newsfirstkannada.com

ಹಾಸನದಲ್ಲಿ ಸೋಲಿನ ಸುದ್ದಿ ಕೇಳ್ತಿದ್ದಂತೆ ಪ್ರಜ್ವಲ್ ರೇವಣ್ಣ ರಿಯಾಕ್ಷನ್ ಹೇಗಿತ್ತು?

Share :

Published June 4, 2024 at 2:34pm

Update June 4, 2024 at 2:35pm

  ವಿದೇಶದಿಂದ ಬರುತ್ತಿದ್ದಂತೆ ಪ್ರಜ್ವಲ್​​ನನ್ನ ಅರೆಸ್ಟ್ ಮಾಡಿದ್ದ SIT

  ರಿಸಲ್ಟ್​ ಬಗ್ಗೆ ಪ್ರಜ್ವಲ್​ಗೆ ಮಾಹಿತಿ ನೀಡಿದ್ರಾ SIT ಅಧಿಕಾರಿಗಳು..?

  ಇನ್ನು ಎರಡು ದಿನ ಎಸ್ಐಟಿ ಕಸ್ಟಡಿಯಲ್ಲಿ ಇರಲಿರುವ ಪ್ರಜ್ವಲ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಸನದ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣಗೆ ದೊಡ್ಡ ಆಘಾತ ಎದುರಾಗಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಕೇಸ್​ನಲ್ಲಿ ಎಸ್​ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ ಮೌನಕ್ಕೆ ಜಾರಿದ್ದಾರೆ. ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಗೆಲುವು ದಾಖಲಿಸಿದ್ದಾರೆ. ಅಲ್ಲದೇ ಎಲೆಕ್ಷನ್​ ಫಲಿತಾಂಶದ ಬಗ್ಗೆ ಎಸ್​ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪ್ರಜ್ವಲ್ ಫುಲ್​ ಸೈಲೆಂಟ್ ಆಗಿದ್ದಾರೆ.

ಇದನ್ನೂ ಓದಿ: ಜೈಲಿಂದಲೇ ಸ್ಪರ್ಧಿಸಿ ಲೀಡ್​ನಲ್ಲಿರೋ ಅಮೃತ್ ಪಾಲ್ ಸಿಂಗ್.. ಯಾವ ಕ್ಷೇತ್ರ?

ಇನ್ನು ಇದೇ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್​ನ ತನಿಖೆ ಮುಂದುವರೆಸಿದ್ದಾರೆ. ಇನ್ನೆರಡು ದಿನ ಮಾತ್ರ ಕಸ್ಟಡಿಯಲ್ಲಿ ಇರಲಿದ್ದು ಅಲ್ಲಿವರೆಗೆ ತನಿಖೆ ಮುಂದುವರೆಯಲಿದೆ. ಈ ವೇಳೆ ಪೇಪರ್ ವರ್ಕ್, ಸಾಕ್ಷ್ಯಗಳ ಸಂಗ್ರಹ, ಸ್ಟೇಟ್​​ಮೆಂಟ್​ ರೆಕಾರ್ಡ್ ಅನ್ನು ಎಸ್ಐಟಿ ಅಧಿಕಾರಿಗಳು ಮಾಡಲಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಬಿಜೆಪಿಗೆ ಬಿಗ್ ಶಾಕ್​.. ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಜಾರಕಿಹೊಳಿ

ಪೆನ್‌ಡ್ರೈವ್ ಪ್ರಕರಣ ಭಾರೀ ಚರ್ಚೆಯಾಗಿತ್ತು. ಇಡೀ ದೇಶದ ಗಮನವನ್ನೇ ಸೆಳೆದಿದ್ದರಿಂದ ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪಗಳಿದ್ದವು. ಸದ್ಯ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ವಶದಲ್ಲಿದ್ದು ತನಿಖೆ ಎದುರಿಸುತ್ತಿರುವ ಮಧ್ಯೆ ಸಂಸತ್ ಸದಸ್ಯ ಸ್ಥಾನವನ್ನೂ ಈಗ ಕಳೆದುಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ಅವರನ್ನು ಶ್ರೇಯಸ್ ಪಟೇಲ್ ಸೋಲಿಸಿ ಇತಿಹಾಸ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ಸೋಲಿನ ಸುದ್ದಿ ಕೇಳ್ತಿದ್ದಂತೆ ಪ್ರಜ್ವಲ್ ರೇವಣ್ಣ ರಿಯಾಕ್ಷನ್ ಹೇಗಿತ್ತು?

https://newsfirstlive.com/wp-content/uploads/2024/06/PRAJWAL-1.jpg

Load More