newsfirstkannada.com

ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!

Share :

Published June 5, 2024 at 10:50am

    ರಣ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಸಂಖ್ಯಾಶಾಸ್ತ್ರದ ಶಾಕ್​!

    ಐದು ವರ್ಷ ಅಧಿಕಾರ ಪೂರ್ಣ ಮಾಡೋದೇ ಸವಾಲ್​!

    ಶೇಕಡಾವಾರು ಮತ ಹಿಗ್ಗಿದ್ರೂ ಹಿಗ್ಗುವ ಸ್ಥಿತಿಯಲ್ಲಿಲ್ಲ ಬಿಜೆಪಿ!

ಕೇಂದ್ರದಲ್ಲಿ ಬಿಜೆಪಿ ಬಲಿಷ್ಠ ಮತ್ತು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಅಸ್ಥಿರತೆ ಕಾಡ್ತಿದೆ. ಆ ಅಸ್ಥಿರತೆಗೆ ಕಾರಣ ನಂಬರ್​​​.. 240ರ ಆಸುಪಾಸಿನ ಈ ನಂಬರ್​​​ ಇಟ್ಕೊಂಡು ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು. ಹಾಗಂತ ಇದು ಅಸಾಧ್ಯವಲ್ಲ.. ಏಕೆಂದ್ರೆ ಅಸಾಧ್ಯದಲ್ಲೇ ಸಾಧ್ಯ ಎಂಬ ಪದವೂ ಅವಿತಿದೆ. ಕಾರಣ ನರಸಿಂಹರಾವ್​​ ಸ್ಥಿತಿ ನೆನಪಾಗ್ತಿದೆ.

ಈ ಬಾರಿ ರಣ ಹುಮ್ಮಸ್ಸಿನೊಂದಿಗೆ ಅಖಾಡಕ್ಕೆ ಧುಮುಕಿದ ಕಾಂಗ್ರೆಸ್​, ಹಬ್ಬದೂಟ ಮಾಡಿದೆ. ಜನ ಕೊಟ್ಟ ತೀರ್ಪು ಇಂಡಿಯಾ ಒಕ್ಕೂಟಕ್ಕೆ ಹುರುಪು ಇಮ್ಮಡಿಸಿದೆ. ಈ ಹುರುಪು-ಹುಮ್ಮಸ್ಸು ಎಲೆಕ್ಷನ್​​ ಚಾಣಾಕ್ಯರಾದ ಮೋದಿ-ಅಮಿತ್​ ಶಾ ಜೋಡಿಗೆ ಮೊದಲ ಬಾರಿಗೆ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಅಜೇಯ ಮೋದಿ ಓಟಕ್ಕೆ ಹಿಂದಿ ಹಾರ್ಟ್​ಲ್ಯಾಂಡ್​​ನಲ್ಲಿ ತಡೆದು ನಿಲ್ಲಿಸಿದೆ. ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನ ರಾಹುಲ್​​ ಗಾಂಧಿ ಕಟ್ಟಿಹಾಕಿ ಅರ್ಧ ಯುದ್ಧ ಗೆದ್ದು ಮುಗಿಸಿದ್ದಾರೆ.

ಇದನ್ನೂ ಓದಿ:ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಶಾಕ್.. ಬಿಜೆಪಿಗೆ ಹೊಡೆತ ಬಿದ್ದಿದ್ದು ಎಷ್ಟು ರಾಜ್ಯಗಳಲ್ಲಿ..?

ಚಾರ್​ ಸೌ ಪಾರ್​​ ಕನಸನ್ನ ಕಾಂಗ್ರೆಸ್​​​ನ ಗ್ಯಾರಂಟಿ ಛಿದ್ರ ಮಾಡಿದೆ. ಆದ್ರೂ 18ನೇ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. ಸದ್ಯ 240 ಸುತ್ತ ಅಂಕಿಗಳ ಅಂಕ ಗಣಿತ ಸ್ಥಿರವಾಗಿದೆ. ಆ ನಂಬರ್​​ನ್ನ ಮೊದಲು ಮೈತ್ರಿ ಬಲದ ಸಹಾಯದಿಂದ 272ಕ್ಕೆ ಹಿಗ್ಗಿಸಬೇಕಿದೆ. ಆ ಬಳಿಕವೇ ಹೊಸ ಸರ್ಕಾರ ರಚನೆ ಸಾಧ್ಯತೆಯತ್ತ ತೆರೆದುಕೊಳ್ಳಬೇಕಿದೆ. ಕೊಡು-ಕೊಳ್ಳುವಿಕೆಯಲ್ಲಿ ಔದಾರ್ಯತೆ ಪ್ರದರ್ಶಿಸಬೇಕಾಗಲಿದೆ.. ಚೌಕಾಸಿಗಳಿಗೆ ಒಗ್ಗಿಕೊಳ್ಳುವ ಸವಾಲು ನಮೋ ಹೆಗಲೇರಿದೆ.

2014ರಲ್ಲಿ 282 ಕ್ಷೇತ್ರಗಳಲ್ಲಿ ಅರಳಿದ್ದ ಕಮಲ, 31 ಶೇಕಡಾವಾರು ಮತ ಕೀಳಿತ್ತು. ಅದೇ 2019ರಲ್ಲಿ ತನ್ನ ಶೇಕಡಾವಾರನ್ನ ಹಿಗ್ಗಿಸಿಕೊಂಡಿದ್ದ ಬಿಜೆಪಿ 303 ಸ್ಥಾನ ಗೆದ್ದು 37 ಪರ್ಸೆಂಟೇಜ್​​ ಮತಕ್ಕೆ ಕನ್ನ ಹಾಕಿತ್ತು. ಆದ್ರೆ, ಈ ಬಾರಿ ಶೇಕಡಾ 39ರಷ್ಟು ಮತ ಪಡೆದ್ರೂ ಬಿಜೆಪಿ ಗೆದ್ದಿದ್ದು 241 ಕ್ಷೇತ್ರಗಳು ಮಾತ್ರ. ಈ ನಂಬರ್​​​ ಗೇಮ್​ನಲ್ಲಿ ಡಿಕ್ರೀಸ್​​ ಆದ ಬಿಜೆಪಿ, ಮೈನಾರಿಟಿ ಸರ್ಕಾರವನ್ನು ಮತ್ತೊಮ್ಮೆ ಮುನ್ನಡೆಸಬೇಕಾದ ಅನಿವಾರ್ಯತೆಗೆ ತಳ್ಳಿದೆ.. 2014 ಮತ್ತು 2019ರಲ್ಲಿ ಬಹುಮತದ ಸರ್ಕಾರ ಮುನ್ನಡೆಸಿದ್ದ ಮೋದಿಗೆ ಈಗ ಸಮ್ಮಿಶ್ರ ಸರ್ಕಾರ ನಡೆಸುವ ಇಕ್ಕಟ್ಟಿನ ಸ್ಥಿತಿ ಇದೆ.

ಇದನ್ನೂ ಓದಿ:ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

ಮೋದಿ ಪ್ರತಿ ಹೆಜ್ಜೆಗೂ ಮಿತ್ರ ಪಕ್ಷಗಳ ಗೆಜ್ಜೆನಾದದ ಅನುಮತಿ ಪಡೆಯೋದು ಮುಖ್ಯ. ತಮ್ಮ ಯೋಜನೆಗಳನ್ನ ಜಾರಿಗೊಳಿಸಲು ಮಿತ್ರಪಕ್ಷಗಳ ಅವಲಂಬನೆ ಅನಿವಾರ್ಯತೆಗೆ ದೂಡಲಿದೆ. 2047ರ ಹೊತ್ತಿಗೆ ವಿಕಸಿತ ಭಾರತ ಅನ್ನೋ ಕಲ್ಪನೆ ಕಟ್ಟಿಕೊಟ್ಟಿದ್ದ ಮೋದಿ, ಆ ಹಾದಿ ತಲುಪೋದಕ್ಕೆ ಸಾಧ್ಯವಾ ಅನ್ನೋ ಪ್ರಶ್ನೆಗಳು ಸೃಷ್ಟಿ ಆಗಿವೆ.. ಅದೆಷ್ಟು ರಾಷ್ಟ್ರೀಯ ವಿಚಾರಗಳಿಗೆ ಈ ನಂಬರ್​ ಕಟ್ಟಿ ಹಾಕುವ ಆತಂಕ ಇದೆ.

ಸಿಕ್ಕ 244 ನಂಬರ್​​ನಲ್ಲಿ ಮ್ಯಾಜಿಕ್​ ಮಾಡಿದ್ದ ನರಸಿಂಹರಾವ್​
ಇಂಟ್ರಸ್ಟಿಂಗ್​​​ ಅಂದ್ರೆ ಇದೇ ನೋಡಿ.. 1991ರ ಲೋಕಸಭಾ ಚುನಾವಣೆ ಫಲಿತಾಂಶವೇ ಈ ಬಾರಿಯೂ ಮರುಕಳಿಸಿದೆ. ಆಗ ಕಾಂಗ್ರೆಸ್​​​ 244 ಸ್ಥಾನ ಗೆದ್ದು ಐದು ವರ್ಷ ಅಧಿಕಾರ ಪೂರ್ಣ ಮಾಡಿತ್ತು. ಆಂಧ್ರದ ಮುತ್ಸದ್ಧಿ ನಾಯಕ ನರಸಿಂಹರಾವ್​​, ಜನತಾದಳದ ಬಾಹ್ಯ ಬೆಂಬಲದೊಂದಿಗೆ ಸರ್ಕಾರವನ್ನ ಮುನ್ನಡೆಸಿದ್ರು. ಆವತ್ತು ಕಾಂಗ್ರೆಸ್​​​ನ ನರಸಿಂಹರಾವ್​​​ ತಗೊಂಡ ದಿಟ್ಟ ನಿರ್ಧಾರಗಳು ಇವತ್ತು ಮೋದಿ ಸರ್ಕಾರದ ಆರ್ಥಿಕ ಸ್ಥಿತಿಗೆ ಫಲ ನೀಡ್ತಿದೆ. ಅವತ್ತು ನರಸಿಂಹರಾವ್​​ ಇದ್ರೆ ಇವತ್ತು ನರೇಂದ್ರ ಮೋದಿ ಅದೇ ಸ್ಥಿತಿಯಲ್ಲಿದ್ದಾರೆ ಅನ್ನೋದು ಅಚ್ಚರಿ ಎನಿಸಿದ್ರೂ ವಾಸ್ತವ.

ಇದನ್ನೂ ಓದಿ:ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!

https://newsfirstlive.com/wp-content/uploads/2024/06/Narendra-modi-3.jpg

Load More