newsfirstkannada.com

India vs Ireland: ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

Share :

Published June 5, 2024 at 9:43am

  ಇಂದು T20 ವಿಶ್ವಕಪ್​ನಲ್ಲಿ ಭಾರತ-ಐರ್ಲೆಂಡ್ ಫೈಟ್​​​​..!

  ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್​ ಕಾತರ

  ನಸ್ಸೌ ಮೈದಾನದಲ್ಲಿ ಯಾರಿಗೆ ವಿಜಯಮಾಲೆ..?

T20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲೆ ಐರ್ಲೆಂಡ್​ ಜೊತೆ ಕಾದಾಡಲಿದೆ. ಆನ್​​ ಪೇಪರ್​​​​ ಭಾರತವೇ ಗೆಲ್ಲುವ ಫೇವರಿಟ್​​​. ಹಾಗಂತ ಐರ್ಲೆಂಡ್​​ ತಂಡವನ್ನ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಬಲಾಢ್ಯ ತಂಡಗಳಿಗೆ ಟಕ್ಕರ್ ಕೊಡಬಲ್ಲ ಕೆಪಾಸಿಟಿ ಐರಿಷ್​​ ತಂಡಕ್ಕಿದೆ. ಇಂದಿನ ಹಣಾಹಣಿಯಲ್ಲಿ ಯಾವ ತಂಡದ ಬಲಾಬಲ ಹೇಗಿದೆ?

ಬಲಿಷ್ಠ ಭಾರತಕ್ಕೆ ಶಾಕ್ ಕೊಡಲು ಐರ್ಲೆಂಡ್​ ಸನ್ನದ್ಧ..!
ಟಿ20 ವಿಶ್ವಕಪ್​​​​​​​​ ರಣಕಣ ಕಾವೇರಿದೆ. ಟೂರ್ನಿಗೆ ಜೂನ್ 2​ ರಂದು ಅದ್ಧೂರಿ ಚಾಲನೆ ಸಿಕ್ಕಿದ್ದು, ಟೀಮ್ ಇಂಡಿಯಾ ಇಂದು ಅಧಿಕೃತವಾಗಿ ಅಖಾಡಕ್ಕೆ ಧುಮುಕಲಿದೆ. ನಸ್ಸೌ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ರೋಹಿತ್​​ ಶರ್ಮಾ ಪಡೆ ಐರ್ಲೆಂಡ್​​​​ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ. ಅದೇ ಹುಮ್ಮಸ್ಸಿನಲ್ಲಿ ಐರ್ಲೆಂಡ್​​​ ತಂಡಕ್ಕೆ ಶಾಕ್ ಕೊಡುವ ಇರಾದೆಯಲ್ಲಿದೆ.

ಇದನ್ನೂ ಓದಿ:ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?

ಐರ್ಲೆಂಡ್​ ತಂಡ ಡಮ್ಮಿ ಅಲ್ಲ, ಎಚ್ಚರ, ಎಚ್ಚರ..!
ಟೀಮ್ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧ ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿಯನ್ನ ಯಾವುದೇ ಕಾರಣಕ್ಕೂ ಲೈಟ್ ಆಗಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ಐರ್ಲೆಂಡ್​​​​​ ತಂಡ ಡಮ್ಮಿ ಅಲ್ಲವೇ ಅಲ್ಲ. ಬೆರಳು ಕೊಟ್ರೆ ಅಂಗೈಯೇ ನುಂಗಬಲ್ಲದು. ಯಾವುದೇ ಕ್ಷಣದಲ್ಲಿ ಫಿನಿಕ್ಸ್​​​​ ಮೇಲೆದ್ದು ಸೋಲಿನ ರುಚಿ ತೋರಿಸುವ ಶಕ್ತಿ ಐರ್ಲೆಂಡ್​​ ತಂಡಕ್ಕಿದೆ.

ಪ್ರಸಕ್ತ ಐಪಿಎಲ್​​ನಲ್ಲಿ ಬಲಾಢ್ಯವಲ್ಲದ ತಂಡಗಳು ಅದ್ಭುತವಾಗಿ ಆಡುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ಅಮೆರಿಕಾ ಕೆನಾಡವನ್ನ ಮಣಿಸಿದ್ರೆ, ಪಪುವಾ ನ್ಯೂಗಿನಿಯಾ ಮಾಜಿ ಚಾಂಪಿಯನ್​​​​ ವೆಸ್ಟ್​ಇಂಡೀಸ್​​ಗೆ ಪ್ರಬಲ ಪೈಪೋಟಿ ನೀಡಿದೆ. ತಿಣುಕಾಡಿದ ವಿಂಡೀಸ್​, ಜಸ್ಟ್​ 1 ಓವರ್​ ಉಳಿಸಿ ಗೆದ್ದು ಬೀಗ್ತು. ಇನ್ನು ಒಮನ್ ಕೂಡ ಅನುಭವಿ ನಮಿಬಿಯಾಗೆ ಟಫ್​ ಫೈಟ್ ಕೊಡ್ತು. ಹೀಗಾಗಿ ಇಂದು ಐರ್ಲೆಂಡ್​​ ಭಾರತಕ್ಕೆ ಕಠಿಣ ಸವಾಲು ಒಡ್ಡುವ ಲೆಕ್ಕಚಾರದಲ್ಲಿದೆ. ಸ್ವಲ್ಪ ಯಾಮಾರಿದ್ರೂ ಸೋಲಿನ ಪ್ರಪಾತಕ್ಕೆ ಬೀಳೋದು ಗ್ಯಾರಂಟಿ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ಚಾಂಪಿಯನ್​ ತಂಡಗಳಿಗೆ ಶಾಕ್​​ ಕೊಟ್ಟಿದೆ ಐರ್ಲೆಂಡ್​​..!
ಐರ್ಲೆಂಡ್​​ ಯಾಕೆ ಡೇಂಜರಸ್​ ಅನ್ನೋದಕ್ಕೆ ಇದೇ ಸಾಕ್ಷಿ. ಕಳೆದ ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್​ ಮಾಜಿ ಚಾಂಪಿಯನ್​ ವೆಸ್ಟ್​ಇಂಡೀಸ್​ಗೆ ಸೋಲಿನ ರುಚಿ ತೋರಿಸಿತ್ತು. ಗುಂಪು ಹಂತದಲ್ಲಿ ವಿಂಡೀಸ್​ ತಂಡವನ್ನ ಮಣಿಸಿ ಎಲ್ಲರನ್ನ ಅಚ್ಚರಿಗೆ ತಳ್ಳಿತ್ತು. ಇದೇ ಪಂದ್ಯಾವಳಿಯಲ್ಲಿ ಐರ್ಲೆಂಡ್​​​, ಇಂಗ್ಲೆಂಡ್​ ತಂಡಕ್ಕೂ ಬಿಗ್ ಶಾಕ್ ಕೊಟ್ಟಿತ್ತು. ಡೆಕ್ವತ್​​ ಲೂಯಿಸ್ ನಿಯಮದಡಿ 5 ರನ್​​​​​​​​​​ಗಳಿಂದ ಗೆದ್ದು, ಕ್ರಿಕೆಟ್ ಜನಕರಿಗೆ ಮರ್ಮಾಘಾತ ನೀಡಿತ್ತು. ಸೋ, ಇದು ಭಾರತಕ್ಕೆ ಇದು ಎಚ್ಚರಿಕೆ ಕರೆಗಂಟೆಯಾಗಿದೆ.

ಫೈರಿ ಸ್ಟಿರ್ಲಿಂಗ್​​​​, ಹ್ಯಾರಿ ಟೆಕ್ಟರ್​​​ ಬಿಗ್​ ಥ್ರೆಟ್​​..!
ಐರ್ಲೆಂಡ್​ ತಂಡದಲ್ಲಿ ಭಾರತಕ್ಕೆ ನೀರು ಕುಡಿಸುವ ಡೇಂಜರಸ್ ಬ್ಯಾಟ್ಸ್​​ಮನ್​ಗಳಿದ್ದಾರೆ. ಕ್ಯಾಪ್ಟನ್​​​ ಪಾಲ್​​​​​​​​ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್​​​​​, ಆಂಡ್ರ್ಯೂ ಬಾಲ್ಬಿರ್ನಿ ಹಾಗೂ ಕರ್ಟಿಸ್​​​​ ಕ್ಯಾಂಫರ್​​​ರಂತ ಟಿ20 ಸ್ಪೆಶಲಿಸ್ಟ್​ಗಳಿದ್ದಾರೆ. ನಿರ್ಭಯವಾಗಿ ದಂಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿ ಕೊಡಬಲ್ಲರು. ಕ್ಯಾಪ್ಟನ್ ರೋಹಿತ್ ಇವರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..

ಒಗ್ಗಟ್ಟಿನ ಮಂತ್ರ ಜಪಿಸಿದರಷ್ಟೇ ಭಾರತಕ್ಕೆ ಗೆಲುವು..!
ಭಾರತಕ್ಕಿಂದು ಗೆಲುವಂತೂ ಸುಲಭವಿಲ್ಲ. ಒಗ್ಗಟ್ಟಿನ ಮಂತ್ರ ಜಪಿಸಲೇಬೇಕಿದೆ. ಕಂಡಿಷನ್ ಹಾಗೂ ಸಿಚುವೇಶನ್​​ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭ್ಯಾಸದಲ್ಲಿ ಫೇಲಾಗಿದ್ದ ಕ್ಯಾಪ್ಟನ್ ರೋಹಿತ್​ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಫಾರ್ಮ್​ ಕಂಡುಕೊಳ್ಳಬೇಕಿದೆ. ಹಾಗಾದ್ದಲ್ಲಿ ಮಾತ್ರ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಸಾಧ್ಯ. ಹಾಗಾಗಲಿ ಎಂಬುದೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್​ ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

India vs Ireland: ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

https://newsfirstlive.com/wp-content/uploads/2024/06/IND-vs-IRL.jpg

Load More