/newsfirstlive-kannada/media/post_attachments/wp-content/uploads/2023/11/DK-SHIVAKUMAR-2-1.jpg)
ಲೋಸಸಮರಕ್ಕೆ ಅಖಾಡ ರೆಡಿಯಾಗಿದೆ. ಭಾಸ್ಕರನ ಬಿಸಿಲಿನಂತೆ ರಣಕಣ ಕೂಡ ಕಾದು ಕಾದು ಸೇನಾನಿಗಳ ಕಾದಾಟಕ್ಕೆ ಎದುರು ನೋಡ್ತಿದೆ. ಈ ನಡುವೆ 20+ ಟಾರ್ಗೆಟ್​ ಇಟ್ಟುಕೊಂಡಿರುವ ಹಸ್ತ ಪಡೆ ಈ ನಿಟ್ಟಿನಲ್ಲಿ ಭಾರೀ ಕಸರತ್ತು ನಡೆಸ್ತಿದೆ. ಆದ್ರೆ ಜೋಡೆತ್ತುಗಳಿಗೆ ಆ 3 ಕ್ಷೇತ್ರಗಳು ಸವಾಲಾಗಿವೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಮೊದಲ ಹಂತದ ಚುನಾವಣೆಗೆ ಇನ್ನೇನು 2 ವಾರವಷ್ಟೇ ಬಾಕಿ. ಹೀಗಿರುವಾಗ ಲೋಕಸಮರದಲ್ಲಿ 20+ ಟಾರ್ಗೆಟ್​ ಇಟ್ಕೊಂಡಿರುವ ಹಸ್ತ ಪಡೆ ಶತಾಯಗತಾಯವಾಗಿ ಗುರಿ ಮುಟ್ಟಲು ಹರಸಾಹಸಪಡ್ತಿದೆ. ಆಯಾ ಕ್ಷೇತ್ರಗಳನ್ನು ಗೆಲ್ಲಲು ತರಹೇವಾರಿ ಪಟ್ಟುಗಳನ್ನು ಹಾಕುತ್ತಿದೆ. ಆದ್ರೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ಜೋಡೆತ್ತುಗಳಿಗೆ ಸದ್ಯ ಟಫ್​ ಟಾಸ್ಕ್​ ಎದುರಾಗಿದೆ.
/newsfirstlive-kannada/media/post_attachments/wp-content/uploads/2024/01/SIDDU-DKS-1.jpg)
ಚಾಮರಾಜನಗರ, ಮೈಸೂರು ಹಾಗೂ ಬೆಂಗಳೂರು ಗ್ರಾ. ಟಾರ್ಗೆಟ್​
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಎಂಬ ಜೋಡೆತ್ತುಗಳಿಗೆ 3 ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ಚಾಮರಾಜನಗರ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಗೆಲ್ಲಲೇಬೇಕಾದ ಸವಾಲಿದೆ. ತಮ್ಮ ತವರು ಕ್ಷೇತ್ರಗಳನ್ನ ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರೋದ್ರಿಂದ ಜೋಡೆತ್ತುಗಳು ತಮ್ಮ ತವರು ಕ್ಷೇತ್ರಗಳಲ್ಲಿ ನಿರಂತರ ದಂಡಯಾತ್ರೆ ಮಾಡ್ತಿದ್ದಾರೆ. ಆರ್.ಆರ್ ನಗರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಡಿಸಿಎಂ ಪ್ರಚಾರ ಮಾಡ್ತಿದ್ರೆ ಮೈಸೂರು, ಚಾಮರಾಜನಗರಕ್ಕೆ ಸಿದ್ದರಾಮಯ್ಯ ಪದೇ ಪದೇ ಭೇಟಿ ಕೊಟ್ಟು ಮತಬೇಟೆಯಾಡ್ತಿದ್ದಾರೆ.
ಸಿಎಂಗೆ ಅಗ್ನಿಪರೀಕ್ಷೆ
ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನ ಗೆಲ್ಲಲು ಸಿದ್ದು ಸರ್ಕಸ್​ ಮಾಡ್ತಿದ್ದಾರೆ. ಎರಡೂ ಕ್ಷೇತ್ರಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಖ್ಯಮಂತ್ರಿಯಾಗಿ ತವರು ಕ್ಷೇತ್ರಗಳನ್ನ ಗೆದ್ದರೆ ಸಿದ್ದರಾಮಯ್ಯಗೆ ಮತ್ತಷ್ಟು ಬಲ ಸಿಗಲಿದೆ. ಒಂದ್ವೇಳೆ ತವರು ಕ್ಷೇತ್ರಗಳನ್ನ ಸೋತರೆ ಮುಖ್ಯಮಂತ್ರಿಯಾಗಿರೋ ಕಾರಣ ಮುಖಭಂಗವಾಗಲಿದೆ. ಅದೇ ಲೋಕಸಭೆಯಲ್ಲಿ ಸೋಲಾದರೆ ಸಿದ್ದರಾಮಯ್ಯ ವರ್ಚಸ್ಸು ಕುಂಠಿವಾಗುವ ಭೀತಿ ಇದೆ.
ಇದು ಸಿಎಂ ಸಿದ್ದರಾಮಯ್ಯ ಕಥೆಯಾದ್ರೆ ಇನ್ನು ಡಿಸಿಎಂ ಡಿಕೆಶಿಯದ್ದು ಬೇರೆಯದೇ ಕಥೆ
/newsfirstlive-kannada/media/post_attachments/wp-content/uploads/2024/02/SIDDU-DKS-RAHUL.jpg)
ಡಿಸಿಎಂಗೆ ಅಗ್ನಿಪರೀಕ್ಷೆ
- ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಗೆಲ್ಲಲೇಬೇಕಾದ ಅನಿವಾರ್ಯತೆ
- ಸಹೋದರನ ಗೆಲುವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಡಿಸಿಎಂ ಡಿಕೆಶಿ
- ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಡಿಕೆ ಬ್ರದರ್ಸ್​ಗೆ ಗೆಲುವು ಸುಲಭದ ತುತ್ತಲ್ಲ
- ಸ್ವಕ್ಷೇತ್ರದಲ್ಲಿ ಸೋಲಾದ್ರೆ ಡಿ.ಕೆ ಶಿವಕುಮಾರ್​ ಸಿಎಂ ಕುರ್ಚಿ ಕನಸು ನುಚ್ಚುನೂರು
- ಸೋತರೆ ತವರು ಕ್ಷೇತ್ರದ ಹಿಡಿತ ತಪ್ಪುವ ಆತಂಕದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್
- ಹೈಕಮಾಂಡ್​ ನಾಯಕರ ನಂಬಿಕೆ ಉಳಿಸಿಕೊಳ್ಳಲು ಸಹೋದರನ ಗೆಲುವು ಮುಖ್ಯ
ಲೋಕಸಮರದಲ್ಲಿ ಕಾಂಗ್ರೆಸ್​ 20+ ಟಾರ್ಗೆಟ್​ ಇಟ್ಕೊಂಡಿದೆ. ಆದ್ರೆ ಸಿಎಂ ಡಿಸಿಎಂಗೆ ಇದರ ಜೊತೆಗೆ 3 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕಾದ ಸವಾಲಿದೆ. ಅದನ್ನು ಎಷ್ಟರ ಮಟ್ಟಿಗೆ ನಿಭಾಯಿಸ್ತಾರೆ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us