/newsfirstlive-kannada/media/media_files/2025/12/14/suryakumara-yadav-2025-12-14-11-27-42.jpg)
ಮಿಸ್ಟರ್​​​​ 360, ಡೇರಿಂಗ್ ಌಂಡ್ ಡ್ಯಾಶಿಂಗ್, ಫಿಯರ್​ಲೆಸ್, ಬೌಲರ್​ಗಳ ವಿಲನ್ ಅಂತೆಲ್ಲಾ ಕರೆಸಿಕೊಳ್ತಿದ್ದ ಸೂರ್ಯ, T20 ಕ್ರಿಕೆಟ್​ನಲ್ಲಿ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಸದ್ಯ ಸೂರ್ಯಕುಮಾರ್ ಅಬ್ಬರ, ಆರ್ಭಟ, ಘರ್ಜನೆ ಎಲ್ಲವೂ, ನಿಂತು ಹೋಗಿಬಿಟ್ಟಿದೆ. ಹೇಗಿದ್ದ ಸೂರ್ಯ ಹೇಗಾಗ್ಬಿಟ್ಟ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುವಂತಾಗಿದೆ.
20 ಇನ್ನಿಂಗ್ಸ್, 11 ಬಾರಿ ಸಿಂಗಲ್ ಡಿಜಿಟ್​ಗೆ ಔಟ್
ಕಳೆದ 20 ಟಿ-20 ಪಂದ್ಯಗಳಲ್ಲಿ ಸೂರ್ಯ 11 ಬಾರಿ ಸಿಂಗಲ್ ಡಿಜಿಟ್​ಗೆ ಔಟಾಗಿದ್ದಾರೆ. ಯಾಕಂದ್ರೆ ಯಾರ್ ಏನೇ ಹೇಳಿದ್ರೂ ಸ್ಟ್ಯಾಟಿಸ್ಟಿಕ್ಸ್​ ಸುಳ್ಳು ಹೇಳೋದಿಲ್ಲ. ಸೂರ್ಯ ಫ್ಲಾಪ್ ಸ್ಟಾರ್ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಿಲ್ಲ. ​​​​
ಇದನ್ನೂ ಓದಿ:EXCLUSIVE: ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್, ಖಡಕ್ ಮಾತು..!
/filters:format(webp)/newsfirstlive-kannada/media/media_files/2025/12/09/surya-kumar-yadav-2025-12-09-10-39-15.jpg)
17 ಇನ್ನಿಂಗ್ಸ್, ಒಂದೇ ಒಂದು 50 ಇಲ್ಲ
ಸೂರ್ಯನಿಗೆ ಯಾವ ಮಟ್ಟಕ್ಕೆ ಕತ್ತಲು ಆವರಿಸಿದೆ ಅಂದ್ರೆ ಒಂದೊಂದು ರನ್​ಗಳಿಸೋಕೂ ಸೂರ್ಯ ಪರದಾಡ್ತಿದ್ದಾರೆ. ರನ್​ಗಳಿಸೋದು ಇರಲಿ. ಕಳೆದ 17 ಇನ್ನಿಂಗ್ಸ್​ಗಳಲ್ಲಿ, ಒಂದೇ ಒಂದು ಫಿಫ್ಟಿ ಕೂಡ ಬಾರಿಸಿಲ್ಲ. ಫೀಲ್ಡ್​ನಲ್ಲಿ ಬ್ಯಾಟ್ ಹಿಡಿದು ಸೂರ್ಯನ ಪರದಾಟ, ಇಡೀ ವಿಶ್ವವೇ ನೋಡಿದೆ. ಸೂರ್ಯನಿಗೆ ಇಂತಹ ಗತಿ ಬರಬಾರದಿತ್ತು ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.
ಸೂರ್ಯಕುಮಾರ್ ಕೆಟ್ಟ ದಾಖಲೆ
ಆಟಗಾರನಾಗಿ ಸೂರ್ಯ ಟೋಟಲಿ ಫ್ಲಾಪ್. ಫಾರ್ಮ್ ಸಮಸ್ಯೆ, ಆತ್ಮವಿಶ್ವಾಸದ ಕೊರತೆ, ಲೋ ಬಾಡಿ ಲ್ಯಾಂಗ್ವೇಜ್​​​​​​ ಎಲ್ಲವೂ ಸೂರ್ಯನನ್ನ ಕಾಡ್ತಿವೆ. ಆದ್ರೆ ಸೂರ್ಯ ಮಾತ್ರ, ತನ್ನ ಸಮಸ್ಯೆಗಳನ್ನ ಸರಿಪಡಿಸಿಕೊಳ್ಳುವ ಕೆಲಸ ಮಾಡ್ತಿಲ್ಲ. ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಂಗಲ್ ಡಿಜಿಟ್​ಗೆ ಔಟಾದ ನಾಯಕರ ಲಿಸ್ಟ್​ನಲ್ಲಿ ಇದೀಗ ಸೂರ್ಯ, ರೋಹಿತ್ ಶರ್ಮಾ ಜೊತೆ ಕಾಣಿಸಿಕೊಂಡಿದ್ದಾರೆ. ಸೂರ್ಯ ಮತ್ತು ರೋಹಿತ್ ನಾಯಕರಾಗಿ ತಲಾ 8 ಬಾರಿ ಸಿಂಗಲ್ ಡಿಜಿಟ್​ಗೆ ಔಟಾಗಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಮಹಿಳೆಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿದೆ -ದರ್ಶನ್ ಫ್ಯಾನ್ಸ್ ಪರ ಬ್ಯಾಟ್ ಬೀಸಿದ ವಿಜಯಲಕ್ಷ್ಮೀ
/filters:format(webp)/newsfirstlive-kannada/media/media_files/2025/10/31/surya-kumara-yadav-2025-10-31-17-03-22.jpg)
ನಿಜ ಹೇಳಬೇಕು ಅಂದ್ರೆ ಸೂರ್ಯಕುಮಾರ್ ಯಾದವ್ ಅದೃಷ್ಟವಂತ. ನಾಯಕನಾಗಿ ಸೂರ್ಯ ಅತ್ಯುತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಆದ್ರೆ ಬ್ಯಾಟರ್ ಆಗಿ ಸೂರ್ಯ, ಕಳಪೆ ದಾಖಲೆ ಹೊಂದಿದ್ದಾರೆ. ಟೀಮ್ ಇಂಡಿಯಾದಲ್ಲಿ ಸೂರ್ಯಕುಮಾರ್​ಗೆ ಸ್ಪೆಷಲ್ ರೂಲ್ಸ್ ಇರಬೇಕು. ಯಾಕಂದ್ರೆ ವರ್ಷವಿಡಿ ಫ್ಲಾಪ್ ಆದ್ರೂ ಸೂರ್ಯ, ಇನ್ನೂ ತಂಡವನ್ನ ಮುನ್ನಡೆಸುತ್ತಿದ್ದಾರೆ. ರನ್​ ಹೊಡೆಯದಿದ್ರೂ ಇನ್ನೂ ತಂಡದಲ್ಲಿದ್ದಾರೆ. ಸೂರ್ಯಕುಮಾರ್ ಸ್ಥಾನದಲ್ಲಿ ಬೇರೆಯಾರಾದ್ರೂ ಇದ್ದಿದ್ರೆ ಅವರಿಗೂ ಇದೇ ಟ್ರೀಟ್ಮೆಂಟ್ ಸಿಗ್ತಿತ್ತಾ? ಖಂಡಿತ ಇಲ್ಲ..!
ಟಿ-20 ಕರಿಯರ್​ನ ಆರಂಭದಲ್ಲಿ ಸೂರ್ಯ ಮುಟ್ಟಿದ್ದೆಲ್ಲಾ ಚಿನ್ನ. ಅದೇನು ಆಟ, ಅದೇನು ಆರ್ಭಟ.. ಸೂರ್ಯಕುಮಾರ್ ಬ್ಯಾಟಿಂಗ್ ನೋಡೋಕೆ ಎರಡು ಕಣ್ಣು ಸಾಲ್ತಿರಲಿಲ್ಲ. ಆ ಲೆವೆಲ್ ಪೀಕ್​ನಲ್ಲಿದ್ದ ಸೂರ್ಯಕುಮಾರ್​ಗೆ ಇದ್ದಕ್ಕಿದಂತೆ ಏನಾಯ್ತು? ಎತ್ತರದಲ್ಲಿದ್ದ ಸೂರ್ಯ ದಿಢೀರ್ ಕೆಳಗೆ ಬಿದ್ದಿದ್ದು ಹೇಗೆ ಅನ್ನೋದು ಯಾರಿಗೂ ಗೊತ್ತಿಲ್ಲ. ಫಾರ್ಮ್ ಟೆಂಪರರಿ, ಕ್ಲಾಸ್ ಪರ್ಮನೆಂಟ್ ಅನ್ನೋದನ್ನ ಮರೆಯಬಾರದು. ಹಾಗಾಗಿ ಕ್ಲಾಸ್ ಌಂಡ್ ಮಾಸ್ ಸೂರ್ಯ, ಟಿ-20 ವಿಶ್ವಕಪ್​​ಗೂ ಮುನ್ನ ಲಯಕ್ಕೆ ಮರಳಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us