newsfirstkannada.com

ಮಹಿಳಾ ಪಿಡಿಒಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಗ್ ಶಾಕ್.. ಯಾರಿವರು..?

Share :

Published March 27, 2024 at 10:48am

Update March 27, 2024 at 10:50am

    ಒಂದೇ ಬ್ಯಾಚ್ ಮೇಟ್ ಪಿಡಿಒ ನಿವಾಸದ ಮೇಲೆ ಲೋಕಾ ದಾಳಿ

    ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ

    ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳಿಂದ ಬಿಗ್ ಶಾಕ್​

ರಾಮನಗರ: ಇಂದು ರಾಜ್ಯಾದ್ಯಂತ 60 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; 60 ಕಡೆಗಳಲ್ಲಿ ದಿಢೀರ್ ದಾಳಿ

ಇದೀಗ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಯತೀಶ್ ಹಾಗೂ ಶಿಭಾ ನಿಖಾತ್ ಮನೆ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಿಭಾ ನಿಖಾತ್ ಚನ್ನಪಟ್ಟಣ ತಾಲೂಕಿನ ಮೈನಾಯಕನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿಭಾ ಅವರು ಚನ್ನಪಟ್ಟಣದಲ್ಲಿ ಸ್ವಂತ ಮನೆಯನ್ನು ಹೊಂದಿದ್ದರು. ಇಂದು ಏಕಾಏಕಿ ಶಿಭಾ ಅವರ ನಿವಾಸದ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜೊತೆಗೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಯತೀಶ್ ಮನೆ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು, ಯತೀಶ್ ಹಾಗೂ ಶಿಭಾ ನಿಖಾತ್ ಒಂದೇ ಬ್ಯಾಚ್ ಮೇಟ್ ಪಿಡಿಒಗಳು. ‌ಮಂಚನಾಯಕನಹಳ್ಳಿ ಗ್ರಾ.ಪಂ. ಪಿಡಿಒ ಆಗಿರೋ ಯತೀಶ್​ ಅವ್ರು​ ಸಮಾರು 20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನು ವಶಕ್ಕೆ  ಪಡೆದುಕೊಂಡ ಅಕ್ರಮ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳಾ ಪಿಡಿಒಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಗ್ ಶಾಕ್.. ಯಾರಿವರು..?

https://newsfirstlive.com/wp-content/uploads/2024/03/loka-raid-1.jpg

Load More