newsfirstkannada.com

ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

Share :

Published May 1, 2024 at 6:59am

Update May 1, 2024 at 7:00am

    ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್​​​ ಹೊಣೆಗಾರನಾಗಿಸಿದ ಅಮಿತ್​​ ಶಾ

    ಫಯಾಜ್​​ನಿಂದ​ ಕಾಲೇಜ್​​ ಕ್ಯಾಂಪಸ್​​ನಲ್ಲೇ ಹತ್ಯೆಯಾದ ನೇಹಾ ಹಿರೇಮಠ

    ಹುಬ್ಬಳ್ಳಿ ನೇಹಾ ನಿವಾಸಕ್ಕೂ ಭೇಟಿ ನೀಡ್ತಾರಾ ಗೃಹ ಸಚಿವ ಅಮಿತ್ ಶಾ.?

ರಾಜ್ಯದಲ್ಲಿ 2ನೇ ಹಂತದ ಮತಹಬ್ಬಕ್ಕೆ ಇನ್ನು 6 ದಿನ ಮಾತ್ರ ಬಾಕಿ ಉಳಿದಿದೆ. ಅಖಾಡದಲ್ಲಿ ಸೆಣಸಾಡಿ ವಿಜಯಲಕ್ಷ್ಮಿಯನ್ನ ಒಲಿಸಿಕೊಳ್ಳಲು ತವಕಿಸುತ್ತಿರೋ ಕೇಸರಿ ಕಲಿಗಳಿಗೆ ಇವತ್ತು ಅಮಿತ್​ ಶಾ ಬಲ ನೀಡಲಿದ್ದಾರೆ. ಎನ್​​ಡಿಎ ಮಿತ್ರ ಪಕ್ಷ ಜೆಡಿಎಸ್​​​ನ ಪ್ರಜ್ವಲ್​​ ಪ್ರಕರಣದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಮಿತ್​ ಶಾ ಆಗಮಿಸುತ್ತಿದ್ದಾರೆ.

ಪ್ರಜ್ವಲ್​ ಪ್ರಕರಣವನ್ನ ಹಿಡಿದು ಎಳೆದಾಡ್ತಿರುವ ಕಾಂಗ್ರೆಸ್​​

ಅತ್ತ ಪ್ರಜ್ವಲ್​​​ ಪ್ರಕರಣವನ್ನ ಕಾಂಗ್ರೆಸ್​​​ ಎಳೆದಾಡ್ತಿದೆ. ಆದ್ರೆ, ಇದಕ್ಕೆ ಕೌಂಟರ್​​ ಎನ್ನುವಂತೆ ನೇಹಾ ಪ್ರಕರಣಕ್ಕೆ ಬಿಜೆಪಿ ಮರುಜೀವ ನೀಡುತ್ತಿದೆ. ರಾಜ್ಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡ್ತಿರೋ ಹೊತ್ತಲ್ಲೇ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸ್ತಿದ್ದಾರೆ. ಫಯಾಜ್​​​ ಎಂಬ ಕಿಡಿಗೇಡಿಯಿಂದ ಕಾಲೇಜ್​​ ಕ್ಯಾಂಪಸ್​​ನಲ್ಲೇ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್​​ಗೆ ಚೆಕ್​​ಮೇಟ್​​ ಇಡಲಿದ್ದಾರೆ ಎಂದು ಗೊತ್ತಾಗಿದೆ.

ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ಚುನಾವಣಾ ಚಾಣಕ್ಯ ಎಂಟ್ರಿ

ರಾಜ್ಯದಲ್ಲಿ ಎರಡು ದಿನ ಮೋದಿ ಮೂಲಕ ಮತಬೇಟೆಯಾಡಿಸಿದ್ದ ಕೇಸರಿ ಕಲಿಗಳು ಸದ್ಯ ಚುನಾವಣಾ ಚಾಣಕ್ಯ ಅಮಿತ್ ಶಾರನ್ನ ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ. ಮಧ್ಯಾಹ್ನ 3.20ಕ್ಕೆ ಹುಬ್ಬಳ್ಳಿಗೆ ಅಮಿತ್​ ಶಾ ಎಂಟ್ರಿಕೊಡಲಿದ್ದಾರೆ. ಹುಬ್ಬಳಿಗೆ ಆಗಮಿಸಿ ಹಾವೇರಿಗೆ ಪ್ರಯಾಣ ಬೆಳೆಸಲಿರೋ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ರಾಣೆಬೆನ್ನೂರಿನಲ್ಲಿ ಅಮಿತ್​ ಶಾ ಬೃಹತ್ ರೋಡ್​ಶೋ ನಡೆಸಲಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನೇ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾದ ಗಂಡ; ಅಸಲಿಗೆ ನಡೆದಿದ್ದೇನು?

ರೋಡ್ ​ಶೋ ಬಳಿಕ ಹುಬ್ಬಳ್ಳಿಗೆ ತೆರಳಲಿರುವ ಅಮಿತ್ ಶಾ ಸಂಜೆ 5.45ಕ್ಕೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಲ್ಹಾದ್ ಜೋಶಿ ಪರ ಮತಬೇಟೆ ನಡೆಸಲಿದ್ದಾರೆ.. ಈ ಕಾರ್ಯಕ್ರಮದ ಬಳಿಕ ರಾತ್ರಿ 7:30ಕ್ಕೆ ಅಮಿತ್​ ಶಾ ಹೈದರಾಬಾದ್​ಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ನೇಹಾ ಕುಟುಂಬಸ್ಥರನ್ನ ಅಮಿತ್​ ಶಾ ಭೇಟಿ ಮಾಡ್ತಾರಾ ಅನ್ನೋ ನಿರೀಕ್ಷೆ ಇದೆ.

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ರಾಜ್ಯಕ್ಕೆ ಎಂಟ್ರಿಕೊಡಲಿರೋ ಅಮಿತ್ ಶಾ, ಹಾಸನ ಕೇಸ್​ ಬಗ್ಗೆ ಮಾತಾಡ್ತಾರಾ ಅನ್ನೋ ಕುತೂಹಲ ಇದೆ.. ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್​​​ನ್ನೇ ಹೊಣೆಗಾರನನ್ನಾಗಿಸಿದ್ದ ಅಮಿತ್​​ ಶಾ, ಇವತ್ತಿನ ಸಮಾವೇಶದಲ್ಲಿ ಪ್ರಸ್ತಾಪಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

https://newsfirstlive.com/wp-content/uploads/2024/02/AMIT-SHAH-3.jpg

Load More