ಕೊಲೆ ಕೇಸ್‌ವೊಂದರಲ್ಲಿ ಕೇಳಿಬಂದ ಹೆಸರು
30ನೇ ಆರೋಪಿಯಾಗಿ ತಾಲೂಕು ಅಧ್ಯಕ್ಷನ ಹೆಸರು
ವಿಸ್ತೃತ ವರದಿ ಪ್ರಸಾರ ಮಾಡಿದ ನ್ಯೂಸ್ಫಸ್ಟ್ ಕನ್ನಡ
ನ್ಯೂಸ್ಫಸ್ಟ್ ವಿಸ್ತೃತ ವರದಿ ಪ್ರಸಾರ ಮಾಡಿದ್ದ ಬೆನ್ನಲ್ಲೇ ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷನನ್ನು ವಜಾ ಮಾಡಲಾಗಿದೆ. ಎಂ.ಬಿ.ಕುಮಾರ್ ಎಂಬವರನ್ನು ಶ್ರೀರಂಗಪಟ್ಟಣ ಕಸಾಪ ತಾಲೂಕು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
2015ರ ಕೊಲೆ ಕೇಸ್‌ವೊಂದರಲ್ಲಿ 30ನೇ ಆರೋಪಿಯಾಗಿ ಎಂ.ಬಿ.ಕುಮಾರ್ ಹೆಸರು ಕೇಳಿಬಂದಿತ್ತು. ಶ್ರೀರಂಗಪಟ್ಟಣ ಕೈ ಶಾಸಕನ ಶಿಫಾರಸ್ಸಿಗೆ ಮಣಿದು ಕಸಾಪ ತಾಲೂಕು ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಶಾಸಕ ರಮೇಶ್ ಬಂಡಿಸಿದ್ದೇಗೌಡ ಖುದ್ದು ಪತ್ರ ಬರೆದು ತನ್ನ ಬಂಟನಿಗೆ ತಾಲೂಕು ಅಧ್ಯಕ್ಷ ಪಟ್ಟ ಕೊಡಿಸಿದ್ದರು.
ಇತ್ತ ಕೊಲೆ ಆರೋಪಿಗೆ ಅಧ್ಯಕ್ಷ ಸ್ಥಾನ ನೀಡಿದ ವಿಚಾರ ತಿಳಿದುಬಂದಂತೆ ನ್ಯೂಸ್ಫಸ್ಟ್ ವಿಸ್ತೃತ ವರದಿ ಪ್ರಸಾರ ಮಾಡಿದೆ. ವರದಿಯ ಬೆನ್ನಲ್ಲೇ ಇದೀಗ ರಾಜ್ಯಾಧ್ಯಕ್ಷರಿಂದ ತಾಲೂಕು ಅಧ್ಯಕ್ಷನನ್ನು ವಜಾಗೊಳಿಸಿ ಎಂಬ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರೇ.. ಇಂದು ಬಹುತೇಕ ಕಡೆ ಕರೆಂಟ್ ಇರಲ್ಲ! ಯಾಕಂದ್ರೆ..
ಕಸಾಪ ಬೈಲಾದಲ್ಲಿ ಕ್ರಿಮಿನಲ್ ಪ್ರಕರಣವಿದ್ದರೆ ಸ್ಥಾನಮಾನ ಕೊಡುವಂತಿಲ್ಲ. ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ವೇಳೆಯೂ ತನ್ನ ಮೇಲೆ ಯಾವುದೇ ಕೇಸ್ ಇಲ್ಲ ಎಂದು ಎಂ.ಬಿ.ಕುಮಾರ್ ಹೇಳಿದ್ದರು. ಆದರೂ ಶಾಸಕನ ಒತ್ತಾಯಕ್ಕೆ ಮಣಿದು ತಾಲೂಕು ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕೊಂ*ದು 1,405km ಸಂಚರಿಸಿದ.. ಸ್ಮಶಾನದ ಬಳಿಯೇ ನೇಣಿಗೆ ಶರಣಾದ ಕಿಲ್ಲ*ರ್
ನ್ಯೂಸ್ ಫಸ್ಟ್ ವರದಿ ಬೆನ್ನಲ್ಲೇ ಕುಮಾರ್ ಕೊಲೆ ಆರೋಪಿಯಾಗಿರೊದು ಕಸಾಪ ಖಚಿತ ಪಡಿಸಿಕೊಂಡಿದೆ. ಕಸಾಪ ರಾಜ್ಯಾಧ್ಯಕ್ಷರಾಗಿರುವ ಮಹೇಶ್ ಜ್ಯೋಷಿಯವರು ಕುಮಾರ್‌ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದಾರೆ. ಇದೀಗ ಸಿದ್ದಲಿಂಗಯ್ಯರವರು ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ