/newsfirstlive-kannada/media/post_attachments/wp-content/uploads/2024/09/Chennai.jpg)
ಲಿಪ್​​ಸ್ಟಿಕ್ ಹಚ್ಚಬಾರದು ಎಂಬ ನಿಯಮ ಉಲ್ಲಂಘಿಸಿದ್ದ ಕಾರಣ ಚೆನ್ನೈ ಕಾರ್ಪೋರೇಷನ್​ನ ಪ್ರಥಮ ಮಹಿಳಾ ದಫೇದಾರ್​​ ಅವರನ್ನು ವರ್ಗಾಯಿಸಿದ ಘಟನೆ ನಡೆದಿದೆ. ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್​ಸ್ಟಿಕ್​ ಹಚ್ಚಬಾರದು ಎಂಬ ನಿಯಮವನ್ನು ಉಲ್ಲಂಘಿಸಿದ ಕಾರಣ ವರ್ಗಾವಣೆ ಮಾಡಲಾಗಿದೆ.
50 ವರ್ಷ ವಯಸ್ಸಿನ ಎಸ್​.ಬಿ ಮಾಧವಿ ಅವರು ವರ್ಗಾವಣೆಗೊಂಡವರು. ಮೇಯರ್​ ಪರಿವಾರದ ಭಾಗವಾಗಿದ್ದ ಇವರು ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್​​ಸ್ಟಿಕ್​ ಧರಿಸಬಾರದು ಎಂಬ ನಿಯಮ ಉಲ್ಲಂಘಿಸಿ ಶಿಕ್ಷೆಗೆ ಒಳಗಾಗಿದ್ದಾರೆ.
ಮೇಯರ್​​ ಆರ್​ ಪ್ರಿಯಾ ಅವರ ಆಪ್ತ ಸಹಾಯಕ ಶಿವಶಂಕರ್​​ ಇದರ ಕುರಿತು ಅವರ ಬಳಿ ಪ್ರಶ್ನಿಸಿದ್ದರು. ಇದಕ್ಕೆ ಎಸ್​.ಬಿ ಮಾಧವಿಯವರು ಸಮರ್ಥನೆ ನೀಡಿದ ಬೆನ್ನಲ್ಲೇ ವರ್ಗಾಯಿಸಲಾಗಿದೆ.
ಆಗಸ್ಟ್​ 6 ರಂದು ಎಸ್​.ಬಿ ಮಾಧವಿಯವರಿಗೆ ಈ ಕುರಿತು ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು ‘ನೀವು ನನಗೆ ಲಿಪ್​ಸ್ಟಿಕ್​ ಹಚ್ಚಬಾರದು ಎಂದು ಸೂಚಿಸಿದ್ದೀರಿ. ಆದರೆ ನಾನು ಹಚ್ಚಿದ್ದೇನೆ. ಇದು ಅಪರಾಧವಾದರೆ ಲಿಪ್​ ಸ್ಟಿಕ್​ ಹಚ್ಚುಬಾರದು ಎಂದು ನಿಷೇಧಿಸುವ ಸರ್ಕಾರದ ಆದೇಶವನ್ನು ತೋರಿಸಿ’ ಎಂದು ಹೇಳಿದ್ದರು.
ಇದನ್ನೂ ಓದಿ: ಎಲಾನ್​ ಮಸ್ಕ್ ಪ್ರೀತಿಗೆ ಬಿದ್ರಾ ಜಾರ್ಜಿಯಾ ಮೆಲೋನಿ? ಇಟಲಿ ಪ್ರಧಾನಿಯನ್ನು ಗುಣಗಾನ ಮಾಡಿದ ಎಂದ ಟೆಸ್ಲಾ ಸಿಇಓ
‘ಇಂತಹ ಹಕ್ಕುಗಳು ಮಾನವ ಹಕ್ಕು ಉಲ್ಲಂಘನೆ. ನಾನು ನ್ನ ಕರ್ತವ್ಯದ ಅವಧಿಯಲ್ಲಿ ಕೆಲಸ ಮಾಡದಿದ್ದರೆ ಈ ನೋಟಿಸ್​ ಮಾನ್ಯವಾಗುತ್ತದೆ’ ಎಂದು ಎಸ್​.ಬಿ ಮಾಧವಿ ಹೇಳಿದ್ದಾರೆ.
ಸದ್ಯ ಎಸ್​.ಬಿ ಮಾಧವಿಯವರನ್ನು ಕೆಲಸ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು, ಮೇಲಾಧಿಕಾರಿಗಳ ಅವಿಧೇಯತೆ ತೋರುವುದು ಮುಂತಾದ ಕಾರಣವನ್ನು ನೀಡಿ ಎಸ್​.ಬಿ ಮಾಧವಿಯವರಿಗೆ ನೋಟಿಸ್​ ಕೊಡಲಾಗಿದೆ. ಮಾತ್ರವಲ್ಲದೆ, ಮನಾಲಿ ವಲಯಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us