ತಾಳಿ ಕಟ್ಟುವ ಶುಭಗಳಿಗೆ.. ಮಂಟಪಕ್ಕೆ ನುಗ್ಗಿದ ಯುವತಿ.. ಮದ್ವೆ ನಿಲ್ಲಿಸುವಂತೆ ರಂಪಾಟ..!

ತಾಳಿ ಕಟ್ಟಿದ ಕೆಲವೇ ನಿಮಿಷದಲ್ಲಿ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿದ್ದಾಳೆ. ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್​ನಲ್ಲಿ ಹೈಡ್ರಾಮಾ ನಡೆದಿದ್ದು, ಮದುವೆಗೆ ಆಗಮಿಸಿದ್ದ ಸಂಬಂಧಿಕರೆಲ್ಲ ಬಿಗ್ ಶಾಕ್ ಆಗಿದ್ದಾರೆ.

author-image
Ganesh Kerekuli
Chikkamagaluru marriage (3)
Advertisment

ಚಿಕ್ಕಮಗಳೂರು: ತಾಳಿ ಕಟ್ಟಿದ ಕೆಲವೇ ನಿಮಿಷದಲ್ಲಿ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿದ್ದಾಳೆ. ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್​ನಲ್ಲಿ ಹೈಡ್ರಾಮಾ ನಡೆದಿದ್ದು, ಮದುವೆಗೆ ಆಗಮಿಸಿದ್ದ ಸಂಬಂಧಿಕರೆಲ್ಲ ಬಿಗ್ ಶಾಕ್ ಆಗಿದ್ದಾರೆ.

ಏನಿದು ಮದುವೆ ಗಲಾಟೆ..? 

ಹಾಸನ ಜಿಲ್ಲೆ ಬೇಲೂರು ಮೂಲದ ಅಶ್ವಿನಿ ಎಂಬ ಯುವತಿ ಕಲ್ಯಾಣ ನಗರ ನಿವಾಸಿ ಶರತ್ ಎಂಬಾತನ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅಶ್ವಿನಿ ಮನೆಯವರು ಕೂಡ ಒಪ್ಪಿಗೆ ನೀಡಿದ್ದರಂತೆ. ಈ ಹಿಂದೆ ಶರತ್ ಅಶ್ವಿನಿ ಮನೆಗೆ ಹೋಗಿ ಹೆಣ್ಣು ಕೇಳಿದ್ದನಂತೆ. ನಿಮ್ಮ ಮಗಳನ್ನು ನಾನು ಮದುವೆ ಆಗ್ತೀನಿ. ನನಗೆ ಕೊಡಿ ಎಂದು ಕೇಳಿದ್ದನಂತೆ. ಅದಕ್ಕಾಗಿ ಬೇರೆ ಕಡೆ ಸಂಬಂಧಗಳು ಬಂದರೂ, ಅಶ್ವಿನಿಯನ್ನ ಮದುವೆ ಮಾಡಿರಲಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ: ರಜತ್​ ಸವಾಲ್​ಗೆ ಗಿಲ್ಲಿ ಕೌಂಟರ್ ಚಾಲೆಂಜ್! ಖುಷಿಯಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಶ್ವಿನಿ..! VIDEO

Chikkamagaluru marriage (2)

ಈಗ ಆಗಿದ್ದೇನು..?

ವಿಷಯ ಹೀಗಿರುವಾಗ ಶರತ್, ಅಶ್ವಿನಿಗೆ ಕೈಕೊಟ್ಟು ಇನ್ನೊಂದು ಹುಡುಗಿಯನ್ನ ಇವತ್ತು ಮದ್ವೆ ಆಗಿದ್ದಾನೆ. ಅಶ್ವಿನಿಗೆ ಶರತ್ ಮದುವೆ ಆಗ್ತಿರೋ ವಿಚಾರ ನಿನ್ನೆ ಗೊತ್ತಾಗಿದೆ. ಕೂಡಲೇ ಆತನ ಮನೆಗೆ ಹೋಗಿ ವಿಷಯ ಹೇಳಿ ಮದುವೆ ನಿಲ್ಲಿಸುವಂತೆ ಸೂಚಿಸಿದ್ದಳು. ಅಲ್ಲಿ, ಶರತ್ ಕುಟುಂಬಸ್ಥರ ಜೊತೆ ವಾಗ್ವಾದಗಳು ನಡೆದಿವೆ. ಆದರೆ, ಮದುವೆ ಮುರಿದುಕೊಳ್ಳಲು ಶರತ್ ಕುಟುಂಬ ಒಪ್ಪಿಲ್ಲ ಎನ್ನಲಾಗಿದೆ. 
ಅಂತೆಯೇ ಇಂದು ಬೆಳಗ್ಗೆ ಶರತ್​​ಗೆ ಬೇರೆ ಹುಡುಗಿ ಜೊತೆ ಮದುವೆ ಮಾಡಲು ನಿಶ್ಚಯಿಸಿ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್​ನಲ್ಲಿ ಮದುವೆ ಸಮಾರಂಭ ಆಯೋಜನೆಗೊಂಡಿದೆ. ಈ ವಿಚಾರ ಮತ್ತೆ ಅಶ್ವಿನಿಗೆ ಗೊತ್ತಾಗಿದೆ. ಕೂಡಲೇ ಅಲ್ಲಿಗೆ ದೌಡಾಯಿಸಿದ್ದ ಅಶ್ವಿನಿ, ಮದುವೆ ನಿಲ್ಲಿಸಲು ಮುಂದಾಗಿದ್ದಾಳೆ. ಆದರೆ ಅಷ್ಟರೊಳಗೆ ಶರತ್ ತಾಳಿಕಟ್ಟಿದ್ದ. 

ಇದನ್ನೂ ಓದಿ: ಮಹಿಳೆಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿದೆ -ದರ್ಶನ್ ಫ್ಯಾನ್ಸ್ ಪರ ಬ್ಯಾಟ್ ಬೀಸಿದ ವಿಜಯಲಕ್ಷ್ಮೀ

Chikkamagaluru marriage

ಅಶ್ವಿನಿ ಆರೋಪ ಏನು..? 

ಆತ ನನ್ನನ್ನ ಮದ್ವೆ ಆಗ್ತೀನಿ ಎಂದು ಮೋಸ ಮಾಡಿದ್ದಾನೆ. ನನ್ನಿಂದ ಸುಮಾರು 4 ಲಕ್ಷದ 50 ಸಾವಿರ ಹಣವನ್ನೂ ಪಡೆದಿದ್ದಾನೆ. ಆತನಿಗೆ ಈಗಾಗಲೇ ಬೇರೊಂದು ಹುಡುಗಿ ಜೊತೆ ಮದುವೆ ಕೂಡ ಆಗಿತ್ತು. ಮದುವೆಯಾದ 2 ತಿಂಗಳಿಗೇ ಡಿವೋರ್ಸ್ ಕೂಡ ನೀಡಿದ್ದಾನೆ. ಇಂದು ಮತ್ತೊಬ್ಬ ಹುಡುಗಿ ಜೊತೆ ಮದುವೆಯಾಗ್ತಿದ್ದಾನೆ. ಆಗ ಆ ಹುಡುಗಿಗೆ, ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿ ಮದುವೆ ಆಗ್ತಿದ್ದಾನೆ ಎಂದು ಆರೋಪಿಸಿದ್ದಾಳೆ. 

ಇದನ್ನೂ ಓದಿ: ಟೀಮ್ ಇಂಡಿಯಾ ನಾಯಕನಾದ್ರೆ ಸ್ಪೆಷಲ್ ರೂಲ್ಸ್.. ಅದಕ್ಕೆ ಸೂರ್ಯನೇ ಎಕ್ಸಾಂಪಲ್​..!

ಇದೇ ವಿಚಾರಕ್ಕೆ ನಾನು ಆತನ ವಿರುದ್ಧ ಮೂರು ಕೇಸ್​ಗಳನ್ನು ದಾಖಲಿಸಿದ್ದೆ. ಆತ ಮೂರು ಕೇಸ್​ಗಳಿಗೂ ಸ್ಟೇ ತಂದುಕೊಂಡಿದ್ದಾನೆ. ಇವತ್ತು ಮದುವೆ ಮನೆಗೆ ಹೋಗಿ ಗಲಾಟೆ ಮಾಡಿದ್ದಕ್ಕೆ ಆತನ ಕಡೆಯವರು ನನ್ನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ನನ್ನನ್ನು ಎಳೆದಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkamagaluru news
Advertisment