newsfirstkannada.com

×

ಲೋಕಸಭಾ ಚುನಾವಣೆಗೂ QR ಕೋಡ್ ಎಂಟ್ರಿ.. ಇದರಿಂದಾಗೋ ಉಪಯೋಗ ಏನು?

Share :

Published April 1, 2024 at 6:07am

    ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಜಾರಿಗೆ ಬರಲಿದೆ ಹೊಸ ಪ್ಲಾನ್​

    ಮತದಾರರ ಮನಸ್ಸು ಗೆಲ್ಲೋದಕ್ಕೆ ಚುನಾವಣಾ ಆಯೋಗದ ಹೊಸ ತಂತ್ರ

    ಚುನಾವಣಾ ಆಯೋಗದ ಹೊಸ ಡಿಜಿಟಲ್​ ಅಸ್ತ್ರ ವರ್ಕ್​ ಆಗೋದು ಪಕ್ಕಾ!

ಬೆಂಗಳೂರು: ಏಪ್ರಿಲ್​ 26 ಮತದಾರ ಪ್ರಭು, ಮೊದಲ ಹಂತದ ಮತದಾನದಲ್ಲಿ ವೋಟಿಂಗ್​​ ಚೀಟಿ ಹಿಡಿದು ಲೋಕ ಕದನದ ಭವಿಷ್ಯ ನಿರ್ಧರಿಸಲು ಮುಂದಾಗಲಿದ್ದಾನೆ. ಈ ಮಧ್ಯೆ ಕುರುಕ್ಷೇತ್ರದಲ್ಲಿ ಕದನ ಕಲಿಗಳು ಕುರ್ಚಿಗಾಗಿ ಡಿಫರೆಂಟ್​​ ಟೆಕ್ನಿಕ್​ಗೆ ಮೊರೆ ಹೋಗ್ತಾರೆ. ಅದೇ ರೀತಿ ಚುನಾವಣಾ ಆಯೋಗವೋ ಹೊಸ ಹೆಜ್ಜೆ ಇಟ್ಟಿದೆ. ಮತದಾರರ ಮನಗೆಲ್ಲಲು ಡಿಜಿಟಲ್​ ಅಸ್ತ್ರ ಪ್ರಯೋಗಿಸಿದೆ.

ಇದನ್ನೂ ಓದಿ: ಟ್ರಾಫಿಕ್ ಮಧ್ಯೆಯೇ IAS ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಡೆಲಿವರಿ ಬಾಯ್; ವಿಡಿಯೋ

ಲೋಕ ಕದನಕ್ಕೆ ಮೊದಲ ಬಾರಿಗೆ QR ಕೋಡ್​ ಅಸ್ತ್ರ ಎಂಟ್ರಿ

ಮಹಾ ಮತ ಸಮರಕ್ಕೆ ಮುಹೂರ್ತ. ಕದನ ಕಲಿಗಳ ಕುರುಕ್ಷೇತ್ರಕ್ಕೆ ಸಜ್ಜಾದ ಅಖಾಡ. ಇಡೀ ದೇಶವೇ ಎದುರು ನೋಡ್ತಿದ್ದ ಲೋಕಸಭೆ ಚುನಾವಣೆಗೆ ಹೆಚ್ಚೇನು ದೂರ ಇಲ್ಲ. ಹೀಗಾಗಿ ಎಲೆಕ್ಷನ್​​​ ಗೆಲ್ಲಲು ರಣಭೂಮಿಯಲ್ಲಿ ರಾಜಕೀಯ ಮುಖಂಡರ ತಲೆ ಡಿಫರೆಂಟ್​ ಡಿಫರೆಂಟ್​​ ಆಗಿ ಯೋಚನೆ ಮಾಡ್ತಿದೆ. ಅನೇಕ ಹೊಸ ಹೊಸ ಟೆಕ್ನಿಕ್​ಗೆ ಕೈ ಹಾಕ್ತಿದೆ. ಇದೇ ಥರಾ ಮತದಾರರ ಮನಸ್ಸು ಗೆಲ್ಲೋದಕ್ಕೆ ಚುನಾವಣಾ ಆಯೋಗವು ತಂತ್ರ ರೂಪಿಸಿದೆ. ಅದರಂತೆ ವೋಟರ್ಸ್​​ ಸಂಖ್ಯೆ ಹೆಚ್ಚಿಸಲು, ಲೋಕ ಕದನಕ್ಕೆ ಮೊದಲ ಬಾರಿಗೆ QR ಕೋಡ್​ ಅಸ್ತ್ರ ಪ್ರಯೋಗಿಸಿದೆ.

QR ಕೋಡ್ ಹೇಗಿರಲಿದೆ?

ಬೆಂಗಳೂರು ಸೇರಿ ಅನೇಕ ಮಹಾನಗರದಲ್ಲಿ ಮತಗಟ್ಟೆ ಹುಡುಕೋದೆ ದೊಡ್ಡ ಟಾಸ್ಕ್. ಟ್ರಾಫಿಕ್ ಸಮಸ್ಯೆಯಿಂದ, ಲೋಕೇಷನ್​ ಕಂಡು ಹಿಡಿಯೋದೇ ತಲೆನೋವು. ಈ ಎಲ್ಲಾ ಸಮಸ್ಯೆಯಿಂದ ಬಹುತೇಕರು ಮತ ಹಾಕೋಕೆ ಹಿಂದೇಟು ಹಾಕ್ತಾರೆ. ಈ ಎಲ್ಲಾ ಸಮಸ್ಯೆಯನ್ನ ಮನಗಂಡ ಆಯೋಗ ಮತದಾರರ ಮನಗೆಲ್ಲೋದಕ್ಕೆ ಈ QR ಕೋಡ್ ಅಸ್ತ್ರಕ್ಕೆ ಕೈ ಹಾಕಿದೆ.

QR ಕೋಡ್ ವರ್ಕ್​​ ಏನು?

ಸಾಮಾನ್ಯವಾಗಿ ಎಲೆಕ್ಷನ್ ಆರಂಭ ಆಗೋ 5 ದಿನದ ಮುನ್ನ ಮತದಾರರ ಮನೆ ಮನೆಗೆ ಮತ ಚೀಟಿ ಬರುತ್ತೆ. ಆದ್ರೆ ಈ ಬಾರಿ ಆ ಮತ ಚೀಟಿಯ ಹಿಂಭಾಗದಲ್ಲಿ ಇದೇ QR ಕೋಡ್ ಇರಲಿದೆ. ಇದನ್ನ ಸ್ಕ್ಯಾನ್ ಮಾಡಿದಾಗ ಮತಗಟ್ಟೆ ಎಲ್ಲಿದೆ? ಎಷ್ಟು ದೂರ ಇದೆ? ಕ್ರಮಿಸಲು ಎಷ್ಟು ಸಮಯ ಬೇಕು? ಅನ್ನೋ ಮತಗಟ್ಟೆಯ ಕಂಪ್ಲೀಟ್ ಇನ್ಫರ್ಮೇಷನ್ ಲಭ್ಯವಾಗುತ್ತೆ. ಇದಿಷ್ಟು ಮಾತ್ರವಲ್ಲದೆ ಬೆಳಗಾವಿ , ವಿಜಯಪುರ, ಕಲಬುರಗಿ, ಹುಬ್ಬಳ್ಳಿ ಧಾರವಾಡ , ದಾವಣಗೆರೆ, ಶಿವಮೊಗ್ಗ, ಮೈಸೂರು, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬಿಬಿಎಂಪಿ ಸೆಂಟ್ರಲ್, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ ವ್ಯಾಪ್ತಿಯ ಮತಗಟ್ಟೆಗಳಲ್ಲೂ ಇದರ ಸದುಪಯೋಗ ಪಡೆಯಬಹುದಾಗಿದೆ. ಒಟ್ಟಾರೆ ಈ ಡಿಜಿಟಲ್ ಅಸ್ತ್ರದ ಮೂಲಕವಾದರೂ ಜನ ಮತಗಟ್ಟೆಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕುವಂತಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೂ QR ಕೋಡ್ ಎಂಟ್ರಿ.. ಇದರಿಂದಾಗೋ ಉಪಯೋಗ ಏನು?

https://newsfirstlive.com/wp-content/uploads/2024/03/VOTING-2.jpg

Load More