newsfirstkannada.com

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉರುಳಿಸಿದ ದಾಳಕ್ಕೆ ಥಂಡಾ ಹೊಡೆದ ಕಮಲ ಪಡೆ..!

Share :

Published March 29, 2024 at 6:56am

  ಬಾಗಲಕೋಟೆ ಬಂಡಾಯಕ್ಕೆ ಮದ್ದರೆದ್ರಾ ಸಿಎಂ, ಡಿಸಿಎಂ..?

  ವೀಣಾ ಕಾಶಪ್ಪನವರ್​ಗೆ ಸಿಗುತ್ತಾ ವಿಶೇಷ ಜವಾಬ್ದಾರಿ..?

  ಹಳೆ ಜಗಳ ಮರೆತು ಒಂದಾಗ್ತಾರಾ ಹಳೇ ಮೈಸೂರಿನ ತ್ರಿವಳಿಗಳು

ರಾಜ್ಯದಲ್ಲಿ ಲೋಕಸಭೆ ಎಲೆಕ್ಷನ್​​​ ಕಾವು ರಂಗೇರ್ತಿದೆ. ಅಖಾಡ ಗೆಲ್ಲಲು ಮೂರು ಪಕ್ಷಗಳು ತಂತ್ರ ರಣತಂತ್ರಗಳ ಮೊರೆ ಹೋಗ್ತಿದ್ದಾರೆ. ಈಗಾಗಲೇ ನಿನ್ನೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಕೈ-ಕಮಲದಲ್ಲಿನ ಬಂಡಾಯದ ಬೆಂಕಿ ಆರುತ್ತಲೇ ಇಲ್ಲ. ಸರಣಿ ಸಂಧಾನ ಸಭೆಗಳು ನಡೀತಿವೆ. ಇತ್ತ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉರುಳಿಸಿದ ದಾಳಕ್ಕೆ ಕಮಲ ತಂಡ, ಥಂಡಾ ಹೊಡೆದಿದೆ.

ಕೋಲಾರಕ್ಕೆ ಮೈತ್ರಿ ಅಭ್ಯರ್ಥಿ ಫೈನಲ್​ ಮಾಡಿದ್ರಾ ದಳಪತಿ?
ಕಾಂಗ್ರೆಸ್​ನಲ್ಲಿ ಕೋಲಾರ ಕಗ್ಗಂಟಿನ ಮಧ್ಯೆ ಮೈತ್ರಿ ಅಭ್ಯರ್ಥಿ ಫೈನಲ್​​​ ಆಗಿದೆ.. ಜೆಡಿಎಸ್​​ನಿಂದ ಬಹುತೇಕ ಮಲ್ಲೇಶ್​ ಬಾಬುಗೆ ಕಣಕ್ಕೆ ಇಳಿಯೋದು ನಿಶ್ಚಿತವಾಗಿದೆ. ಜೆಪಿ ನಗರದ ನಿವಾಸದಲ್ಲಿ ಕ್ಷೇತ್ರದ ಪ್ರಮುಖರ ಜೊತೆ ಸಭೆ ನಡೆಸಿದ ಕುಮಾರಸ್ವಾಮಿ, ಮೂವರು ಆಕಾಂಕ್ಷಿಗಳ ಜೊತೆ ಚರ್ಚಿಸಿ ಮಲ್ಲೇಶ್ ಬಾಬುರನ್ನ ಫೈನಲ್​​ ಮಾಡಲಾಗಿದೆ ಅಂತ ಗೊತ್ತಾಗಿದೆ.

ಇದನ್ನೂ ಓದಿ: ಬಂಡಾಯಕ್ಕೆ ಥಂಡಾ ಹೊಡೆದ ಬಿಜೆಪಿ; ರಾಜ್ಯ ನಾಯಕರಿಗೆ ಹೈಕಮಾಂಡ್​ ಕೊಟ್ಟ ಸೂಚನೆಯೇನು?

ಚಿಕ್ಕಬಳ್ಳಾಪುರ ಸಂಬಂಧ ಮೈತ್ರಿ ಪಕ್ಷದ ನಾಯಕರ ಜೊತೆ ಸಮನ್ವಯ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್​​ ಸೇರಿ ಹಲವರಿದ್ರು. ಸಭೆ ಬಳಿಕ ಮಂಡ್ಯ ಸಂಸದೆ ಸುಮಲತಾ ಬಗ್ಗೆ ಮಾತ್ನಾಡಿದ ಮಾಜಿ ಸಿಎಂ ಹೆಚ್​ಡಿಕೆ, ನನಗೇನು ಶಾಶ್ವತ ಶತ್ರುನಾ ಅಂತ ಪ್ರಶ್ನಿಸಿ, ಒಂದಾಗೋದು ರಾಜಕೀಯದ ಸ್ವಾಭಾವ ಅಂತ ಇಲ್ಲಿ ಯಾರು ಶತ್ರುಗಳಲ್ಲ ಎಂದಿದ್ದಾರೆ.

ಅಂದ್ಹಾಗೆ ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್​​ ತನ್ನ ಹಳೇ ಶಕ್ತಿಯ ಮೊರೆ ಹೋಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಕೈಪಡೆ ದುಂಬಾಲು ಬಿದ್ದಿದೆ. 7 ವರ್ಷದ ಮುನಿಸು ಮರೆತು ತನ್ನ ಹಳೇ ಮುತ್ಸದ್ದಿಯನ್ನ ಭೇಟಿ ಮಾಡಿದ್ದಾರೆ. ಶ್ರೀನಿವಾಸ ಪ್ರಸಾದ್ ಮನೆಯಲ್ಲಿ ಗೌಪ್ಯ ಮಾತುಕತೆ ನಡೆದಿದೆ. ಕ್ಷೇತ್ರ ಗೆಲ್ಲಲು ಶ್ರೀನಿವಾಸ್​​ ಪ್ರಸಾದ್​​​ ನಿವಾಸಕ್ಕೆ ಸ್ವತಃ ತಮ್ಮ ಮಗನನ್ನೇ ಸಿಎಂ ಕಳುಹಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ನನ್ನನ್ನೂ ಸೇರಿಸಿ ಅಂತರಂಗದಲ್ಲಿ ಪ್ರೀತಿಯನ್ನು ಇಟ್ಟುಕೊಂಡಿದ್ದೇವೆ. ರಾಜಕೀಯ ಸನ್ನಿವೇಶಗಳು ಬಂದಾಗ ಪ್ರಜಾಸತ್ತಾತ್ಮಕ ವ್ಯಾಪ್ತಿಯ ಒಳಗಡೆ ಟೀಕೆ, ಟಿಪ್ಪಣಿಗಳನ್ನು ಮಾಡಿದ್ದೇವೆ. ಅದನ್ನು ಹೊರತುಪಡಿಸಿ ನಮಗೂ, ಅವರಿಗೂ ವ್ಯಕ್ತಿಗತವಾಗಿ ಏನೂ ಇಲ್ಲ- ಡಾ.ಹೆಚ್.ಸಿ.ಮಹದೇವಪ್ಪ, ಸಚಿವ

ಬಾಗಲಕೋಟೆ ಬಂಡಾಯಕ್ಕೆ ಮದ್ದರೆದ್ರಾ ಸಿಎಂ, ಡಿಸಿಎಂ?
ಬಾಗಲಕೋಟೆ ಟಿಕೆಟ್​​ಗಾಗಿ ಬಂಡೆದ್ದ ವೀಣಾ ಕಾಶಪ್ಪನವರ್​ ಜೊತೆ ಸಂಧಾನ ಸಭೆ ನಡೆದಿದೆ.. ಟಿಕೆಟ್ ಸಿಗದ ಕಾರಣ ತೀವ್ರ ಅಸಮಾಧಾನಗೊಂಡ ವೀಣಾಗೆ ಸ್ಥಾನಮಾನದ ಭರವಸೆ ನೀಡಲಾಗಿದೆ.. ರಾಜ್ಯ ಕಾಂಗ್ರೆಸ್​​ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದ್ದು, ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿ ವೀಣಾ ಕಾಶಪ್ಪನವರ್ ತೆರಳಿದ್ದಾರೆ ಎನ್ನಲಾಗಿದೆ.. ಒಟ್ಟಾರೆ, ಎಲೆಕ್ಷನ್​ ಗೆಲ್ಲಲು ಎಲ್ಲಾ ತಂತ್ರ-ಮಂತ್ರಗಳ ಪ್ರಯೋಗ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉರುಳಿಸಿದ ದಾಳಕ್ಕೆ ಥಂಡಾ ಹೊಡೆದ ಕಮಲ ಪಡೆ..!

https://newsfirstlive.com/wp-content/uploads/2024/03/SHRINIVASPRASAD-1.jpg

Load More