newsfirstkannada.com

×

ಮೈಸೂರಿನ ಮಹಾರಾಜ ಯಾರು..? ಯದುವೀರ್​​ ಒಡೆಯರ್​​ ವಿರುದ್ಧ ಪ್ರತಾಪ್​ ಸಿಂಹ ಘರ್ಜನೆ

Share :

Published March 12, 2024 at 8:55pm

Update March 12, 2024 at 8:48pm

    ಮೈಸೂರು ರಾಜ ಯದುವಿರ್​ರನ್ನ ಇಕ್ಕಟಿಗೆ ಸಿಲುಕಿಸಿದ ಆ ಪ್ರಶ್ನೆಗಳು

    ಗಾಯಗೊಂಡ ಪ್ರತಾಪ್ ಸಿಂಹ ಚದುರಂಗದ ದಾಳ ಉರುಳಿಸಿದ್ದಾರೆ

    ರಾಜಮನೆತನದ 2 ಸಾವಿರ ಎಕರೆ ಪ್ರದೇಶ ಸರ್ಕಾರಕ್ಕೆ ಸಿಗುತ್ತದೆಯೇ?

ಪ್ರತಾಪ್ ಸಿಂಹ.. ಫೈರ್ ಬ್ರ್ಯಾಂಡ್.. ರಾಜೀಯಿಲ್ಲದ ಮಾತಿನಿಂದ ಮೋದಿ ಮೇಲಿನ ಪ್ರೀತಿಯಿಂದ ಗುರುತಿಸಿಕೊಂಡಿದ್ದ ಜನಪ್ರಿಯ ನಾಯಕ. ಆದ್ರೆ, ಈ ಬಾರಿ ಮೈಸೂರು ಯುದ್ಧದಲ್ಲಿ ಹ್ಯಾಟ್ರಿಕ್ ಕನಸು ಕಂಡಿದ್ದ ಪ್ರತಾಪ್ ಸಿಂಹಗೆ ಶಾಕ್ ಎದುರಾಗಿದೆ. ಈ ಶಾಕ್​ ನಡುವೆ ಪ್ರತಾಪ್ ಸಿಂಹ ಎತ್ತಿರುವ ಕೆಲ ಪ್ರಶ್ನೆಗಳು ಮೈಸೂರು ರಾಜ ಯದುವಿರ್​ಗೆ ಇಕ್ಕಟಿಗೆ ಸಿಲುಕಿಸಿಬಿಟ್ಟಿದೆ.

ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿದೆ. ಒಂದೊಂದು ಮಾತು ಬೆಂಕಿಯುಂಡೆಯಂತೆ ಜ್ವಲಿಸುತ್ತಿವೆ. ಸದಾ ಎದುರಾಳಿ ನಾಯಕರಿಗೆ ಮಾತಿನಲ್ಲೇ ತಿವಿಯುತ್ತಿದ್ದ ಪ್ರತಾಪ್ ಸಿಂಹ ಭಾವಕರಾಗಿದ್ದರು. ಟಿಕೆಟ್​ ಕೈ ತಪ್ಪೋ ವಿಚಾರ ಎಲ್ಲೆಡೆ ಸದ್ದು ಮಾಡ್ತಿದ್ದಂತೆ, ಪ್ರತಾಪ್ ಸಿಂಹ ಮನದಾಳದ ಮಾತುಗಳನ್ನ ಹಂಚಿಕೊಂಡರು. ಆದ್ರೀಗ ಗಾಯಗೊಂಡ ಸಿಂಹ ಮೈಸೂರು ಮಹರಾಜ ಯದವೀರ್​ರ ವಿರುದ್ಧ ಚದುರಂಗದ ದಾಳ ಉರುಳಿಸಿದ್ದಾರೆ. ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ಗೂ ಮಾತಿನ ಚಾಟಿ ಬೀಸಿದ್ದಾರೆ.

ಕೇಂದ್ರದ, ರಾಜ್ಯದ ನಾಯಕರು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್​ಗೆ ಟಕ್ಕರ್ ಕೊಡುವಂತ ನಾಯಕ ನಾನೊಬ್ಬನೇ ಇರೋದು ಎಂಬುದು ಅವರಿಗೆ ಗೊತ್ತು. ನನಗೆ ತೊಂದರೆ ಕೊಡಲು ಸಾಧ್ಯವಿಲ್ಲ. ಅವರ ಮೇಲೆ ವಿಶ್ವಾಸವಿದೆ. ಏನೇನು ಕೆಲಸ ಮಾಡಬೇಕು ಅದನೆಲ್ಲ ಮಾಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಕಾರ್ಯಕರ್ತರು ಪಕ್ಷದ ಬಾವುಟ ಕಟ್ಟಿ ಪ್ರಚಾರ ಮಾಡಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರು ನಾನು ಸ್ವಾಗತ ಮಾಡುತ್ತೇನೆ.

ಪ್ರತಾಪ್ ಸಿಂಹ, ಸಂಸದ

ರಾಜರು ವೈಭೋಗ ಬಿಟ್ಟು ಬರ್ತಾರೆ ಅಂದ್ರೆ ಸ್ವಾಗತ!

ಕಳೆದ ನಾಲ್ಕೈದು ದಿನಗಳಿಂದ ಟಿಕೆಟ್ ಮಿಸ್ ಆಗುತ್ತೆ ಅನ್ನೋ ವಿಚಾರ ಪ್ರತಾಪ್ ಸಿಂಹಗೆ ದೊಡ್ಡ ತಲೆನೋವು ತಂದಿಟ್ಟಿತ್ತು. ಚಾಮುಂಡೇಶ್ವರಿ ಆಶಿರ್ವಾದವಿದೆ. ಜನರ ಪ್ರೀತಿ ಇದೆ ಅಂತ ಹೇಳ್ತಿದ್ದ ಪ್ರತಾಪ್ ಸಿಂಹ ಈಗ ಯದುವೀರ್​ಗೆ ಮಾತಲ್ಲೇ ಟಾಂಗ್ ಕೊಟ್ಟಿದ್ದಾರೆ. ಯದುವೀರ್​ಗೆ ಟಿಕೆಟ್​ ಕೊಡುವುದು ನಿಜವಾದ್ರೆ ಅದನ್ನು ಸ್ವಾಗತಿಸುತ್ತೇನೆ ಅಂತ ಹೇಳುತ್ತಲೇ ಯದುವೀರ್​​ರನ್ನ ಸಿಂಹ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಯದುವೀರ್ ಅವರಿಗೆ ಟಿಕೆಟ್​ ಕೊಟ್ಟರೇ ನನಗೆ ಖುಷಿ. ಅರಮನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ ರಾಜ ಪ್ರಜೆಗಳ ಜೊತೆ ಪ್ರಜೆಯಾಗಿ ಬದುಕುತ್ತೇನೆ ಎಂದು ಬರುತ್ತೇನೆ ಎಂದರೆ ಖುಷಿ ಪಡಬೇಕು. ಸ್ವಾತಂತ್ರ್ಯ ಬಂದಿದ್ದರಿಂದ ರಾಜ-ಪ್ರಜೆ ಇಲ್ಲಿ ವ್ಯತ್ಯಾಸ ಇಲ್ಲ. ಯದುವೀರ್ ಬರುವುದರಿಂದ ಸಾಕಷ್ಟು ಲಾಭವಿದೆ. ಅರಮನೆಯವರು ಸರ್ಕಾರದ ವಿರುದ್ಧ 2 ಸಾವಿರ ಎಕರೆ ಭೂಮಿ ಬಗ್ಗೆ ಕೇಸ್ ಹಾಕಿದ್ದಾರೆ. ಪ್ರಜೆಗಳ ಜೊತೆ ಬದುಕಲು ಬಂದಾದ್ಮೇಲೆ ಅವರ ದತ್ತು ಪುತ್ರನಾಗಿ ಆಸ್ತಿನೂ ಬೇಕು, ಇನ್ನೊಂದು ಕಡೆ ಪ್ರಜೆಗಳಿಗೆ ಸೇರಬೇಕಾದ ಆಸ್ತಿಯು ಬೇಕು ಅಂತ ಹೇಳುವುದಕ್ಕೆ ಆಗಲ್ಲ. ಹಾಗಾಗಿ ಪ್ರಜೆಗಳ ಪರವಾಗಿ ಇರಬೇಕಾಗುತ್ತದೆ.

ಪ್ರತಾಪ್ ಸಿಂಹ, ಸಂಸದ

ಸರ್ಕಾರದ ವ್ಯಾಜ್ಯ ಬಗೆಹರಿಯುತ್ತೆ.. ಪ್ರತಾಪ್ ಸಿಂಹ ಚೆಕ್​ಮೆಟ್​!

ಯದುವೀರ್ ರಾಜಕೀಯಕ್ಕೆ ಬಂದ್ಮೇಲೆ ಪ್ರಜೆಗಳ ಪರವಾಗಿ ಇರಬೇಕಾಗುತ್ತೆ ಎಂದಿರುವ ಸಿಂಹ ಅರಮನೆ ಮತ್ತು ಸರ್ಕಾರದ ನಡುವಿನ ವ್ಯಾಜ್ಯ ಬಗೆಹರಿಯುತ್ತೆ. ಇಷ್ಟು ಮಾತ್ರವಲ್ಲ, ಮೈಸೂರಿನ ಲಲಿತ ಮಹಲ್ ಅರಮನೆ ಸಮೀಪದ ಹೆಲಿಪ್ಯಾಡ್ ಜಾಗ, ವಿಜಯಶ್ರೀಪುರದ ಮನೆಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗ ಸೇರಿ ಸುಮಾರು 2 ಸಾವಿರ ಎಕರೆ ಪ್ರದೇಶ ಸರ್ಕಾರಕ್ಕೆ ಸಿಗುತ್ತೆ ಅಂತ ಹೇಳೋ ಮೂಲಕ ಯದುವೀರ್​​​ಗೆ ಪ್ರತಾಪ್ ಸಿಂಹ ಚೆಕ್​ಮೇಟ್ ಕೊಟ್ಟಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ದೇವಿಕೆರೆ ಬಗ್ಗೆ ತಕರಾರು ಎತ್ತಿದ್ದಾರೆ. ದೇವಿಕೆರೆ ದೇವರಿಗೆ ಸಲ್ಲುತ್ತದೆ. ಎಕ್ಸುಬಿಷನ್ ಗ್ರೌಂಡ್ ನಮ್ಮದೇ ಅಂತ ತಕರಾರು ಎತ್ತಿ ಅದಕ್ಕೂ ಕೋರ್ಟ್​​ಗೆ ಕೇಸ್ ಹಾಕಿದ್ದಾರೆ. ಪ್ರಸಾದ್ ಯೋಜನೆಯಲ್ಲಿ 80 ಕೋಟಿ ರೂ. ತಂದಿದ್ದೇನೆ. ಅದನ್ನು ಕೂಡ ಅನುಷ್ಠಾನ ಮಾಡೋಕೆ ಅನುಕೂಲ ಆಗುತ್ತದೆ. ವಿಜಯಶ್ರೀಪುರದ ಜನ ಏನಾಗುತ್ತದೆ ಎಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೂ ಇಡೀ ಲೇಔಟ್​ ಸಿಗುತ್ತದೆ. ಸಿದ್ಧಾರ್ಥ್​ ಲೇಔಟ್​ ಅವರಿಗೆ ಪರಿಹಾರ ಸಿಗುತ್ತದೆ. ಸರ್ವೆ ನಂ-4ರಲ್ಲಿ ಇರುವ 1300 ಎಕೆರೆಯಲ್ಲಿ ಕೃಷಿ ಮಾಡಿಕೊಂಡು ಇದಾರೋ ಅವರಿಗೂ ಸಹಾಯ ಆಗುತ್ತದೆ. ಸರ್ಕಾರಕ್ಕೆ ಜಮೀನು ಸಿಗುತ್ತದೆ. ಲಲಿತ್ ಮಹಾಲ್ ಪ್ಯಾಲೇಸ್​ನ ತಕರಾರು ಇದೆ. ಅದು ಕೂಡ ಸರ್ಕಾರಕ್ಕೆ ಸಿಗುತ್ತದೆ. ಹೆಲಿಪ್ಯಾಡ್​ ಇದೆ ಅದಕ್ಕೂ ಪರಿಹಾರ ಸಿಗುತ್ತದೆ. ಜನತಾ ಪ್ರತಿನಿಧಿಯಾಗಿ ಬಂದ ಮೇಲೆ ಜನರ ಸ್ವತ್ತನ್ನು ಜನರಿಗೆ ಕೊಡಬೇಕಾಗುತ್ತದೆ.

ಪ್ರತಾಪ್ ಸಿಂಹ, ಸಂಸದ

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಲೆಳೆದಿರುವ ಸಂಸದ ಪ್ರತಾಪ್ ಸಿಂಹ, ಹವಾನಿಯಂತ್ರಿತ ಕೊಠಡಿಯಲ್ಲಿರುವ ಮಹಾರಾಜರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೇ ಸ್ವಾಗತ. ಮಹಾರಾಜರು ರಾಜಕಾರಣಕ್ಕೆ ಬಂದು ಜನ ಸಾಮಾನ್ಯರ ಬಳಿಗೆ ಬರಲಿದ್ದಾರೆ. ಅವರು ರಾಜಕಾರಣಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಅನುಕೂಲ ಆಗಲಿದೆ. ಮಹಾರಾಜರು ಜನ ಸಾಮಾನ್ಯರಿಗೆ, ಪಕ್ಷದ ನಾಯಕರಿಗೆ ಕೈ ಮುಗಿಯಬೇಕು ಅನ್ನೋ ಮಾತುಗಳನ್ನಾಡುವ ಮೂಲಕ ಯದುವೀರ್​​ರನ್ನ ಪ್ರತಾಪ್ ಸಿಂಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದ್ದಾರೆ.

ಅರಮನೆಯ ಪ್ರತಿಷ್ಠಿತ ವ್ಯಕ್ತಿ ಬಿಜೆಪಿಯ ಕಾರ್ಯಕರ್ತನಾಗಿ ಬಾವುಟ ಇಡ್ಕೊಂಡು ಗಾಂಧಿ ಪ್ರತಿಮೆ ಬಳಿ ಕುಳಿತು ಸರ್ಕಾರದ ವಿರುದ್ಧ ದಿಕ್ಕಾರ ಕೂಗಲು ಬರುತ್ತಾರೆ ಎಂದರೆ ಅದು ಉದಾರತೆ. ಜನರ ಬಗ್ಗೆ ಪ್ರೀತಿ ಇದೆ. ರಾಜೇಂದ್ರಶ್ರೀಗಳು ಈ ಭಾಗದಲ್ಲಿ ಅನ್ನದಾಸೋಹ, ಅಕ್ಷರದಾಸೋಹ ಮಾಡಿದಂತವರಿಗೆ ಪುತ್ಥಳಿ ನಿರ್ಮಿಸುವುದಕ್ಕೆ ಅರಮನೆಯವರು ತಕರಾರು ಎತ್ತಿದ್ದಾರೆ. ಸುಪ್ರೀಂಗೆ ಹೋಗಿ ಸ್ಟೇ ತಂದಿದ್ದಾರೆ. ಆ ಸ್ಟೇನೂ ಬಿಟ್ಟು ರಾಜೇಂದ್ರಶ್ರೀಗಳಿಗೆ ಗೌರವ ಕೊಡಬೇಕಾಗುತ್ತದೆ. ಅದಕ್ಕೆ ಮಹಾರಾಜರು ಅನುಕೂಲ ಮಾಡಿಕೊಡುತ್ತಾರೆ. ಇದೆಲ್ಲ ಕೂಡ ಲಾಭವಾಗುತ್ತದೆ.

ಪ್ರತಾಪ್ ಸಿಂಹ, ಸಂಸದ

ಅರಮನೆ ಒಳಗೆ ಅರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ. ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತಿನಿ ಅಂತಾ ಹೊರಟಿದ್ದಾರೆ. ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ? ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಅಂತ ಹೇಳೋ ಮೂಲಕ ಪರೋಕ್ಷವಾಗಿ ಪ್ರತಾಪ್​ ಸಿಂಹ ಮಹಾರಾಜ ಯದುವೀರ್​ಗೆ ಟಾಂಗ್ ಕೊಟ್ಟಿದ್ದಾರೆ.

ವಿಮಾನ ನಿಲ್ದಾಣಕ್ಕೆ ಪಕ್ಷದ ನಾಯಕರು, ಸಚಿವರು ಬರುತ್ತಾರೆ ಎಂದರೆ ಕಾಯುದು, ಅವರ ಬಂದ ಮೇಲೆ ಅವರ ಕಾಲಿಗೆ ನಮಸ್ಕಾರ ಮಾಡುತ್ತೇವೆ. ಮಹಾರಾಜರೇ ಪ್ರಜೆ ತರ ಮಾಡುತ್ತಾರೆ ಎಂದರೆ ಖುಷಿ ಆಗುತ್ತದೆ.

ಪ್ರತಾಪ್ ಸಿಂಹ, ಸಂಸದ

ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲ.. ಅಭಿವೃದ್ಧಿ ಮಾಡಿದ್ದೇನೆ!

ಯದುವೀರ್​ಗೆ ಟಾಂಗ್ ಕೊಡೋದ್ರ ಜೊತೆ ಕಳೆದ 10 ವರ್ಷದಲ್ಲಿ ತಾವು ಮಾಡಿರೋ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಂಹ ಮಾತನಾಡಿದ್ದು, ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲ, ನಾನು ಪಲಾಯನ ವಾದಿಯಲ್ಲ. ಬಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ, ಹಿಂದುತ್ವನ್ನ ಪ್ರತಿಪಾದನೆ ಮಾಡ್ಕೊಂಡು ಬಂದು ಅಭಿವೃದ್ಧಿ ಮಾತ್ರ ಮಾಡಿದ್ದೇನೆ ಎಂದಿದ್ದಾರೆ.

ಟಿಕೆಟ್ ಕೈ ತಪ್ಪೋ ವಿಚಾರದ ಎರಡು ದಿನ ಸೈಲೆಂಟ್ ಆಗಿದ್ದ ಸಿಂಹ ಘರ್ಜನೆ ಶುರು ಮಾಡಿದ್ದಾರೆ. ಇಕ್ಕಟ್ಟಿನ ಪ್ರಶ್ನೆಗಳನ್ನ ಎತ್ತೋ ಮೂಲಕ ಮಹಾರಾಜರನ್ನ ಧರ್ಮ ಸಂಕಟಕ್ಕೆ ಸಿಲುಕಿಸಿದ್ದಾರೆ. ಆದ್ರೆ ಪ್ರತಾಪ್ ಸಿಂಹ ಊರುಳಿಸಿರೋ ದಾಳ ವರ್ಕೌಟ್ ಆಗುತ್ತಾ? ಬಿಜೆಪಿ ಹೈಕಮಾಂಡ್​ ಮೈಸೂರು ಯುದ್ಧಕ್ಕೆ ಯಾರನ್ನ ಅಭ್ಯರ್ಥಿ ಮಾಡುತ್ತೆ ಅನ್ನೋದು ಸದ್ಯ ಯಕ್ಷ ಪ್ರಶ್ನೆಯೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಿನ ಮಹಾರಾಜ ಯಾರು..? ಯದುವೀರ್​​ ಒಡೆಯರ್​​ ವಿರುದ್ಧ ಪ್ರತಾಪ್​ ಸಿಂಹ ಘರ್ಜನೆ

https://newsfirstlive.com/wp-content/uploads/2024/03/PRATAP_SIMHA_YADUVEER.jpg

Load More