/newsfirstlive-kannada/media/media_files/2025/08/22/karl-svanberg-2025-08-22-22-45-05.jpg)
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ದಂಪತಿ ಸಖತ್ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳ ಸಿನಿಮಾ ಡೈಲಾಗ್ಗೆ ಲಿಪ್ ಸಿಂಕ್ ಮಾಡುತ್ತಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?
ಪುನೀತ್ ರಾಜ್ಕುಮಾರ್ ಅಪ್ಪು ಸಿನಿಮಾ ಡೈಲಾಗ್, ಯಶ್ ಸಿನಿಮಾ ಕೆಜಿಎಫ್ ಡೈಲಾಗ್, ಶಿವಣ್ಣನ ಡೈಲಾಗ್, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜೇನ ದನಿಯೋಳೆ ಮೀನ ಕಣ್ಣೋಳೆ ಸೂಪರ್ ಸಾಂಗ್ಗೆ ಡ್ಯಾನ್ಸ್, ರಜನಿಕಾಂತ್ ಕೂಲಿ ಸಿನಿಮಾ ಮೋನಿಕಾ ಹಾಡಿಗೆ ಡ್ಯಾನ್ಸ್. ಸು ಫ್ರಮ್ ಸೋ ಸಿನಿಮಾದ ಬಂದರೋ ಬಂದರೋ ಭಾವ ಹಾಡಿಗೆ ಡ್ಯಾನ್ಸ್. ಹೀಗೆ ಭಿನ್ನ ವಿಭಿನ್ನವಾಗಿ ರೀಲ್ಸ್ ಮಾಡುತ್ತಾ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ ಈ ದಂಪತಿ.
ಅಷ್ಟಕ್ಕೂ ಯಾರು ಈ ದಂಪತಿ..?
ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ ಸ್ವೀಡನ್ ದಂಪತಿ. ಸ್ವೀಡನ್ ದೇಶದ ಕಾರ್ಲ್ ಸ್ವಾನ್‌ಬರ್ಗ್ ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳ ಸಿನಿಮಾ ಡೈಲಾಗ್ಗೆ ಲಿಪ್ ಸಿಂಕ್ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ 1.1 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಭಿನ್ನ ವಿಭಿನ್ನ ರೀಲ್ಸ್ಗಳ ಮೂಲಕ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಜಸ್ಟ್, 15 ಸೆಕೆಂಡ್ನಲ್ಲಿ ಫೇಮಸ್ ಸಿನಿಮಾಗಳ ದೃಶ್ಯಗಳನ್ನು ರೀಲ್ಸ್ ಮೂಲಕ ಮರುಸೃಷ್ಟಿ ಮಾಡಿದ್ದಾರೆ. ಅಲ್ಲದೇ ಭಾರತೀಯ ಸಿನಿಮಾದ ಬಗ್ಗೆ ಅವರ ಉತ್ಸಾಹವನ್ನು ತೋರಿಸುತ್ತಾ ಇರುತ್ತಾರೆ. ಅಲ್ಲದೇ ತೆಲುಗುವನ್ನು ಮಾತಾಡುವ ವಿಡಿಯೋ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಕಾರ್ಲ್ ಸ್ವಾನ್‌ಬರ್ಗ್ ಅವರು RRR ನೋಡಿದ ಮೇಲೆ ಭಾರತೀಯ ಸಿನಿಮಾಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆಯಂತೆ. ಇನ್ನೂ ಅವರ ಪತ್ನಿ ಎಕಟೆರಿನಾ ಮತ್ತು ಸಹೋದರ ಇವಾನ್ ಸೇರಿದಂತೆ ಅವರ ಕುಟುಂಬವು ಅವರಿಗೆ ಸಾಥ್ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ