಲ್ಲಿನ ಸ್ಥಳೀಯ ಕೈಗಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಕುಶಲಕರ್ಮಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಈ ಚಪ್ಪಲಿಗಳು ಮುಂದಿನ ಫೆಬ್ರವರಿಗೆ ಪ್ರಾಡಾದ 40 ಅಂತರರಾಷ್ಟ್ರೀಯ ಮಳಿಗೆಗಳಲ್ಲಿ ಮತ್ತು ಅದರ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಬರಲಿವೆ.
ಇನ್ನು ಭಾರತದಲ್ಲಿ ಪ್ರಾಡಾ ಅಧಿಕೃತ ಫ್ಯಾಷನ್ ಅಂಗಡಿ ಹೊಂದಿಲ್ಲ. ಆದ್ದರಿಂದ ಗ್ರಾಹಕರು ಈ ವಿಶೇಷ ಚಪ್ಪಲ್‌ಗಳನ್ನು ಖರೀದಿಸಲು ವಿದೇಶಕ್ಕೆ ಹೋಗಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಕೊಲ್ಹಾಪುರಿ ಚಪ್ಪಲಿಗಳನ್ನು 1 ಬಿಲಿಯನ್ ಡಾಲರ್‌ಗಳವರೆಗೆ ರಫ್ತು ಮಾಡುವ ಸಾಧ್ಯತೆಯಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕೊಲ್ಹಾಪುರಿ ಚಪ್ಪಲಿಗಳು ವಿನ್ಯಾಸ, ಬಾಳಿಕೆ ವಿಚಾರದಲ್ಲಿ ಹೆಸರುವಾಸಿ. ಈ ಚಪ್ಪಲಿಗಳನ್ನು ಕೊಲ್ಹಾಪುರ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ತಲೆಮಾರುಗಳಿಂದ ತಯಾರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ನಕಲಿ, ಯಂತ್ರ-ನಿರ್ಮಿತ ಚಪ್ಪಲಿಗಳ ಬರುತ್ತಿರೋದ್ರಿಂದ ಈ ಕಲೆ ನಿಧಾನವಾಗಿ ನಶಿಸುತ್ತಿದೆ. ಪ್ರಾಡಾದ ಈ ಪಾಲುದಾರಿಕೆಯು ಪ್ರಾಚೀನ ಕೌಶಲ್ಯವನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ನಾಯಕನಾದ್ರೆ ಸ್ಪೆಷಲ್ ರೂಲ್ಸ್.. ಅದಕ್ಕೆ ಸೂರ್ಯನೇ ಎಕ್ಸಾಂಪಲ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us