newsfirstkannada.com

ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ

Share :

Published April 22, 2024 at 7:59am

    ಎಲೆಕ್ಷನ್​​ ಟೈಂನಲ್ಲಿ ಚೊಂಬಿಗೆ ಎಲ್ಲಿಲ್ಲದ ಡಿಮ್ಯಾಂಡ್..!

    ಇಂದು ರಾಜ್ಯಾದ್ಯಂತ ಚಿಪ್ಪು ಚಳುವಳಿಗೆ ಮುಂದಾದ ಬಿಜೆಪಿ

    ಚುನಾವಣೆಗಾಗಿ ಚೊಂಬು ವರ್ಸಸ್ ಚಿಪ್ಪು ಪಾಲಿಟಿಕ್ಸ್​ ಶುರು

ರಾಜ್ಯದಲ್ಲಿ ಸದ್ಯ ಚೊಂಬು ಪಾಲಿಟಿಕ್ಸ್ ಭಾರೀ ಸದ್ದು ಮಾಡುತ್ತಿದೆ. ಇದೇ ಚೊಂಬಿನ ವಿಚಾರ ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವಿನ ಮತ್ತೊಂದು ವಾಕ್ಸಮರಕ್ಕೆ ವೇದಿಕೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಚೊಂಬಿನ ವಿರುದ್ಧ ಚಿಪ್ಪು ಸಿಡಿದೆದ್ದಿದೆ.

ಚುನಾವಣಾ ಅಖಾಡದಲ್ಲಿ ಚೊಂಬು ಅಸ್ತ್ರ 

ಗ್ಯಾರಂಟಿಗೊಂದು ಕಾಲ, ಚೊಂಬಿಗೊಂದು ಕಾಲ ಅಂತ ಕಾಂಗ್ರೆಸ್ ತಮಟೆ ಬಾರಿಸ್ತಿದೆ. ಸದ್ಯ ಎಲೆಕ್ಷನ್​​ ಟೈಂನಲ್ಲಿ ಚೊಂಬಿಗೆ ಎಲ್ಲಿಲ್ಲದ ಡಿಮ್ಯಾಂಡ್. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು ಚೊಂಬಿನ ಸಮರ ಸಾರಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಕರ್ನಾಟಕಕ್ಕೆ, ಕನ್ನಡಿಗರಿಗೆ ನೀಡಿದ್ದು ಬರೇ ಚೊಂಬು ಅಂತಿರೋ ಕಾಂಗ್ರೆಸ್, ಚುನಾವಣಾ ಅಖಾಡದಲ್ಲಿ ಚೊಂಬು ಅಸ್ತ್ರ ಪ್ರಯೋಗಿಸಿದೆ. ಇದಕ್ಕೆ ಕೌಂಟರ್ ಕೊಟ್ಟಿರೋ ದೇವೇಗೌಡರು, ಚೊಂಬುನ್ನ ಅಕ್ಷಯ ಪಾತ್ರೆಯನ್ನಾಗಿಸಿ ಅಂತಾ ಕರೆ ಕೊಟ್ಟಿದ್ರು.

ನರೇಂದ್ರ ಮೋದಿಯವರಿಗೆ 2014ರಲ್ಲಿ ಬರೀ ಚೊಂಬನ್ನು ಕೊಡ್ತಾರೆ. ಅದನ್ನು ಇವತ್ತು ಅಕ್ಷಯ ಪಾತ್ರೆ ಮಾಡಿ ಹತ್ತು ವರ್ಷ ದೇಶವನ್ನು ಆಳಿದ್ದಾರೆ. ಬಡವರು, ಹರಿಜನರು, ಗಿರಿಜನರು, ಹಿಂದುಳಿದ ವರ್ಗದವರು ಮುನ್ನೆಲೆಗೆ ತಂದಿದ್ದಾರೆ.

ಹೆಚ್​.ಡಿ ದೇವೇಗೌಡ, ಮಾಜಿ ಪ್ರಧಾನಿ

ದೇವೇಗೌಡರ ಈ ಅಕ್ಷಯ ಪಾತ್ರೆ ಮಾತಿಗೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ಮಾಜಿ ಪ್ರಧಾನಿಗಳು ಯಾಕೆ ಸುಳ್ಳು ಹೇಳಿದ್ರು? ಮೋದಿ 177 ಲಕ್ಷ ಕೋಟಿ ಸಾಲ‌ ಮಾಡಿರೋದನ್ನ ಅಕ್ಷಯ ಪಾತ್ರೆ ಅಂತಾ ಕರೆಯಬೇಕಾ ಅಂತಾ ಕೌಂಟರ್ ಕೊಟ್ಟಿದ್ದಾರೆ.

ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ನಮ್ಮ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ರೂಪಾಯಿ ಇತ್ತು. ನರೇಂದ್ರ ಮೋದಿ ಬಂದ ಮೇಲೆ 177 ಲಕ್ಷ ಕೋಟಿ ರೂಪಾಯಿ ದೇಶದ ಸಾಲ ಮಾಡಿದ್ದಾರೆ. ಕೇವಲ 10 ವರ್ಷದಲ್ಲಿ 124 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದನ್ನು ಅಕ್ಷಯ ಪಾತ್ರೆ ಎಂದು ಕರೆಯಬೇಕಾ?. ದೇವೇಗೌಡರು ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಬಿಟ್ರಾಲ್ಲ ಅಂತ ನನಗೆ ಉದ್ಭವ ಆಗುತ್ತಿದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಿಜೆಪಿ ವಿರುದ್ಧ ಕಾಂಗ್ರೆಸ್​ ಚೊಂಬು ಪಾಲಿಟಿಕ್ಸ್​ ಶುರು ಮಾಡಿದ್ರೆ, ಇದಕ್ಕೆ ಕೌಂಟರ್ ಆಗಿ ಕಮಲ ಪಾಳಯ ಚಿಪ್ಪು ಅಸ್ತ್ರ ಹೂಡಲು ಸಜ್ಜಾಗಿದೆ. ರಾಜ್ಯ ಬಿಜೆಪಿ ಘಟಕದ ವತಿಯಿಂದ ಇವತ್ತು ರಾಜ್ಯಾದ್ಯಂತ ಚಿಪ್ಪು ಚಳುವಳಿ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಚೊಂಬು ಜಾಹೀರಾತನ್ನು ವಿರೋಧಿಸಿ ಬಿಜೆಪಿ ನಾಯಕರು ತೆಂಗಿನಕಾಯಿ ಚಿಪ್ಪು ಹಿಡಿದು ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

ಚಿಪ್ಪು ಚಳುವಳಿ ಮಾತ್ರವಲ್ಲದೇ ಜನರಿಂದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಚೊಂಬೇ ಗ್ಯಾರಂಟಿ ಅಂತಲೂ ಟ್ವಿಟರ್​ನಲ್ಲಿ ಬಿಜೆಪಿಗೆ ಕಾಂಗ್ರೆಸ್​ನ ಟ್ವೀಟ್ ಕಾಳೆದಿದೆ. ರಾಜ್ಯದಲ್ಲಿ ಚೊಂಬು ಪಾಲಿಟಿಕ್ಸ್​​ ಭಾರೀ ಸದ್ದು ಮಾಡ್ತಿದೆ.. ಬದಲಾದ ಸನ್ನಿವೇಶದಲ್ಲಿ ಚೊಂಬು ವರ್ಸಸ್ ಚಿಪ್ಪು ಪಾಲಿಟಿಕ್ಸ್​ ಶುರುವಾಗಿದೆ. ಫೈನಲ್ ಆಗಿ ಚೊಂಬು ಗೆಲ್ಲುತ್ತೋ ಚಿಪ್ಪು ಗೆಲ್ಲುತ್ತೋ ಅಂತ ಕಾದು ನೋಡಬೇಕಿದೆ. ಜನರ ಕೈಗೆ ಚೊಂಬು, ಚಿಪ್ಪು ಇಡದಿದ್ರೆ ಸಾಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ

https://newsfirstlive.com/wp-content/uploads/2024/04/CM_SIDDARAMAIAH_1-1.jpg

Load More