newsfirstkannada.com

ಶಾಲೆ ಪಕ್ಕದ ಮದ್ಯದಂಗಡಿ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ LKG ವಿದ್ಯಾರ್ಥಿ; ಆಮೇಲೇನಾಯ್ತು?

Share :

Published May 9, 2024 at 6:23pm

  ಎಲ್​ಕೆಜಿ ವಿದ್ಯಾರ್ಥಿಯ ಕಾನೂನು ಹೋರಾಟಕ್ಕೆ ಬಂದ್ ಆಯ್ತು ಅಂಗಡಿ

  ವಿದ್ಯಾರ್ಥಿ ನೀಡಿದ ಮನವಿಗೆ ಹೈಕೋರ್ಟ್​ನಿಂದ ಮಹತ್ವದ​ ಆದೇಶ

  ಮದ್ಯದಂಗಡಿ ಲೈಸೆನ್ಸ್‌ ಅಪ್‌ಡೇಟ್ ಮಾಡುವುದರಲ್ಲಿ ನಡೆದಿತ್ತು ಅಕ್ರಮ

ಲಕ್ನೋ: ಶಾಲೆಯ ಬಳಿಯಿದ್ದ ಮದ್ಯದಂಗಡಿ ತೆಗೆದು ಹಾಕುವಂತೆ LKG ವಿದ್ಯಾರ್ಥಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ ಘಟನೆ ಕಾನ್ಸುರದ ಆಜಾದ್ ನಗರದಲ್ಲಿರುವ ಎಂಆರ್ ಜೈಪುರಿಯಾದಲ್ಲಿ ನಡೆದಿದೆ.

ಹೌದು, ಅಥರ್ವ ಎಂಬ 5 ವರ್ಷದ ವಿದ್ಯಾರ್ಥಿಯೊಬ್ಬ ನಮ್ಮ ಶಾಲೆಯ ಹತ್ತಿರ ಇರುವ ಮದ್ಯದಂಗಡಿಯನ್ನು ತೆರವು ಮಾಡುವಂತೆ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಅಥರ್ವ ಸಲ್ಲಿಸಿದ ಮನವಿಯ ಮೇರೆಗೆ ಅಲಹಾಬಾದ್ ಹೈಕೋರ್ಟ್ ಕಾನ್ಸುರದ ಆಜಾದ್ ನಗರದಲ್ಲಿರುವ ಎಂಆರ್ ಜೈಪುರಿಯಾ ಶಾಲೆಯ ಬಳಿ 30 ವರ್ಷಗಳಿಂದ ನಡೆಸುತ್ತಿದ್ದ ಮದ್ಯದಂಗಡಿ ಲೈಸೆನ್ಸ್‌ ಅಪ್‌ಡೇಟ್ ಮಾಡುವುದನ್ನು ಬ್ಯಾನ್ ಮಾಡಿದೆ.

ಇದನ್ನೂ ಓದಿ: ಫೇಲ್​ ಆದ SSLC ವಿದ್ಯಾರ್ಥಿಗಳ ಗಮನಕ್ಕೆ.. ಮರು ಪರೀಕ್ಷೆ ದಿನಾಂಕ ಪ್ರಕಟ.. ವಿಷಯ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ

ಇನ್ನು, ಎಲ್‌ಕೆಜಿ ಓದುತ್ತಿರುವ ಐದು ವರ್ಷದ ವಿದ್ಯಾರ್ಥಿಯ ಪರವಾಗಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ವಿಕಾಸ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಶಾಲೆಯ ಬಳಿ ನಡೆಯುತ್ತಿರುವ 30 ವರ್ಷಗಳಷ್ಟು ಹಳೆಯದಾದ ಮದ್ಯದಂಗಡಿ ತೆಗೆಯುವಂತೆ ಆಗ್ರಹಿಸಿ ಅಥರ್ವ ಅವರು ಹೈಕೋರ್ಟ್ ಮೆಟ್ಟಿಲೇರಿದ್ದ. ಶಾಲೆಯಿಂದ ಮೂವತ್ತು ಮೀಟರ್‌ಗಿಂತ ಕಡಿಮೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ಯದಂಗಡಿಗಳಿಗೆ ಬರುವ ಜನರು ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಇದರಿಂದ ಓದುವುದಕ್ಕೆ ತೊಂದರೆ, ಭಯದ ವಾತಾವರಣವೂ ಇದೆ ಅಂತ ಪತ್ರದಲ್ಲಿ ಉಲೇಖಿಸಲಾಗಿತ್ತು.

ಈ ಕೇಸ್​ ಅನ್ನು ಗಂಭೀರವಾಗಿ ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್, ಶಾಲೆ ಮುಂದೆ ಮದ್ಯದಂಗಡಿ ತೆರೆದು ಮೂವತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಪ್ರತಿ ವರ್ಷ ಲೈಸೆನ್ಸ್‌ ಸಂದರ್ಭದಲ್ಲಿ ನೀಡುವ ಪ್ರಮಾಣ ಪತ್ರದಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ದೇವಸ್ಥಾನ, ಆಸ್ಪತ್ರೆ ಮತ್ತು ಶಾಲೆ ಇಲ್ಲ ಎಂಬುದನ್ನು ಬಹಿರಂಗಪಡಿಸಬೇಕು. ಪ್ರಸ್ತುತ ಪ್ರಕರಣದಲ್ಲಿ 2019ರಲ್ಲಿ ಶಾಲೆ ಸ್ಥಾಪನೆಯಾಗುವ ಬಗ್ಗೆ ಗೊತ್ತಿದ್ದರೂ ಅಂಗಡಿ ಲೈಸೆನ್ಸ್‌ ಅಪ್‌ಡೇಟ್ ಮಾಡಿರುವುದು ಅಕ್ರಮವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಮುಂದಿನ ಆರ್ಥಿಕ ವರ್ಷ 2025 ರಿಂದ 2026 ರವರೆಗೆ ಶಾಲೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಯ ಲೈಸೆನ್ಸ್ ಅನ್ನು ನಿಷೇಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಶಾಲೆ ಪಕ್ಕದ ಮದ್ಯದಂಗಡಿ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ LKG ವಿದ್ಯಾರ್ಥಿ; ಆಮೇಲೇನಾಯ್ತು?

https://newsfirstlive.com/wp-content/uploads/2024/05/lkg-boy1.jpg

Load More