/newsfirstlive-kannada/media/post_attachments/wp-content/uploads/2024/06/NARENDRA-MODI-4.jpg)
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಸರ್ಕಾರ ರಚನೆಗೆ ಎನ್ಡಿಎ ಒಕ್ಕೂಟ ಮಹತ್ವದ ಮಾತುಕತೆ ನಡೆಯುತ್ತಿರುವ ಹೊತ್ತಿನಲ್ಲೇ, ಕಿಂಗ್ ಮೇಕರ್ ಜೆಡಿಯು ಬಿಜೆಪಿ ಮುಂದೆ ಮಹತ್ವದ ಬೇಡಿಕೆಯನ್ನು ಇಟ್ಟಿದೆ. ಜೆಡಿಯು ಪಕ್ಷದ ಹಿರಿಯ ನಾಯಕ ಕೆಸಿ ತ್ಯಾಗಿ ಅವರು.. ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು.. ದೆಹಲಿಯಲ್ಲಿ ಇಂದು ಎನ್ಡಿಎ ಸಭೆ ಇದೆ. ಹೀಗಾಗಿ ಪಕ್ಷದ ಹಿರಿಯ ಮುಖಂಡರನ್ನು ದೆಹಲಿಗೆ ಕರೆಸಲಾಗಿದೆ. ನಿತೀಶ್ ಕುಮಾರ್ ಕೂಡ ಸಭೆಯಲ್ಲಿ ಭಾಗಿಯಾಗ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಕೂಡ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಓಪನಿಂಗ್.. ಹೇಗಿರುತ್ತೆ ಗೊತ್ತಾ ಇವತ್ತಿನ ಪ್ಲೇಯಿಂಗ್-11?
ಇದೇ ವೇಳೆ INDIA ಒಕ್ಕೂಟದ ಜೊತೆಗೆ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ಎನ್ಡಿಎ ಒಕ್ಕೂಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಾಗೆಲ್ಲ ಇದ್ದರೆ ಇವತ್ತು ನಾವು ಇಲ್ಲಿ ಇರುತ್ತಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ದೊಡ್ಡ ಮನಸ್ಸು ಮಾಡಿದ್ದರೆ ನಾವಿಲ್ಲಿ ಇರುತ್ತಿರಲಿಲ್ಲ. ಅವರ ತಪ್ಪು ನಡವಳಿಕೆಯಿಂದ ಇಲ್ಲಿಗೆ ಬಂದಿದ್ದೇವೆ. ಕಾರ್ಯಕರ್ತರು ತಮ್ಮ ನಾಯಕರಿಗೆ ಕೆಲವು ಸ್ಥಾನಗಳನ್ನು ಬಯಸುತ್ತಾರೆ, ಮತ್ತು ನಿರೀಕ್ಷಿಸುತ್ತಾರೆ ಅದು ತಪ್ಪಲ್ಲ ಎಂದರು.
ಇದನ್ನೂ ಓದಿ:ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ.. JDS ಡಿಮ್ಯಾಂಡ್ ಇಡ್ತಿರೋ ಖಾತೆ ಯಾವುದು ಗೊತ್ತಾ?
ಇದೇ ವೇಳೆ ನಿಮ್ಮದು ಏನಾದರೂ ಬೇಡಿಕೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ನಾವು ಯಾವುದೇ ಷರತ್ತುಗಳಿಲ್ಲದೆ ಎನ್‌ಡಿಎಗೆ ಬೆಂಬಲ ನೀಡುತ್ತೇವೆ. ಆದರೆ ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನವನ್ನು ಪಡೆಯುವುದು ಸಾರ್ವಜನಿಕ ಹಿತಾಸಕ್ತಿಯಾಗಿದೆ ಎಂದಿದ್ದಾರೆ. ವಿಶೇಷ ಸ್ಥಾನಮಾನ ಸಿಗದೇ ಹೋದರೆ ಬಿಹಾರದ ಅಭಿವೃದ್ಧಿ ಅಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ:ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!
40 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 12, ಬಿಜೆಪಿ 12, ಲೋಕ ಜನಶಕ್ತಿ ಪಾರ್ಟಿ 5, ಆರ್ಜೆಡಿ 4, ಕಾಂಗ್ರೆಸ್ ಮೂರು, ಸಿಪಿಎಂ ಎರಡು ಹಾಗೂ ಇತರೆ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ