newsfirstkannada.com

BREAKING: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Share :

Published June 2, 2024 at 4:37pm

Update June 2, 2024 at 5:58pm

  ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಚುನಾವಣೆ

  ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ 7 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

  ಇದೇ ಜೂನ್ 13ಕ್ಕೆ ವಿಧಾನಪರಿಷತ್ ಚುನಾವಣೆಗೆ ಮತದಾನ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದೇ ಜೂನ್ 13ಕ್ಕೆ ಮತದಾನ ನಡೆಯಲಿದ್ದು, ಎಂಎಲ್‌ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 03 ಅಂದ್ರೆ ನಾಳೆಯೇ ಕೊನೆಯ ದಿನವಾಗಿದೆ.

ಇದನ್ನೂ ಓದಿ: BREAKING: ವಿಧಾನಪರಿಷತ್ ಚುನಾವಣೆ: ಮೂರು ಸ್ಥಾನಕ್ಕೆ BJP ಟಿಕೆಟ್ ಘೋಷಣೆ; ಯಾರಿಗೆ ಬಂಪರ್‌? 

ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

 1. ಎನ್.ಎಸ್ ಬೋಸರಾಜು
 2. ವಸಂತ ಕುಮಾರ್
 3. ಡಾ. ಯತಿಂದ್ರ ಸಿದ್ದರಾಮಯ್ಯ
 4. ಕೆ. ಗೋವಿಂದ ರಾಜು
 5. ಐವಾನ್ ಡಿಸೋಜ
 6. ಬಲ್ಕಿಸ್ ಬಾನು
 7. ಜಗದೇವ್ ಗುತ್ತೇದಾರ್

ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ 7 ಪರಿಷತ್ ಸದಸ್ಯ ಸ್ಥಾನವನ್ನು ಗೆಲ್ಲಬಹುದಾಗಿದೆ. ಹೀಗಾಗಿ ವಿಧಾನಪರಿಷತ್ ಚುನಾವಣೆಗೆ 7 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: MLC Election: ಸಿಎಂ ಪುತ್ರನಿಗೆ ಬಂಪರ್‌.. S.R ಪಾಟೀಲ್‌ಗೆ ಬಿಗ್ ಶಾಕ್‌; ಕಾಂಗ್ರೆಸ್ ಅಸಲಿ ಲೆಕ್ಕಾಚಾರವೇನು? 

ಎಂಎಲ್‌ಸಿ ಚುನಾವಣೆಗೆ ಟಿಕೆಟ್ ಪಡೆಯಲು ಕಾಂಗ್ರೆಸ್‌ನ ನೂರಾರು ನಾಯಕರು ಸಾಕಷ್ಟು ಸರ್ಕಸ್ ಮಾಡಿದ್ದರು. ಎಲ್ಲಾ ಮಾನದಂಡಗಳನ್ನು ತಾಳೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಭ್ಯರ್ಥಿಗಳ ಅಂತಿಮಗೊಳಿಸಿ ಇಂದು ಪ್ರಕಟ ಮಾಡಿದೆ.

ಕಾಂಗ್ರೆಸ್‌ ಜಾತಿವಾರು ಲೆಕ್ಕಾಚಾರ

 1. ಯತೀಂದ್ರ ಸಿದ್ದರಾಮಯ್ಯ (ಕುರುಬ)
 2. ಗೋವಿಂದರಾಜು (ಒಕ್ಕಲಿಗ)
 3. ಐವಾನ್ ಡಿಸೋಜ (ಕ್ರಿಶ್ಚಿಯನ್)
 4. ಬಿಲ್ಕಿಸ್ ಬಾನು (ಮುಸ್ಲಿಂ)
 5. ಬೋಸರಾಜು (ಕ್ಷತ್ರಿಯ)
 6. ಜಗದೇವ ಗುತ್ತೇದಾರ್ (ಈಡಿಗ)
 7. ವಸಂತ ಕುಮಾರ್ (ಎಸ್‌ಸಿ)

ಈ ಜಾತಿವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿದೆ. 7 ಸ್ಥಾನಗಳ ಪೈಕಿ ಹಿಂದುಳಿದ ವರ್ಗದ ಮೂವರಿಗೆ ಕಾಂಗ್ರೆಸ್ ಹೈಕಮಾಂಡ್‌ ಮಣೆ ಹಾಕಿದೆ. ಯತೀಂದ್ರ ಸಿದ್ದರಾಮಯ್ಯ (ಕುರುಬ), ಭೋಸ್ ರಾಜ್ (ಕ್ಷತ್ರಿಯ) ಹಾಗೂ ಜಗದೇವ್ ಗುತ್ತೇದಾರ್‌ಗೆ (ಈಡಿಗ) ಅವಕಾಶ ನೀಡಲಾಗಿದೆ.

ಕಾಂಗ್ರೆಸ್‌ ಹೈಕಮಾಂಡ್ ಪಾರುಪತ್ಯ!
ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾರುಪತ್ಯ ಮೆರೆದಿದ್ದು, ಕಲ್ಯಾಣ ಕರ್ನಾಟಕಕ್ಕೆ ಈ ಬಾರಿ ಬಂಪರ್ ಲಾಟರಿ ಎನ್ನಬಹುದು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೋಟಾದಡಿಯಲ್ಲಿ ವಸಂತ ಕುಮಾರ್, ಜಗದೇವ್ ಗುತ್ತೇದಾರ್ ಅವರು ಆಯ್ಕೆಯಾಗಿದ್ದಾರೆ.

ಹೈಕಮಾಂಡ್ ಕೋಟಾದಲ್ಲಿ ಎನ್.ಎಸ್ ಬೋಸರಾಜು ಅವರಿಗೆ ಟಿಕೆಟ್ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಕೋಟಾದಲ್ಲಿ ಯತೀಂದ್ರ ಸಿದ್ದರಾಮಯ್ಯ, ಗೋವಿಂದರಾಜು, ಐವಾನ್ ಡಿಸೋಜ ಅವರ ಹೆಸರು ಪ್ರಕಟವಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕೋಟಾದಲ್ಲಿ ಬಸವನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಮಹಿಳಾ ಕೋಟಾದಲ್ಲಿ ಈ ಬಾರಿ ಅಚ್ಚರಿ ಅಭ್ಯರ್ಥಿಯಾಗಿ ಶಿವಮೊಗ್ಗ ಜಿಲ್ಲೆಯವರಾದ ಬಲ್ಕಿಸ್ ಬಾನು ಅವರಿಗೆ ಟಿಕೆಟ್ ನೀಡಲಾಗಿದೆ.

ಎಸ್.ಆರ್ ಪಾಟೀಲ್‌ಗೆ ಬಿಗ್‌ ಶಾಕ್‌!
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್‌.ಆರ್ ಪಾಟೀಲ್ ಅವರು ಈ ಬಾರಿ ವಿಧಾನಪರಿಷತ್ ಚುನಾವಣೆಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಎಸ್.ಆರ್ ಪಾಟೀಲ್‌ ಅವರಿಗೆ ಕೈ ಕೊಟ್ಟು ಬಿಗ್ ಶಾಕ್ ಕೊಟ್ಟಿದೆ. ಪರಿಷತ್ ಚುನಾವಣೆಗಾಗಿ ಎಸ್‌.ಆರ್. ಪಾಟೀಲ್ ಅವರು ಸ್ವಾಮೀಜಿ ‌ಮೂಲಕ‌ ಲಾಬಿ ಮಾಡಿದ್ದರು. ಆದರೂ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿಲ್ಲ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬ ಲಿಂಗಾಯತ ನಾಯಕರಿಗೆ ಸ್ಥಾನ ನೀಡಲಾಗಿದೆ. ಎಸ್.ಆರ್ ಪಾಟೀಲ್ ಬದಲಿಗೆ ಬಸವನಗೌಡ ಬಾದರ್ಲಿ ಅವಕಾಶ ನೀಡಿದೆ.

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಲಿಂಗಾಯತ ಸಮುದಾಯ ಬಸವನಗೌಡ ಬಾದರ್ಲಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

https://newsfirstlive.com/wp-content/uploads/2024/06/Congress-MLC-Election-List.jpg

Load More