newsfirstkannada.com

ಪ್ರಚಾರದ ವೇದಿಕೆಯಲ್ಲೇ ಭಾರೀ ಹೈಡ್ರಾಮಾ.. ಮುಖಂಡರ ಗಲಾಟೆಯಿಂದ ಸಿದ್ದರಾಮಯ್ಯಗೆ ಮುಜುಗರ..!

Share :

Published May 1, 2024 at 7:35am

    ಕಾಂಗ್ರೆಸ್​ ನಾಯಕರನ್ನ ಸಮಾಧಾನಕ್ಕೆ ಸಿದ್ದರಾಮಯ್ಯ ಆಗಮಿಸಿದ್ರಾ?

    ಸಿಎಂ ಸಾಹೇಬ್ರು ಇದ್ದಾರೆ ಅನ್ನೋದನ್ನೂ ಮರೆತು ವೈಷಮ್ಯ ಸಾಧನೆ

    ಶಿವರಾಜ್​ ತಂಗಡಗಿ ಮಾತಿಗೂ ಡೋಂಟ್​ ಕೇರ್ ಎಂದ ನಾಯಕ

ಒಂದ್ಕಡೆ ರಾಜ್ಯ ರಾಜಕೀಯ ರಣರಂಗದಲ್ಲಿ ಲೋಕಸಭೆ ಚುನಾವಣೆ ಪರ್ವ. ಮತ್ತೊಂದು ಕಡೆ ಕಳೆದ ವಿಧಾನಸಭೆ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರ. ಇದೇ ಲೆಕ್ಕಾಚಾರ ಸದ್ಯ ಕೊಪ್ಪಳದ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಹೈಡ್ರಾಮಾಕ್ಕೆ ಕಾರಣವಾಗಿದೆ. ಇಬ್ಬರು ನಾಯಕರ ಟಾಕ್​ ವಾರ್​ಗೆ ವೇದಿಕೆಯಾಗಿದೆ.

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ.. ಆದ್ರೆ ಚುನಾವಣೆ ಬಂತಂದ್ರೆ ಸಾಕು ಆಕಸ್ಮಿಕ ಶತ್ರುಗಳು, ಆಕಸ್ಮಿಕ ಮಿತ್ರರು ಹುಟ್ಟಿಕೊಳ್ತಾರೆ. ಸದ್ಯ ಇದೇ ರಾಜಕೀಯದ ಶತ್ರುತ್ವ, ಟಾಕ್ ಫೈಟ್​ಗೆ ಕೊಪ್ಪಳದ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್​ ಸಾಮಾವೇಶ ಸಾಕ್ಷಿಯಾಗಿದೆ. ವೇದಿಕೆ ಮೇಲೆಯೇ​ ಇಬ್ಬರು ಕಾಂಗ್ರೆಸ್​ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳ ಸಿಡಿಗುಂಡು ಸಿಡಿಸಿದ್ದಾರೆ. ​​​​​

ಇಕ್ಬಾಲ್​ ಅನ್ಸಾರಿ & ಹೆಚ್​.ಆರ್.ಶ್ರೀನಾಥ್​ ನಡುವೆ ಟಾಕ್​ ವಾರ್​

ನಿನ್ನೆ ಕೊಪ್ಪಳದ ಗಂಗಾವತಿಯಲ್ಲಿ ಕಾಂಗ್ರೆಸ್​ ಪಕ್ಷದ ಸಮಾವೇಶ ನಡೆದಿತ್ತು.. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿಯಾಗಿದ್ರು. ಈ ವೇಳೆ ವೇದಿಕೆ ಮೇಲೆ ಮೈಕ್ ಹಿಡಿದು ಭಾಷಣ ಆರಂಭಿಸಿದ ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ತಮ್ಮ ವಿಧಾನ ಸಭೆ ಸೋಲಿನ ಕಹಿ ನೆನಪುಗಳನ್ನ ಮೆಲುಕು ಹಾಕ ತೊಡಗಿದ್ರು. ಪರೋಕ್ಷವಾಗಿ ನನ್ನ ಸೋಲಿಗೆ ಹೆಚ್​.ಆರ್.ಶ್ರೀನಾಥ್ ಬಣ ಕಾರಣ ಅಂತ ಮಾತಲ್ಲೇ ತಿವಿಯ ತೊಡಗಿದ್ರು.

ಗಂಗಾವತಿಯಲ್ಲಿ ಯಾರು ಯಾರು ಏನು ಮಾಡಿದ್ದಾರೋ ಗೊತ್ತಿದೆ. ನಾನು ಯಾರಿಗೂ ಹೆದರುವನಲ್ಲ. ನನಗೆ ರಾಜಕೀಯನೇ ಮುಖ್ಯವಲ್ಲ. ನಮ್ಮಪ್ಪ ಏನು ರಾಜಕೀಯದಲ್ಲೇ ಜೀವನ ಮಾಡು ಅಂತ ಹುಟ್ಟಿಸಿಲ್ಲ. ಆಕಸ್ಮಿಕವಾಗಿ ಗಂಗಾವತಿ ಅಭಿವೃದ್ಧಿ ಮಾಡುವುದಕ್ಕೆ ಬಂದವನು. ನೀವು ಆಶೀರ್ವಾದ ಮಾಡಿದರೆ ಕೆಲಸ ಮಾಡ್ತೀನಿ. ಇಲ್ಲಂದರೆ ಹೆಂಡತಿ, ಮಕ್ಕಳ ಜೊತೆ ನನ್ನ ಕೆಲಸ ನಾನು ನೋಡ್ಕೊಂತಿನಿ. ನನಗೇನು ಭಯವಿಲ್ಲ.

ಇಕ್ಬಾಲ್​ ಅನ್ಸಾರಿ, ಮಾಜಿ ಸಚಿವ

ಇಕ್ಬಾಲ್​ ಅನ್ಸಾರಿ ವಿರುದ್ಧ ವೇದಿಕೆ ಮೇಲೆ ಶ್ರೀನಾಥ್ ಗರಂ

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೀಗೆ ಮಾತಿನ ಸಿಡಿಗುಂಡುಗಳನ್ನ ಸಿಡಿಸುತ್ತಿದ್ದಂತೆ ಇದರ ಬಿಸಿ ವೇದಿಕೆ ಮೇಲಿದ್ದ ಹೆಚ್​.ಆರ್.ಶ್ರೀನಾಥ್​​ಗೆ ನಾಟಿತ್ತು. ನೋಡೋವಷ್ಟು ನೋಡಿ ಕುರ್ಚಿಯಿಂದ ಎದ್ದುನಿಂತ ಹೆಚ್​.ಆರ್.ಶ್ರೀನಾಥ್​ ನನಗೂ ಮಾತನಾಡಲು ಅವಕಾಶಕೊಡಿ ಅಂತ ಪಟ್ಟು ಹಿಡಿದು ನಿಂತ್ರು.

ಸಚಿವ ಶಿವರಾಜ್​ ತಂಗಡಗಿ ಮಾತಿಗೂ ಡೋಂಟ್​ ಕೇರ್ ಎಂದ ಶ್ರೀನಾಥ್​ರನ್ನ ಸಮಾಧಾನ ಪಡಿಸಲು ಸ್ವತಃ ಸಿದ್ದರಾಮಯ್ಯನವರೇ ಮಧ್ಯಪ್ರವೇಶಿಸಿದ್ರು. ಆಯ್ತು ಮಾತನಾಡಿ ಆದರೆ ಮಾತಿನ ಮೇಲೆ ಹಿಡಿತ ಇರಲಿ ಅಂತ ವಾರ್ನಿಂಗ್ ನೀಡಿದ್ರು.. ವೇದಿಕೆ ಮಾತನಾಡಲು ಆರಂಭಿಸಿದ ಶ್ರೀನಾಥ್​ ನಮ್ಮ ಕುಟುಂಬದ ವಿರುದ್ಧ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ ಅಂತ ಪರೋಕ್ಷವಾಗಿ ಇಕ್ಬಾಲ್ ಅನ್ಸಾರಿಗೆ ಕೌಂಟರ್​ ಕೊಟ್ರು.. ಅಲ್ಲದೇ ನಮ್ಮ ಅಭ್ಯರ್ಥಿ ಕೆ.ರಾಜಶೇಖರ್​ ಹಿಟ್ನಾಳ್​ಗೆ ಮತ ಹಾಕಿ ಅಂತ ಅನ್ಸಾರಿಗೆ ಕುಟುಕಿದ್ರು.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

ಕೆಲವು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇವತ್ತು ನಿಜವಾಗ್ಲೂ ಸಿಎಂ ಸಿದ್ದರಾಮಯ್ಯರ ಹಿಂದೆ ಇದ್ದೇವೆ. ಕಾಂಗ್ರೆಸ್​ ಪಕ್ಷದ ಪರವಾಗಿ ಇದ್ದೇವೆ. ನಮ್ಮ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ್​ಗೆ ಮತ ಹಾಕಿ.

ಹೆಚ್​.ಆರ್.ಶ್ರೀನಾಥ್, ಕಾಂಗ್ರೆಸ್​ ಮುಖಂಡ

ಈ ಇಬ್ಬರೂ ನಾಯಕರ ಟಾಕ್ ವಾರ್ ತಣ್ಣಗಾಗೋ ಹೊತ್ತಿಗೆ​ ಗಂಗಾವತಿಯಲ್ಲಿ ಮಳೆ ಬಂದು ನಿಂತು ಹೋದ ಹಾಗಾಗಿತ್ತು.. ಆರೋಪ-ಪ್ರತ್ಯಾರೋಪಗಳ ಸಿಡಿಮದ್ದು ಸಿಡಿಸಿದ ಇಕ್ಬಾಲ್​ ಅನ್ಸಾರಿ ಹಾಗೂ ಹೆಚ್​.ಆರ್.ಶ್ರೀನಾಥ್​ ತಮ್ಮ ಹಳೇ ಮುನಿಸನ್ನ ವೇದಿಕೆ ಮೇಲೆ ಪ್ರದರ್ಶನಕ್ಕಿಟ್ಟಿದ್ರು.. ಸಿಎಂ ಸಾಹೇಬ್ರು ಇದ್ದಾರೆ ಅನ್ನೋದನ್ನೂ ಮರೆತ ನಾಯಕರು ಹೀಗೆ ಟಾಕ್ ವಾರ್​ಗೆ ಇಳಿದಿದ್ದು ಕಾಂಗ್ರೆಸ್​ ನಾಯಕರಿಗೆ ಇರಿಸು ಮುರುಸು ತಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಚಾರದ ವೇದಿಕೆಯಲ್ಲೇ ಭಾರೀ ಹೈಡ್ರಾಮಾ.. ಮುಖಂಡರ ಗಲಾಟೆಯಿಂದ ಸಿದ್ದರಾಮಯ್ಯಗೆ ಮುಜುಗರ..!

https://newsfirstlive.com/wp-content/uploads/2024/05/CM_SIDDU.jpg

Load More