/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಜೈಲು ಹಕ್ಕಿ ರನ್ಯಾ ರಾವ್ಗೆ ದೊಡ್ಡ ಆಘಾತ.. 102.55 ಕೋಟಿ ರೂಪಾಯಿ ದಂಡ!
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ
- ತಮ್ಮ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕಾದ ಪ್ರಸಂಗ ಬರಬಹುದು
- ನಿಮ್ಮ ತಪ್ಪಿಗೆ ಬೇರೆಯವರನ್ನ ದೂಷಿಸಬಾರದು
- ಇಂದಿನ ವಾತಾವರಣ ಸರಿಯಾಗಿರುವುದಿಲ್ಲ
- ಆಪ್ತರು ಮತ್ತು ಬಂಧುಗಳ ಜೊತೆ ಸಮಯ ಕಳೆಯುತ್ತೀರಿ
- ವ್ಯವಹಾರದ ಜೊತೆಗೆ ಘರ್ಷಣೆ ಆಗಬಹುದು
- ಮಧ್ಯಾಹ್ನದ ನಂತರ ನಿಮಗೆ ಕೋಪ ಹೆಚ್ಚಾಗಿ ಬಹಳ ಒರಟಾಗಿ ವರ್ತಿಸುವ ಸಾಧ್ಯತೆ ಎಚ್ಚರ
- ಇಂದು ನಿರೀಕ್ಷೆ ಮಾಡಿದ ಕೆಲವು ಕೆಲಸಗಳು ನಿಧಾನವಾಗಿ ಸಾಗುತ್ತದೆ
- ಪರಮೇಶ್ವರನನ್ನ ಪ್ರಾರ್ಥಿಸಿ
ವೃಷಭ
- ಪ್ರಬಾವಿ ವ್ಯಕ್ತಿ ಆಗಿದ್ದರೂ ನಿಮ್ಮ ಕಷ್ಟಕ್ಕೆ ಸಹಾಯ ಸಿಗಲ್ಲ
- ನಿಮ್ಮ ಸ್ನೇಹಿತರ ಸಹಾಯ ಈ ದಿನ ಸಿಗುವುದಿಲ್ಲ
- ಶಾಸ್ತ್ರೀಯ ಸಂಗೀತ ಕೇಳಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ
- ಇಂದು ಬೇರೆ ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ
- ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸದಿದ್ದರೆ ಸಂಕಷ್ಟಕ್ಕೆ ಸಿಲುಕಬಹುದು
- ಇಂದು ಕಾಲಿನ ಸಮಸ್ಯೆ ಕಾಡಬಹುದು
- ಹಳೆಯ ಸಾಲ ಅಥವಾ ಬಾಕಿ ತೀರಿಸಲು ಕೂಡಿಟ್ಟ ಹಣ ಖರ್ಚಾಗಬಹುದು
- ಇಂದು ನೌಕರರಿಗೆ ಮಧ್ಯಮ ಫಲದ ದಿನ
- ಸಾಯಿಬಾಬಾರನ್ನು ಪಾರ್ಥಿಸಿ
ಮಿಥುನ
- ನಿಮ್ಮ ಸಾಮರ್ಥ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡಬೇಡಿ
- ಬೇರೆಯವರ ಕೆಟ್ಟದೃಷ್ಟಿ ನಿಮ್ಮ ಕುಟುಂಬಕ್ಕೆ ತಗುಲದಂತೆ ಎಚ್ಚರಿಕೆ ವಹಿಸಿ
- ಬೇರೆಯವರ ದೃಷ್ಟಿ ನಿಮಗೆ ತಗುಲಬಹುದು ಜಾಗ್ರತೆ ವಹಿಸಿ
- ಒಂದೇ ಸಂದರ್ಭದಲ್ಲಿ ಎರಡೆರಡು ಕೆಲಸ ಮಾಡುವ ಅವಕಾಶ
- ಎರಡು ದೊಡ್ಡ ಕೆಲಸ ಒಂದೇ ಸಮಯದಲ್ಲಿ ನಿರ್ವಹಿಸುವ ಅವಕಾಶ
- ನಿಮ್ಮ ಪ್ರಗತಿಯ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ
- ಇಂದು ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥಿಸಿ
ಕಟಕ
- ಎಲ್ಲರಿಗೂ ಬೇಸರದ ವಾತಾವರಣ ಸೃಷ್ಟಿಯಾಗಬಹುದು ಜಾಗ್ರತೆ ವಹಿಸಿ
- ಸಮಯಕ್ಕೆ ತಕ್ಕಂತೆ ನಿಮ್ಮ ಸ್ವಭಾವ, ನಡವಳಿಕೆ ಬದಲಾಯಿಸಿಕೊಂಡರೆ ಒಳ್ಳೆಯದು
- ನಿಮಗೆ ಲಾಭದ ದಿನ ಆದರೆ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಮಹತ್ತರವಾದ ಕೆಲಸಗಳಿದ್ದರೆ ಮಧ್ಯಾಹ್ನ 3.30 ರಿಂದ 6.00 ಗಂಟೆಯೊಳಗೆ ಮುಗಿಸಿಕೊಳ್ಳಿ
- ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ
- ಅಮೃತ ಮೃತ್ಯುಂಜಯನ ಪ್ರಾರ್ಥಿಸಿ
ಸಿಂಹ
- ಯಾವುದೇ ಕಾರಣಕ್ಕೂ ಗಲಾಟೆ ಬೇಡ, ತಾಳ್ಮೆ ಪರೀಕ್ಷೆಯ ಸಮಯವಾಗಿರುತ್ತದೆ
- ನಿಮ್ಮ ಭಾವನೆಗಳಿಗೆ ಸಮಯ ಕೊಡಿ
- ಸಮಸ್ಯೆಗಳನ್ನ ನಿಧಾನವಾಗಿ ಆಲೋಚಿಸಿ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ
- ಇಂದು ಜಾಗ್ರತೆಯಿಂದ ವರ್ತಿಸಿ ಶಾಂತಿ, ಸಮಾಧಾನಗಳೇ ಈ ದಿನಕ್ಕೆ ಔಷಧಿ
- ನೀವು ಹವ್ಯಾಸವನ್ನು ವೃತ್ತಿಯಾಗಿ ಸ್ವೀಕರಿಸುವ ಸಾಧ್ಯತೆ
- ಈ ದಿನ ಸಮಸ್ಯೆಯ ದಿನವೆಂದೇ ಹೇಳಬಹುದು
- ಮಹಾಕಾಳಿಯನ್ನು ಆರಾಧಿಸಿ
ಕನ್ಯಾ
- ಹಣದ ಸಮಸ್ಯೆಗಳಿದ್ದರೆ ಈ ದಿನ ಬಗೆಹರಿಯುವ ಸಾಧ್ಯತೆ
- ಇಂದು ಬೇರೆಯವರ ಸಹಾಯ ದೊರೆಯುತ್ತದೆ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸದ ಬಗ್ಗೆ ಮನಸ್ಸಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಕಲಿತ ವಿದ್ಯೆ ಸಾಕು ಎಂಬ ಮನೋಭಾವ ಬರಬಹುದು ಗಮನವಿರಲಿ
- ನೌಕರರು ತಮ್ಮ ಕೆಲಸ ಮುಗಿಸಿ ಮನೆಯ ಕೆಲಸವನ್ನು ನಿರ್ವಹಿಸುವ ಸಂದರ್ಭ ಬರಬಹುದು
- ಇಂದು ಮಧ್ಯಾಹ್ನ ನಂತರ ಉತ್ತಮವಾದ ದಿನ
- ತಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಮೂಡುತ್ತದೆ
- ಮಾರ್ಕೆಟಿಂಗ್ ಮಾಡುವವರಿಗೆ ಲಾಭದ ದಿನ
- ಅಯ್ಯಪ್ಪ ಸ್ವಾಮಿ ಪ್ರಾರ್ಥನೆ ಮಾಡಿ
ತುಲಾ
- ಇವರಿಗೆ ಗೌರವ, ಸನ್ಮಾನ, ಪುರಸ್ಕಾರಗಳು ಸಿಗುವ ದಿನ
- ಮನೆ ಮತ್ತು ನೌಕರಿಯಲ್ಲಿ ವಿಶೇಷ ಗೌರವ, ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
- ಇಂದು ಭಾಷಾ ಪ್ರವೀಣರಿಗೆ ಶುಭ ದಿನ
- ನಿಮ್ಮ ಕೆಲಸದಲ್ಲಿ ಜಾಗ್ರತೆಯಿದ್ದರೂ ಅದನ್ನು ಸಾಬೀತು ಪಡಿಸಬೇಕಾಗುತ್ತದೆ
- ನೌಕರರಿಗೆ ಮೇಲಾಧಿಕಾರಿಗಳ ಬೆಂಬಲ ದೊರೆತು ಕೆಲಸದಲ್ಲಿ ಉತ್ಸಾಹ ಹೆಚ್ಚಾಗುವ ದಿನ
- ವೈದ್ಯಕೀಯ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳದೆ ತಮ್ಮ ವ್ಯಾಸಂಗದಲ್ಲಿ ಪರಿಶ್ರಮ ಪಡಬೇಕಾದ ದಿನ
- ನಾವು ಮಾಡದೇ ಇರುವ ತಪ್ಪಿಗೆ ಬೇಸರ ಪಡಬೇಕಾಗಬಹುದು ಜಾಗ್ರತೆ
- ಆಂಜನೇಯನನ್ನು ಪ್ರಾರ್ಥಿಸಿ
ವೃಶ್ಚಿಕ
- ಧನಾಗಮನದಿಂದ ನಿಮ್ಮ ಯೋಜನೆ ಬೇರೆ ರೂಪ ಪಡೆದುಕೊಳ್ಳಬಹುದು
- ಜಾಗದ ಖರೀದಿಯ ಬಗ್ಗೆ ಹೆಚ್ಚು ಒಲವು ತೋರಬಹುದಾದ ದಿನ
- ವ್ಯಾವಹಾರಿಕವಾಗಿ ಜರುಗುವ ಕೆಲವು ಸಂಘರ್ಷಗಳನ್ನು ಬಗೆಹರಿಸಬೇಕಾಗಬಹುದು
- ಹಲವು ವಸ್ತುಗಳ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಒಡಂಬಡಿಕೆಗಳನ್ನ ಮಾಡಿಕೊಳ್ಳುವ ಸಾಧ್ಯತೆ
- ಈ ದಿನ ತುಂಬಾ ಓಡಾಟ, ಒತ್ತಡಗಳಿರುತ್ತದೆ
- ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ
- ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಜಾಗ್ರತೆ ವಹಿಸಿ
- ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ
- ಕಾಲಭೈರವನನ್ನು ಆರಾಧನೆ ಮಾಡಿ
ಧನುಸ್
- ಅಣ್ಣ ತಮ್ಮಂದಿರೊಂದಿಗೆ ಮಾತಿನ ಘರ್ಷಣೆ ನಡೆಯಬಹುದು
- ಮನೆಯಲ್ಲಿ ಮಕ್ಕಳ ಅಭ್ಯುದಯ ಬಹಳ ಚೆನ್ನಾಗಿರುವುದರಿಂದ ತೃಪ್ತಿ ಸಿಗುತ್ತದೆ
- ಈಗಾಗಲೇ ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
- ಆಲಸ್ಯವನ್ನು ಕಡಿಮೆ ಮಾಡಿ ಚುರುಕಾಗಬೇಕಾಗುತ್ತದೆ
- ಯಾವುದೇ ಕೆಲಸಗಳನ್ನು ನಾಳೆಗೆ ಮುಂದೂಡಬೇಡಿ ನಷ್ಟ ಆಗಬಹುದು
- ತಂದೆ-ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು ಜಾಗ್ರತೆ
- ಜಗಳ ಬೇಡ ಮೌನಕ್ಕೆ ಶರಣಾಗಿ
- ಕುಲದೇವತಾ ಆರಾಧನೆ ಮಾಡಿ
ಮಕರ
- ಈ ರಾಶಿಯಲ್ಲಿ ಜನಿಸಿದವರಿಗೆ ತಂದೆ-ತಾಯಿಯವರ ಕಡೆಯಿಂದ ಶುಭ ಸುದ್ದಿ ಸಿಗಲಿದೆ
- ಇಂದು ಅವಿವಾಹಿತರಿಗೆ ಉತ್ತಮ ದಿನ
- ವಿವಾಹ ವಿಚಾರಗಳು ಕೈಗೂಡಬಹುದು
- ಮನೆಯ ವಾತಾವರಣ ಉತ್ತಮವಾಗಿರುವ ದಿನವಾಗಿದೆ
- ನೌಕರಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಆನಂದವಾಗಿ ಕಾಲ ಕಳೆಯುತ್ತೀರಿ
- ವಿದ್ಯಾರ್ಥಿಗಳು ಇಂದು ಆನಂದದಲ್ಲಿರುವ ದಿನ
- ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಈ ದಿನ ಸ್ವಲ್ಪ ತೊಂದರೆಯಾಗಬಹುದು ಜಾಗ್ರತೆ
- ಕಾರ್ತಿಕೇಯನನ್ನು ಆರಾಧಿಸಿ
ಕುಂಭ
- ಮನೆಗೆ ಅತಿಥಿಗಳ ಆಗಮನದಿಂದ ಸ್ವಲ್ಪ ಸಮಾಧಾನ ಸಿಗುತ್ತದೆ
- ದಿನಚರಿ ಸಾಯಂಕಾಲದ ವೇಳೆಗೆ ಸ್ವಲ್ಪ ಅಸ್ತವ್ಯಸ್ತವಾಗಬಹುದು
- ಚಿಕ್ಕ ಮಕ್ಕಳು ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತೆ
- ಹಣದ ವಿಚಾರದಲ್ಲಿ ಸ್ವಲ್ಪ ಚಿಂತೆಯಿರುತ್ತದೆ
- ಮಧ್ಯಾಹ್ನದ ನಂತರ ಸ್ವಲ್ಪ ಆಲಸ್ಯ ಕಾಡಬಹುದು
- ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾನಸಿಕ ಸಮಾಧಾನವಿರುವುದಿಲ್ಲ
- ಅನಿವಾರ್ಯ ಕಾರಣಗಳಿಗೆ ಸಾಲವನ್ನು ಮಾಡಬೇಕಾಗಬಹುದು
- ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ಧರ್ಮಸ್ಥಳ ಮಂಜುನಾಥನನ್ನು ಆರಾಧಿಸಿ
ಮೀನ
- ವ್ಯವಹಾರದ ದೃಷ್ಠಿಯಿಂದ ದೂರ ಪ್ರಯಾಣ ಮಾಡಬಹುದು
- ಮನೆಯವರು ನಿಮ್ಮ ಪ್ರಗತಿಯ ವಿಚಾರವನ್ನು ಕೇಳಿ ಬಹಳ ಸಂತೋಷ ಪಡುತ್ತಾರೆ
- ವಿಕಲ ಚೇತನರು ರಸ್ತೆಯಲ್ಲಿ ಹೋಗುವಾಗ ಜಾಗ್ರತೆ ವಹಿಸಿ
- ಸರಿಯಾದ ಉಪಯೋಗ ಮಾಡಿಕೊಂಡು ಲಾಭವನ್ನು ಪಡೆಯಬಹುದು
- ಮನಸ್ಸಿಗೆ ಆನಂದ ಉಂಟಾಗುವ ದಿನವಾಗಿರುತ್ತದೆ
- ಒಟ್ಟಾರೆ ಈ ದಿನ ನಿಮಗೆ ಶುಭದಿನ
- ನಿಮ್ಮ ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ನಿಮ್ಮದಾಗುತ್ತವೆ
- ಹಣ ಹೂಡಿಕೆ ಮಾಡಲು ಹೊಸ ಆಲೋಚನೆಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ
- ಈ ದಿನ ಸಂತೋಷದಿಂದ ಆರಂಭವಾಗುತ್ತದೆ
- ಪರಮೇಶ್ವರನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ