/newsfirstlive-kannada/media/media_files/2026/01/05/abhishek-sharma-3-2026-01-05-15-52-22.jpg)
ಟೀಮ್​ ಇಂಡಿಯಾದ ಯಂಗ್​ ಸೆನ್ಸೇಷನ್​ ಅಭಿಷೇಕ್ ಶರ್ಮಾ ಹವಾ ಆಫ್​ ದ ಪೀಲ್ಡ್​ನಲ್ಲೂ ಜೋರಾಗಿದೆ. ಆನ್​ಫೀಲ್ಡ್​ ಆಟದಿಂದ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ದಿಗ್ಗಜರನ್ನ ಹಿಂದಿಕ್ಕಿದ್ದಾರೆ. ದುಬಾರಿ ಬೆಲೆಯ ಕಾರ್​​ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನೀವು ನಂಬ್ತಿರೋ.. ಇಲ್ವೋ.. ಟೀಮ್​ ಇಂಡಿಯಾದ ಹಾಲಿ-ಮಾಜಿ ಯಾವೊಬ್ಬ ಕ್ರಿಕೆಟರ್​​ ಬಳಿ ಕೂಡ ಇಷ್ಟು ದುಬಾರಿ ದುಡ್ಡಿನ ಕಾರಿಲ್ಲ. ಆ ಕಾರ್​ ಯಾವುದು? ವಿಶೇಷತೆ ಏನು?
ಅಭಿಷೇಕ್​ ಶರ್ಮಾ.. ಟೀಮ್​ ಇಂಡಿಯಾದ ಯಂಗ್​ ಅಂಡ್ ಡೈನಾಮಿಕ್​ ಬ್ಯಾಟ್ಸ್​​ಮನ್​. ತನ್ನ ವಿಧ್ವಂಸಕ ಬ್ಯಾಟಿಂಗ್​ನಿಂದಲೇ ವಿಶ್ವ ಕ್ರಿಕೆಟ್​​ನಲ್ಲಿ ಹೊಸ ಹವಾ ಸೃಷ್ಟಿಸಿದ ಮಾಂತ್ರಿಕ. ಜಸ್ಟ್​ 25 ವರ್ಷ ವಯಸ್ಸಿಗೆ ಟಿ20 ಕ್ರಿಕೆಟ್​​ ಲೋಕವನ್ನ ರೂಲ್​ ಮಾಡ್ತಿರೋ ರೂಲರ್​. ಈತ ಕ್ರಿಸ್​ನಲ್ಲಿದ್ದಷ್ಟು ಹೊತ್ತು ಅಭಿಮಾನಿಗಳಿಗೆ ಎಂಟರ್​​ಟೈನ್​ಮೆಂಟ್​ ಮಿಸ್ಸೇ ಇಲ್ಲ. ಅಲ್ಟ್ರಾ ಅಗ್ರೆಸ್ಸಿವ್​ ಆಟವನ್ನ ನೋಡೋದೇ ಒಂದು ಹಬ್ಬ.
ಇದನ್ನೂ ಓದಿ:RCBಗೆ ಮಂದಾನ ರಾಯಲ್​ ಎಂಟ್ರಿ.. ಬಾಂಗ್ಲಾದೇಶದಲ್ಲಿ IPL ಬ್ಯಾನ್..!
/filters:format(webp)/newsfirstlive-kannada/media/media_files/2026/01/05/abhishek-sharma-2-2026-01-05-15-55-52.jpg)
ಆಫ್​ ದ ಫೀಲ್ಡ್​ನಲ್ಲೂ ಹವಾ
33 ಟಿ20 ಮ್ಯಾಚ್​​ಗಳನ್ನಾಡಿರೋ ಅಭಿಷೇಕ್​ ಶರ್ಮಾ, ವಿಸ್ಫೋಟಕ ಆಟದಿಂದ ಹಲವು ದಾಖಲೆಗಳನ್ನ ಪುಡಿಗಟ್ಟಿದ್ದಾರೆ. ನಂಬರ್​ 1 ಟಿ20 ಬ್ಯಾಟರ್​ ಆಗಿ ಮೆರೆದಾಡ್ತಿದ್ದಾರೆ. ಟೀಮ್​ ಇಂಡಿಯಾ ಟಿ20 ತಂಡ​ ಕಂಡ ದಿಗ್ಗಜ ಆಟಗಾರರನ್ನೂ ಮೀರಿಸಿ ನಿಂತಿದ್ದಾರೆ. ಆನ್​ ಫೀಲ್ಡ್​ ಕಥೆ ಎಲ್ಲರಿಗೂ ಗೊತ್ತಿರೋ ವಿಚಾರನೇ ಬಿಡಿ. ಇದೀಗ ಆಫ್​​ ದ ಫೀಲ್ಡ್​ನಲ್ಲೂ ಟೀಮ್​ ಇಂಡಿಯಾದ ಎಲ್ಲಾ ಕ್ರಿಕೆಟರ್ಸ್​ನ ಅಭಿಷೇಕ್ ಶರ್ಮಾ ಮೀರಿಸಿ ನಿಂತಿದ್ದಾರೆ.
ಐಷಾರಾಮಿ ಕಾರು ಖರೀದಿಸಿದ ಅಭಿಷೇಕ್​..!
ಕಳೆದ ಏಷ್ಯಾಕಪ್​ ಟೂರ್ನಿಯಲ್ಲಿ ಮಿಂಚಿನ ಪರ್ಫಾಮೆನ್ಸ್​ ನೀಡಿದ ಬಳಿಕ ಅಭಿಷೇಕ್​ ಶರ್ಮಾ ಬ್ರ್ಯಾಂಡ್​​ವ್ಯಾಲ್ಯೂ ಗಗನಕ್ಕೇರಿದೆ. ಕ್ರಿಕೆಟ್​ಗಿಂತ ಎಂಡ್ರೋಸ್​ಮೆಂಟ್​, ಕಮರ್ಷಿಯಲ್​ನಿಂದಲೇ ಕೋಟಿ-ಕೋಟಿ ಆದಾಯ ಬಂದಿದೆ. ಸದ್ಯ, ವಿಜಯ್​ ಹಜಾರೆ ಟೂರ್ನಿಯನ್ನಾಡ್ತಿರೋ ಅಭಿಷೇಕ್ ಶರ್ಮಾ ಇದ್ರ ನುಡವೆ ಭರ್ಜರಿ ಶಾಪಿಂಗ್​ ಮಾಡ್ತಿದ್ದಾರೆ. ಪಂಜಾಬ್​ನಲ್ಲಿರೋ ಅಭಿಷೇಕ್ ಮನೆಗೆ ಹೊಸ ಅತಿಥಿ ಬಂದಿದೆ. ದುಬಾರಿ ಬೆಲೆಯ ಐಷಾರಾಮಿ ಕಾರನ್ನ ಅಭಿಷೇಕ್​ ಖರೀದಿಸಿದ್ದಾರೆ.
ಇದನ್ನೂ ಓದಿ: ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ; ಅಯ್ಯೋ, ಬೆಂಗಳೂರಲ್ಲಿ ಏನಾಯ್ತು..?
/filters:format(webp)/newsfirstlive-kannada/media/media_files/2026/01/05/abhishek-sharma-1-2026-01-05-15-56-05.jpg)
ಯಾವೊಬ್ಬ ಭಾರತೀಯ ಕ್ರಿಕೆಟರ್​ ಬಳಿ ಇಲ್ಲ ಇಷ್ಟು ದುಬಾರಿ ಕಾರು
ಅಭಿಷೇಕ್​ ಶರ್ಮಾ ಖರೀದಿಸಿರೋ ಹೊರ ಕಾರಿನ ಹೆಸರು ಫೆರಾರಿ ಫುರೋಸಾಂಗ್ಯೊ. ಭಾರತದಲ್ಲಿ ಈ ಕಾರಿನ ಆನ್​ರೋಡ್​ ಬೆಲೆ 12.97 ಕೋಟಿ. ಇಷ್ಟು ದೊಡ್ಡ ಅಮೌಂಟ್​ ನೀಡಿ ಅಭಿಷೇಕ್​ ಶರ್ಮಾ ಹೊಸ ಕಾರನ್ನ ಖರೀದಿಸಿದ್ದಾರೆ. ನೀವು ನಂಬಲ್ಲ... ವಿಶ್ವದ ನಂಬರ್ 1 ಶ್ರೀಮಂತ ಕ್ರಿಕೆಟಿಗ ಸಚಿನ್​ ತೆಂಡುಲ್ಕರ್​, 2ನೇ ರಿಚೆಸ್ಟ್​ ಕ್ರಿಕೆಟರ್​ ಎಮ್​.ಎಸ್​ ಧೋನಿ, 3ನೇ ಶ್ರೀಮಂತ ಕ್ರಿಕೆಟಿಗ ವಿರಾಟ್​ ಕೊಹ್ಲಿ ಬಳಿ ಕೂಡ ಇಷ್ಟು ದೊಡ್ಡ ಬೆಲೆಯ ದುಬಾರಿ ಕಾರಿಲ್ಲ.
ದುಬಾರಿ ಕಾರಿನ ವಿಶೇಷತೆ ಏನು..?
ಅಭಿಷೇಕ್​ ಶರ್ಮಾ ಖರೀದಿಸಿರೋ ಈ 4 ಸಿಟ್ಟರ್​ ಕಾರು ಅತ್ಯಾಧುನಿಕ ವಿನ್ಯಾಸ ಹಾಗೂ ಐಷಾರಾಮಿ ಕ್ಯಾಬಿನ್​ ಹೊಂದಿದೆ. V12 ಇಂಜಿನ್​ನ ಈ ಫೆರಾರಿ ಕಾರು ಜಸ್ಟ್​ 3.3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿಲೋಮೀಟರ್​ನಷ್ಟು ವೇಗ ಪಡೆದುಕೊಳ್ಳೋ ಸಾಮರ್ಥ್ಯವನ್ನ ಹೊಂದಿದೆ. ಇದ್ರ ಗರಿಷ್ಠ ವೇಗ ಪ್ರತಿ ಗಂಟೆಗೆ 310 ಕಿಲೋ ಮೀಟರ್ ಆಗಿದೆ. ಡ್ಯುಯಲ್ ಕಾಕ್‌ಪಿಟ್ ಡ್ಯಾಶ್‌ಬೋರ್ಡ್, 10.2 ಇಂಚಿನ 2 ಇನ್ಫೋಟೈನ್‌ಮೆಂಟ್ ಸ್ಕ್ರೀನ್​, ಮಸಾಜ್ ಸೌಲಭ್ಯದ ಮುಂಭಾಗದ ಸೀಟು ಸೇರಿದಂತೆ ಹಲವು ಹಲವು ವಿಶಿಷ್ಟತೆಗಳನ್ನ ಹೊಂದಿದೆ. ಅಂದ್ಹಾಗೆ ಇದು ಫೆರಾರಿ ಕಂಪನಿಯ ಮೊದಲ FUV ಕಾರ್. ಅಂದ್ರೆ ಫೆರಾರಿ ಯುಟಿಲಿಟಿ ವೆಹಿಕಲ್​ ಅಂತಾ. ಆನ್​ಫೀಲ್ಡ್​ನಲ್ಲಿ ನಾನೇ ಬೇರೆ, ನನ್ನ ಸ್ಟೈಲೆ ಬೇರೆ ಅಂತಾ ಬ್ಯಾಟ್​ ಬೀಸೋ ಅಭಿಷೇಕ್​ ಶರ್ಮಾ, ಆಫ್​ ದ ಫೀಲ್ಡ್​ನಲ್ಲೂ ಅದೇ ಮಾತಿನಂತೆ ಈಗ ಲೈಫ್​ ಲೀಡ್​ ಮಾಡ್ತಿದ್ದಾರೆ. ಇದಕ್ಕೆ ಕಾರು ಖರೀದಿಯೇ ಬೆಸ್ಟ್​ ಎಕ್ಸಾಂಪಲ್​.
ಇದನ್ನೂ ಓದಿ: ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ; ಅಯ್ಯೋ, ಬೆಂಗಳೂರಲ್ಲಿ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us