newsfirstkannada.com

Lok Sabha Election 2024: ಪತ್ನಿಗೆ ಸೀಟು ಸಿಕ್ಕಿಲ್ಲವೆಂದು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕ!

Share :

Published March 25, 2024 at 2:47pm

  ಪತ್ನಿಗೆ ಲೋಕ ಸಭಾ ಟಿಕೆಟ್​ ಸಿಗುವ ನಿರೀಕ್ಷೆಯಲ್ಲಿದ್ದ ಶಾಸಕ

  ಕಾಂಗ್ರೆಸ್​ ಅಭ್ಯರ್ಥಿ ಪಟ್ಟಿ ಘೋಷಣೆಯಾದ 2ನೇ ದಿನಕ್ಕೆ ರಾಜೀನಾಮೆ

  ಪತ್ನಿಗಾಗಿ ರಾಜೀನಾಮೆ ನೀಡಿ ಕಾಂಗ್ರೆಸ್​ಗೆ ಬಿಗ್​ ಶಾಕ್​ ಕೊಟ್ಟ ಶಾಸಕ

ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದ್ದೇ ತಡ ಸದ್ಯ ಪಕ್ಷಗಳಲ್ಲಿ ನಾನಾ ಸರ್ಕಸ್​ಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳ ಪಕ್ಷ ಪರ್ಯಟನೆ ಮಾಡಿದರೆ, ಮತ್ತೊಂದೆಡೆ ಮಗನಿಗೆ ಸೀಟು ಸಿಕ್ಕಿಲ್ಲ, ಮಗಳಿಗೆ ಸೀಟು ಸಿಕ್ಕಿಲ್ಲ ಎಂದು ಬಂಡಾಯವೆದ್ದ ಘಟನೆಯು ಕಣ್ಣು ಮುಂದಿದೆ. ಇದೀಗ ಅಸ್ಸಾಂ ಲಖಿಂಪುರ ಜಿಲ್ಲೆಯ ನೌಬೋಯಿಜಾನ ಕಾಂಗ್ರೆಸ್​ ಶಾಸಕರೊಬ್ಬರು ಪತ್ನಿಗೆ ಸೀಟು ಸಿಕ್ಕಿವೆಂದು ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಶಾಸಕ ಭರತ್​ ಚಂದ್ರ ನಾರಾ ತನ್ನ ಪತ್ನಿ ರಾಣಿ ನಾರಾಗೆ ಕಾಂಗ್ರೆಸ್​ ಪಕ್ಷ ಲೋಕಸಭಾ ಚುನಾವಣೆಗೆ ಸೀಟು ನೀಡಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಲಖಿಂಪುರ ಲೋಕಸಭಾ ಕ್ಷೇತ್ರಕ್ಕೆ ಉದಯ್​ ಶಂಕರ್​ ಹಜಾರಿಕಾ ಅವರನ್ನು ಕಾಂಗ್ರೆಸ್​ ಪಕ್ಷ ಆಯ್ಕೆ ಮಾಡಿದ 2 ದಿನಗಳ ನಂತರ ಭರತ್​ ಚಂದ್ರ ನಾರಾ ರಾಜೀನಾಮೆ ನೀಡಿದ್ದಾರೆ.

ರಾಣಿ ನಾರಾ

ಇದನ್ನೂ ಓದಿ:VIDEO: ತೊಡೆ ಮೇಲೆ ಲ್ಯಾಪ್​ಟಾಪ್​ ಇರಿಸಿ ಸ್ಕೂಟರ್​ ಸವಾರಿ ಮಾಡ್ತಿರೋ ಉದ್ಯೋಗಿ! ಇಂದು ಬೆಂಗಳೂರಿನ ಘಟನೆಯೇ?

ರಾಣಿ ನಾರಾ ಮಾಜಿ ಕೇಂದ್ರ ಸಚಿವೆಯಾಗಿದ್ದು, ಪತಿ ಭರತ್​ ಚಂದ್ರ ನಾರಾ ಈ ಬಾರಿ ಅವರಿಗೆ ಸೀಟು ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಸೀಟು ವಂಚಿತರಾದ ಬಳಿಕ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ‘ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election 2024: ಪತ್ನಿಗೆ ಸೀಟು ಸಿಕ್ಕಿಲ್ಲವೆಂದು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕ!

https://newsfirstlive.com/wp-content/uploads/2024/03/ASsam-bharat-chandra-sara.jpg

Load More