newsfirstkannada.com

ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾರು?

Share :

Published April 19, 2024 at 6:37am

Update April 19, 2024 at 2:57pm

  2024ರ ‘ಲೋಕ’ಕದನದ ಮೊದಲ ಅಧ್ಯಾಯ ಇವತ್ತು

  21 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ

  ಚಿರಾಗ್ ಪಾಸ್ವಾನ್, ಅಣ್ಣಾಮಲೈ ಸೇರಿ ಹಲವರ ಭವಿಷ್ಯ ನಿರ್ಧಾರ

ಲೋಕಸಭಾ ಮತಯುದ್ಧದ ಸುದೀರ್ಘ ಸಮರದಲ್ಲಿ ಮೊದಲ ಅಧ್ಯಾಯ ಇಂದಿನಿಂದ ಶುರುವಾಗಿದೆ. ಮೊದಲ ಹಂತದ ಮತದಾನ 7 ಗಂಟೆಯಿಂದಲೇ ಆರಂಭವಾಗಿದ್ದು, ಮತದಾರ ಪ್ರಭುಗಳು ಅಭ್ಯರ್ಥಿಗಳ ಭವಿಷ್ಯ ಬರೀತಿದ್ದಾರೆ.

102 ಕ್ಷೇತ್ರಗಳಿಗಿಂದು ಮೊದಲ ಹಂತದ ಮತದಾನ
ಏಳು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಇಂದು ಮೊದಲ ಹಂತ. ದೇಶದ ಒಟ್ಟು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೀತಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಬಹುತೇಕ ಎಲ್ಲಾ ಕೇಂದ್ರಗಳಲ್ಲೂ ವೋಟಿಂಗ್ ಪ್ರಕ್ರಿಯೆ ಶುರುವಾಗಿದೆ.

ಇದನ್ನೂ ಓದಿ:ಇದು ಕೊಹ್ಲಿಯ ಹೊಸ ಅಧ್ಯಾಯ.. ಹೊಸ ಅವತಾರ..! ರನ್​ ಮಷೀನ್​ 3.O ವರ್ಸನ್​!

ಮೊದಲ ಹಂತದ ‘ಮತ’ಯುದ್ಧ!

 • 21 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ
 • ತಮಿಳುನಾಡಿನ 39, ರಾಜಸ್ಥಾನದ 12 ಕ್ಷೇತ್ರಗಳಿಗೆ ಮತದಾನ
 • ಉ.ಪ್ರದೇಶದ 8 , ಮಧ್ಯ ಪ್ರದೇಶದ 6 ಕ್ಷೇತ್ರಕ್ಕೆ ವೋಟಿಂಗ್​
 • ಉತ್ತರಾಖಂಡ 5, ಮಹಾರಾಷ್ಟ್ರ 5 ಕ್ಷೇತ್ರಗಳು, ಅಸ್ಸಾಂನ 5
 • ಬಿಹಾರದ 4 , ಪ. ಬಂಗಾಳದ 3, ಮಣಿಪುರ 2 ಕ್ಷೇತ್ರಗಳು
 • ಅರುಣಾಚಲ ಪ್ರದೇಶ 2 , ಮೇಘಾಲಯ 2, ಪುದುಚೆರಿ
 • ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ
 • ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್
 • ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ

ಕೆಲವು ಪ್ರಮುಖ ಅಭ್ಯರ್ಥಿಗಳು ಇಂದು ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿರೋ ಇಂಪಾರ್ಟೆಂಟ್ ಕ್ಯಾಂಡಿಡೇಟ್ಸ್​ ನೋಡೋದಾದ್ರೆ, ಅದರಲ್ಲಿ ಅಣ್ಣಾಮಲೈ ಹೆಸರು ಮುಂಚೂಣಿಯಲ್ಲಿ ಬರುತ್ತೆ.

ಅಖಾಡದಲ್ಲಿರೋ ಘಟಾನುಘಟಿಗಳು

ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿರೋ ಮಾಜಿ ಐಪಿಎಸ್ ಕೆ.ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇಂದು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ತಮಿಳರ ನೆಲದಲ್ಲಿ ಬಿಜೆಪಿಗೆ ಹೊಸ ಭರವಸೆಯಂತೆ ಕಾಣಿಸಿರೋ ಅಣ್ಣಾಮಲೈ ಇಂದು ಮತದಾನ ಎದುರಿಸಲಿದ್ದಾರೆ. ತೂತುಕ್ಕುಡಿಯಿಂದ ಸ್ಪರ್ಧಿಸಿರೋ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನಿಮೊಳಿ ಕ್ಷೇತ್ರದಲ್ಲೂ ಇಂದು ವೋಟಿಂಗ್ ನಡೆಯಲಿದೆ. ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಹಾರದ ಜಮುಯಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅಲ್ಲೂ ಇಂದು ಮತದಾನ ನಡೀತಿದೆ. ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಪುತ್ರ ನಕುಲ್ ನಾಥ್ ಛಿಂದ್ವಾರಾದಿಂದ ಕಣಕ್ಕಿಳಿದಿದ್ದು, ತಮ್ಮ ಅದೃಷ್ಟ ಪರೀಕ್ಷೆ ನೋಡ್ತಿದ್ದಾರೆ. ತೆಲಂಗಾಣದ ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜನ್ ಕೂಡ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..

ಒಟ್ನಲ್ಲಿ, 102 ಕ್ಷೇತ್ರಗಳ ಅಭ್ಯರ್ಥಿಗಳ ಲೋಕಸಭಾ ಭವಿಷ್ಯ ಬರೆಯೋಕೆ ಆರಂಭಿಸಿದ್ದಾರೆ. 7 ಗಂಟೆಯಿಂದಲೇ ಆರಂಭವಾಗಿರೋ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮತದಾರರು ಮತಗಟ್ಟೆಯತ್ತ ಮುಖ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾರು?

https://newsfirstlive.com/wp-content/uploads/2024/04/ANNAMALAI.jpg

Load More