Advertisment

ಜೀಪ್‌- ಬಸ್‌ ನಡುವೆ ಭೀಕರ ಅಪಘಾತ.. ಎಲೆಕ್ಷನ್​ ಭದ್ರತೆಗೆ ತೆರಳ್ತಿದ್ದ ರಾಜ್ಯದ ಮೂವರು ಪೊಲೀಸರು ಸಾವು, ಇಬ್ಬರು ಗಂಭೀರ

author-image
Bheemappa
Updated On
ಜೀಪ್‌- ಬಸ್‌ ನಡುವೆ ಭೀಕರ ಅಪಘಾತ.. ಎಲೆಕ್ಷನ್​ ಭದ್ರತೆಗೆ ತೆರಳ್ತಿದ್ದ ರಾಜ್ಯದ ಮೂವರು ಪೊಲೀಸರು ಸಾವು, ಇಬ್ಬರು ಗಂಭೀರ
Advertisment
  • ಅಪಘಾತದಲ್ಲಿ KSRP ಅಧಿಕಾರಿ, ಕಾನ್​ಸ್ಟೇಬಲ್ ಸೇರಿದಂತೆ 3 ಸಾವು
  • ಮೂವರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ
  • ಅಪಘಾತದ ರಭಸಕ್ಕೆ ಜೀಪ್‌ ಛಿದ್ರ, ಬಸ್‌ನ ಮುಂಭಾಗ ಸಹ ಜಖಂ

ದೇಶಾದ್ಯಂತ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಏ.​26ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಚುನಾವಣಾ ಆಯೋಗ ಭರದ ಸಿದ್ಧತೆ ಮಾಡ್ತಿದೆ. ಚುನಾವಣೆ ನಿಮಿತ್ತ ಭದ್ರತೆ ತೆರಳಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ದುರಂತಕ್ಕೀಡಾಗಿದ್ದಾರೆ.

Advertisment

ಎಲ್ಲೆಡೆ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಪೊಲೀಸ್​ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಇದೇ ರೀತಿ ಕೆಲಸಕ್ಕೆ ಹೋದ ವೇಳೆ ರಾಜ್ಯದ ಅಧಿಕಾರಿಗಳು ತಮಿಳುನಾಡಿನಲ್ಲಿ ಪ್ರಾಣ ತೆತ್ತಿದ್ದಾರೆ.

ಇದನ್ನೂ ಓದಿ:ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ

publive-image

ತಮಿಳುನಾಡಿನಲ್ಲಿ ಬಸ್-ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಐವರು ಪೊಲೀಸ್‌ ಅಧಿಕಾರಿಗಳು ಹೋಗುತ್ತಿದ್ದ ಜೀಪ್‌ ಮತ್ತು ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ತಮಿಳುನಾಡಿನ ತಿರುವಣ್ಣಾಮಲೈ ಹಾಗೂ ದಿಂಡಿವನಂ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ಕರ್ನಾಟಕದ ಓರ್ವ ಅಧಿಕಾರಿ ಹಾಗೂ ಕಾನ್​ಸ್ಟೇಬಲ್ ಸೇರಿ ಮೂವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕರ್ನಾಟಕದಿಂದ ಎಲೆಕ್ಷನ್ ಡ್ಯೂಟಿಗೆ ಹೋಗಿದ್ದ ಪೊಲೀಸ್ ಅಧಿಕಾರಿ, KSRP ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್, ಕಾನ್ಸ್‌ಟೇಬಲ್ ವಿಠಲ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟಿದ್ದಾರೆ.

Advertisment

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

publive-image

ಇದನ್ನೂ ಓದಿ: ದಿನಕ್ಕೆ 2 ರಿಂದ 3 ಬಾಟಲ್​ ಲಾಫಿಂಗ್​ ಗ್ಯಾಸ್ ಸೇವನೆ.. ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ವಿದ್ಯಾರ್ಥಿನಿ

ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತದೆ.

Advertisment

ಇನ್ನು ಅಪಘಾತದ ರಭಸಕ್ಕೆ ಜೀಪ್‌ ಛಿದ್ರವಾಗಿದ್ದು, ಬಸ್‌ನ ಮುಂಭಾಗ ಸಹ ಜಖಂ ಆಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸಿಬ್ಬಂದಿ ಹೇಮಂತ್ ಕುಮಾರ್, ಜಯಕುಮಾರ್ ಅವರನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment