/newsfirstlive-kannada/media/media_files/2025/09/02/ranya-rao-2025-09-02-17-10-46.jpg)
ರನ್ಯಾ ರಾವ್ Photograph: (Facebook)
ಬೆಂಗಳೂರು: ಚಿನ್ನ ಕಳ್ಳಸಾಗಣೆ ಆರೋಪ ಹೊತ್ತಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ (Ranya Rao), ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಂಬಿಗಳ ಹಿಂದೆ ಮುದ್ದೆ ಮುರಿಯುತ್ತಿರುವ ರನ್ಯಾ ರಾವ್ಗೆ ಮತ್ತೊಂದು ಶಾಕ್ ಆಗಿದೆ.
ಇಂದು ಜೈಲಿಗೆ ಭೇಟಿ ನೀಡಿದ್ದ ಡಿಆರ್ಐ (Directorate of Revenue Intelligence) ಅಧಿಕಾರಿಗಳು ಅಡ್ ಜುಡಿಕೇಷನ್ ಮಾಡಿ ನೋಟಿಸ್ ನೀಡಿದ್ದಾರೆ. ಬರೋಬ್ಬರಿ 102.55 ಕೋಟಿ ರೂ. ದಂಡ ಪಾವತಿಸುವಂತೆ ಡಿಆರ್ಐ ನೋಟಿಸ್ ನೀಡಿದೆ.
ಇದನ್ನೂ ಓದಿ:ಕಿಚ್ಚ ಸುದೀಪ್ಗೆ ಪ್ರೀತಿಯಿಂದ ಮುತ್ತುಕೊಟ್ಟ ಅಭಿಮಾನಿ VIDEO
ಮಾರ್ಚ್ 4ರಂದು ಡಿಆರ್ಐ ಅಧಿಕಾರಿಗಳು ರನ್ಯಾ ರಾವ್ ತಂದಿದ್ದ ಗೋಲ್ಡ್ ಸೀಜ್ ಮಾಡಿ ಬಂಧಿಸಿದ್ದರು. ಕಳ್ಳಸಾಗಣೆ ವಸ್ತುಗಳನ್ನು ಅಧಿಕಾರಿಗಳು 6 ತಿಂಗಳಲ್ಲಿ ವಸೂಲಿ ಮಾಡಬೇಕಿತ್ತು. 127.3ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರೋದು ತನಿಖೆಯಲ್ಲಿ ದೃಢವಾಗಿದೆ. ಹೀಗಾಗಿ 102.55 ಕೋಟಿ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ತರುಣ್ ಕೊಂಡುರು ರಾಜುಗೆ 62 ಕೋಟಿ ದಂಡ
ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡಲಾಗಿದೆ. ಎ2 ಆರೋಪಿ ತರುಣ್ ಕೊಂಡುರು ರಾಜು 67.6 kg ಕಳ್ಳಸಾಗಣೆ ಧೃಡವಾಗಿದೆ. ತರುಣ್ ಕೊಂಡುರು ರಾಜುಗೆ 62 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:ಸಿನಿಮಾ ನಿರ್ದೇಶಕ ನಂದಕಿಶೋರ್ ಹಣ ವಾಪಸ್ ಕೊಡದೇ ಇದ್ದಿದ್ದಕ್ಕೆ ಸಾಲ ಕೊಟ್ಟ ಉದ್ಯಮಿಯೇ ಕಿಡ್ನ್ಯಾಪ್!
ಅದೇ ರೀತಿ ಸಾಹಿಲ್ ಜೈಲ್ ಮತ್ತು ಭರತ್ ಜೈನ್ ತಲಾ 63.61 ಕೆಜಿ ಕಳ್ಳಸಾಗಣೆ ಮಾಡಿರೋದು ದೃಢವಾಗಿದೆ. ಭರತ್ ಜೈನ್ ಹಾಗೂ ಸಾಹಿಲ್ ಜೈನ್ 53 ಕೋಟಿ ರೂಪಾಯಿ ದಂಡ ಪಾವತಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಮುಂದುವರೆಯಲಿದೆ.
ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿ ಇವತ್ತು ಹೈಕೋರ್ಟ್ನಲ್ಲಿ ಕಾಫಿಪೋಸಾ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ಗೆ 2.500 ಪುಟಗಳ ದಾಖಲೆಗಳನ್ನ ನೀಡಲಾಗಿದೆ. ಸೆಪ್ಟೆಂಬರ್ 11ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಬೆಂಗಳೂರು ಹುಡುಗಿಯರು ಡಗಾ* ಗಳು ಎಂದು ಮಲಯಾಳಂ ಸಿನಿಮಾ ಡೈಲಾಗ್‌ಗೆ ವಿರೋಧ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ