/newsfirstlive-kannada/media/media_files/2025/08/11/hair-care-2025-08-11-17-25-11.jpg)
ಕೂದಲು ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ? ಗಂಡಾಗಲಿ ಅಥವಾ ಹೆಣ್ಣಗಲಿ ಕೂದಲು ಇದ್ದರೆ ಒಂದು ಕಳೆ. ಕೂದಲು ಉದುರಬಾರದು, ಉದ್ದವಾಗಿ ಬೆಳೆಯಬೇಕು, ಬಲಿಷ್ಠ ಹಾಗೂ ಸುಂದರವಾಗಿ ಬೆಳೆಯಬೇಕೆಂದು ನಾನಾ ರೀತಿಯಲ್ಲಿ ಕೂದಲಿನ ಮೇಲೆ ಪ್ರಯೋಗ ಮಾಡುತ್ತಾರೆ ಜನರು. ಆದರೆ ಅದು ಫಲ ಕೊಡದೇ ಹೆಚ್ಚಿನ ಮಟ್ಟದಲ್ಲಿ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
ಹೀಗೆ ಮಾಡುತ್ತಾ ಹೋದರೆ ದಿನೇ ದಿನೇ ದಪ್ಪವಿದ್ದ ಕೂದಲು ತೇಳುವಾಗಲು ಶುರುವಾಗುತ್ತದೆ. ಇದರಿಂದ ಅತಿಯಾದ ಒತ್ತಡ ಕೂಡ ಉಂಟಾಗುತ್ತದೆ. ಈಗಿನ ಕಾಲದ ಯುವ ಜನರಲ್ಲಿ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಬಹಳ ಬೇಗನೆ ಉದುರಿ ಹೋಗುತ್ತಿದೆ. ಅದರಲ್ಲೂ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ, ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ಹಾಗಾದರೆ ನೈಸರ್ಗಿಕವಾಗಿ ಕೂದಲನ್ನು ಹೇಗೆ ಬೆಳಸಬೇಕು ಎಂಬುವುದರ ವಿವರ ಇಲ್ಲಿದೆ.
ಮೊದಲು ತಿಳಿದುಕೊಳ್ಳಿ.. ಕೂದಲು ಉದುರುವ ಸಮಸ್ಯೆ ಮುಖ್ಯ ಕಾರಣ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇರಿಸದೇ ಇರುವುದು. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಾಕಷ್ಟು ನೀರು, ಹಣ್ಣು, ಮಾಂಸ, ಮೀನು ಮತ್ತು ಇತರ ರೀತಿಯ ಪ್ರೋಟೀನ್‌ಗಳನ್ನು ಸೇವಿಸಿ.
ಆದರೆ ನಿಮಗೆ ಗೊತ್ತಿರಲಿ.. ನೈಸರ್ಗಿಕವಾಗಿ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನಿಮ್ಮ ಕೂದಲಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ನಿಮ್ಮ ಜೀವನಶೈಲಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮ ಜೀವನಶೈಲಿಯಲ್ಲಿ ನೀವು ಮಾಡಬೇಕಾದ ಕೆಲವು ಅಗತ್ಯ ಬದಲಾವಣೆಗಳು ಇಲ್ಲಿವೆ.
ಯಾವಾಗಲೂ ಹೈಡ್ರೇಟೆಡ್ ಆಗಿರಿ
ಯಾವಾಗಲೂ ಹೈಡ್ರೇಟೆಡ್ ಆಗಿರಲು ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದು ಅತ್ಯಗತ್ಯ. ನಿರ್ಜಲೀಕರಣವು ಕೂದಲು ಉದುರುವಿಕೆಗೆ ಕಾರಣ ಆಗಬಹುದು ಮತ್ತು ನಿಮ್ಮ ಕೂದಲನ್ನು ಸುಲಭವಾಗಿ ಮತ್ತು ಒಣಗುವಂತೆ ಮಾಡುತ್ತದೆ.
ಸಮತೋಲಿತ ಆಹಾರವನ್ನು ಸೇವಿಸಿ
ಕೂದಲು ಉದುರುವುದನ್ನು ತಡೆಯಲು ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಮತ್ತು ಡಿ, ಕಬ್ಬಿಣ, ಸತು, ಬಯೋಟಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಲು ಮಾವಿನ ಹಣ್ಣುಗಳು, ದ್ರಾಕ್ಷಿಗಳು, ಸೌತೆಕಾಯಿಗಳು ಮುಂತಾದ ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸ್ತೀರಿ.
ಕೂದಲು ತೊಳೆಯುವಾಗ ದಿನಚರಿಯನ್ನು ಕಾಪಾಡಿಕೊಳ್ಳಿ
ಪ್ರತಿ ದಿನ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ವಾರಕ್ಕೆ ಎರಡು ಸಲ ತಲೆಗೆ ಸ್ನಾನ ಮಾಡಿದ್ರೆ ಉತ್ತಮ. ಬೆವರು ಮತ್ತು ತಲೆಹೊಟ್ಟಿನಿಂದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದರ ಜೊತೆಗೆ ಸರಿಯಾದ ಕ್ರಮದಲ್ಲಿ ಕೂದಲು ತೊಳೆಯುವ ದಿನಚರಿ ನಿರ್ವಹಿಸಿ.
ಹೀಟ್ ಸ್ಟೈಲಿಂಗ್ ಅನ್ನು ಕಡಿಮೆ ಮಾಡಿ
ಹೀಟ್ ಸ್ಟೈಲಿಂಗ್ನಿಂದಲೂ (Heat styling) ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದಕ್ಕೆ ಕಾರಣವಾಗಬಹುದು. ಸ್ಟೈಲಿಂಗ್ ಉಪಕರಣಗಳನ್ನು ಬಳಸಿಕೊಂಡು ನಿಮ್ಮ ಹೇರ್ ಸ್ಟ್ರೈಟ್ ಅಥವಾ ಕರ್ಲಿಂಗ್ ಮಾಡುವುದನ್ನು ಆದಷ್ಟು ತಪ್ಪಿಸಿ. ನಿಮ್ಮ ಕೂದಲನ್ನು ಒಣಗಿಸಲು ಡ್ರೈಯರ್ ಬಳಸುವುದನ್ನು ಕೂಡ ತಪ್ಪಿಸಿ.
ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ
ವ್ಯಾಯಾಮದ ದಿನಚರಿಯನ್ನು ಅನುಸರಿಸಿ. ಅದು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ನಿಮ್ಮ ನೆತ್ತಿಯ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ
ಅತಿಯಾದ ಧೂಮಪಾನ ಮತ್ತು ಆಲ್ಕೊಹಾಲ್ ಯುಕ್ತ ಪಾನೀಯಗಳನ್ನು ಅಧಿಕವಾಗಿ ಸೇವಿಸುವುದರಿಂದ ಕೂದಲು ಉದುರುವಿಕೆ ಮತ್ತು ನೆತ್ತಿಯ ರಕ್ತದ ಹರಿವು ಕಡಿಮೆಯಾಗುತ್ತದೆ. ಹೀಗಾಗಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಕುಡಿದರೇ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ