Advertisment

ಇವತ್ತು ಬಲೀಂದ್ರ ಮನೆಗೆ ಬರುವ ದಿನ.. ಹೀಗಿದೆ ನಿಮ್ಮ ರಾಶಿ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು ಆಶ್ವಯುಜ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಹಸ್ತಾ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಮೇಷ 

RASHI_BHAVISHA_MESHA

  • ಕೋಪ ಕಡಿಮೆಯಿರಲಿ ನಿಮ್ಮ ಕೆಲಸಗಳಾಗುತ್ತವೆ
  • ಮಕ್ಕಳು ಮೊಮ್ಮಕ್ಕಳು ಉತ್ತಮ ಸಾಧನೆ ಮಾಡುವುದರಿಂದ ಸಮಾಧಾನ
  • ಯಶಸ್ಸಿನ ಆಸೆಯಿರಲಿ ದುರಾಸೆ ಬೇಡ
  • ದಿನಚರಿಯಲ್ಲಿ ಬದಲಾವಣೆಯಾಗಬಹುದು
  • ಬೇರೆಯವರಿಗೋಸ್ಕರ ಕಾಯುವುದರಿಂದ ಬೇಸರ ಉಂಟಾಗಲಿದೆ
  • ಲಾಭಗಳಿಸುವ ಹಂಬಲದಲ್ಲಿ ನೈತಿಕತೆ ದೂರಮಾಡಬಾರದು
  • ವ್ಯಾವಹಾರಿಕವಾಗಿ ಬೇರೆಯವರ ಸಹಾಯ ದೊರೆಯುತ್ತದೆ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ
Advertisment

 ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೇರೆಯವರ ಬಗ್ಗೆ ಅನುಮಾನ ಬೇಡ
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ಧಾರ್ಮಿಕ ಕಾರ್ಯಗಳ ಯೋಚನೆ ಹಾಕುತ್ತೀರಿ ಆದರೆ ಕಾರ್ಯರೂಪಕ್ಕೆ ಬರುವುದಿಲ್ಲ
  • ಇಂದು ತಪ್ಪು ನಿರ್ಧಾರಗಳನ್ನು ಮಾಡಬೇಡಿ
  • ಮಕ್ಕಳ ಭವಿಷ್ಯದ ಚಿಂತೆ ಮಾಡುತ್ತೀರಿ
  • ಬಂಧುಗಳಲ್ಲಿ ಅಲ್ಪ ಪ್ರೀತಿ ಬೇಸರ ಅಗಬಹುದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

RASHI_BHAVISHA_MITHUNA

  • ವೃತ್ತಿಯಲ್ಲಿ ತೊಂದರೆಯಾಗಬಹುದು
  • ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ  ಏನನ್ನು ನಿರೀಕ್ಷಿಸಬೇಡಿ
  • ಸ್ವನಿರ್ಧಾರ ಒಳಿತು  ಕುತಂತ್ರ ಬೇಡ
  • ನಿಮ್ಮದಲ್ಲದ ವಿಚಾರ ನಿಮಗೆ ತೊಂದರೆ ಮಾಡುತ್ತದೆ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ದೊಡ್ಡ ಗಲಾಟೆಯಾಗಬಹುದು
  • ಕುಟುಂಬ ರಾಜಕಾರಣ, ಕಲಹ, ಮನಸ್ತಾಪಗಳಿರುತ್ತವೆ
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ
  • ಹಣಕಾಸಿನ ಲಾಭದ ಆಸೆಯಿಂದ ಮೋಸಹೋಗಬಹುದು
  • ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
  • ಅನಗತ್ಯ ವಿಚಾರಗಳಿಂದ ಗೊಂದಲ ನಿರಾಸೆ
  • ರಾಜಕೀಯದಲ್ಲಿ ವಿಷಯದಿಂದ ದೂರವಿದ್ದರೆ ಒಳಿತು
  • ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಅವಕಾಶವಿದೆ
  • ದತ್ತಾತ್ರೇಯರ ಆರಾಧನೆ ಮಾಡಿ
Advertisment

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನ
  • ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
  • ಸಹೋದ್ಯೋಗಿಗಳೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ
  • ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ
  • ನಿಮ್ಮ ಶಿಸ್ತು ಕಾರ್ಯವೈಖರಿಯನ್ನು ಹಾಗೇ ಉಳಿಸಿಕೊಳ್ಳಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣ
  • ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಮಾಡಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣಕ್ಕೆ ಕೊರತೆಯಿಲ್ಲ ಕೀರ್ತಿಯೂ ಇದೆ
  • ವ್ಯಾಪಾರ, ವೃತ್ತಿಯಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ
  • ಸಾಧುಗಳ  ಧಾರ್ಮಿಕ ಮುಖಂಡರ ಭೇಟಿಯಾಗಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ  ಅಲಸ್ಯಬೇಡ
  • ನಿಮ್ಮ ವರ್ತನೆ ಎಂದಿನಂತೆಯಿರಲಿ  ರಾಜಿಬೇಡ
  • ಶತ್ರುಗಳಿಂದ ವಿರೋಧಿಗಳಿಂದ ಕೆಲಸ ಹಾಳಾಗಬಹುದು
  • ನಾಗನಿಗೆ ಅಡಿಕೆ, ಹೂ ಅರ್ಪಿಸಿ

ತುಲಾ

RASHI_BHAVISHA_TULA

  • ಕುಟುಂಬ ನಿರ್ವಹಣೆಯ ಬಗ್ಗೆ ಚರ್ಚೆ ಕಲಹ ಆಗಬಹುದು
  • ನಿಮ್ಮ ಲೋಪ ದೋಷಗಳ ಅನಾವರಣಗೊಳ್ಳಬಹುದು
  • ಮಕ್ಕಳಿಂದ ಅವಮಾನ ಆಗಬಹುದು
  • ಬೇರೆಯವರನ್ನು ಅವಲಂಬಿಸಿ ಕಾರ್ಯಪ್ರವೃತ್ತರಾಗಬಾರದು
  • ಗೌರವಕ್ಕೆ ತಕ್ಕ ಕೆಲಸಮಾಡಿ ಶುಭವಿದೆ
  • ನಿಮ್ಮ ಕೆಲಸದಲ್ಲಿ ಪ್ರಮುಖ ಸ್ಥಾನವಿರುತ್ತದೆ
  • ಗಣಪತಿಗೆ ಚಂದನ ಲೇಪನ ಮಾಡಿಸಿ
Advertisment

ವೃಶ್ಚಿಕ

RASHI_BHAVISHA_VRUSHCHIKA

  • ಸ್ನೇಹಿತರ ಮಧ್ಯೆ ಅಹಂಕಾರ ಬೇಡ ಸ್ವಾಭಾವಿಕರಾಗಿರಿ
  • ಅನಗತ್ಯ ಮಾತುಬೇಡ ಹಗುರ ಅಗುತ್ತೀರಿ
  • ಅಜೀರ್ಣ ಸಮಸ್ಯೆ ಕಾಡಬಹುದು
  • ಪೂರ್ಣವಾಗಿ ಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
  • ಸ್ನೇಹಿತರಿಗೆ ಸಹಾಯ ಮಾಡಬಹುದು ನಿರೀಕ್ಷಿಸಬೇಡಿ
  • ನೌಕರಿಗೆ ಸಂಬಂಧಿಸಿದಂತೆ ವಿದೇಶದಿಂದ ವಾರ್ತೆ ಸಿಗಲಿದೆ
  • ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಧನುಸ್​

RASHI_BHAVISHA_DHANASU

  • ಹಳೆಯ ಚಿಂತೆ ಮರೆತರೆ ಅನುಕೂಲವಿದೆ
  • ಬೇರೆಯವರಿಗೆ ಸಹಾಯದ ಹಸ್ತ ಚಾಚಿ ಒಳ್ಳೆಯದು
  • ಸಾಲದ ವಿಚಾರಕ್ಕೆ ಸಿಕ್ಕಿಕೊಳ್ಳಬಹುದು
  • ಹಳೆಯ ನೆನಪುಗಳಿಂದ ಕಣ್ಣೀರು ಕಹಿ ಅನುಭವ ಆಗಬಹುದು
  • ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ
  • ಮನೆಯವರ ಯೋಗಕ್ಷೇಮ ಗಮನಿಸಿ
  • ನದೀ ತೀರದ ದೇವಾಲಯಕ್ಕೆ ಸೇವೆ ಮಾಡಿಸಿ

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತಂದೆಯವರ ಬೇಸರಕ್ಕೆ ಕಾರಣವಾಗದಿರಿ
  • ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
  • ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
  • ಬೇರೆಯವರನ್ನು ವ್ಯಂಗ್ಯ ಮಾಡದಿರಿ ಅವಮಾನ ಆಗಬಹುದು
  • ಪೋಷಕರ ಸಲಹೆಗೆ ಮಾನ್ಯತೆ ನೀಡಿ
  • ಆರ್ಥಿಕವಾಗಿ ಇರುವ ಸಮಸ್ಯೆಗಳಿಗೆ ಪರಿಹಾರವಿಲ್ಲ
  • ಶನೈಶ್ಚರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ
Advertisment

ಕುಂಭ 

RASHI_BHAVISHA_KUMBHA

  • ಪ್ರಮುಖ ಕೆಲಸಗಳಿಗೆ ಅಡಚಣೆಯಾಗಬಹುದು ಗಮನಿಸಿ
  • ಪ್ರೇಮಿಗಳಿಗೆ ದೊಡ್ಡ ಸಮಸ್ಯೆ ಕಾದಿದೆ
  • ಷೇರು ಹೊಡಿಕೆಗಳನ್ನು ಪ್ರಾರಂಭಿಸಬಹುದು
  • ಅಹಂಭಾವ, ಅತೀವ ಸಂತೋಷ ಬೇಡ ನಿರಾಸೆಯಾಗಬಹುದು
  • ಮನೆಗೆ ಹೊಸ ಅತಿಥಿಯ ಆಗಮನ ಸೂಚನೆ
  • ಮನೆಯ ಖರ್ಚನ್ನು ನಿಯಂತ್ರಿಸಿ
  • ಮೈಲಾರಲಿಂಗೇಶ್ವರನನ್ನು ಪ್ರಾರ್ಥನೆ ಮಾಡಿ

 ಮೀನ

RASHI_BHAVISHA_MEENA

  • ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯಿದೆ
  • ಮಾನಸಿಕ ಗೊಂದಲಗಳು ದೂರವಾಗುತ್ತದೆ
  • ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಬಹುದು
  • ತಂತ್ರಜ್ಞಾನದ ವಿಚಾರಕ್ಕೆ ಹಣ ಖರ್ಚಾಗಲಿದೆ
  • ಮನೆ ಬದಲಾವಣೆ ಯೋಚನೆ ಬೇಡ
  • ಹೊಸ ಕೆಲಸ ಆರಂಭಿಸಲು ಸೂಕ್ತಕಾಲ
  • ಕುಲದೇವತಾ ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಗಿಲ್ಲಿ ಹಾಗೂ ಕಾವ್ಯಾಗೆ ಸುದೀಪ್​ ಏನಂದ್ರು ಗೊತ್ತಾ..? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment