Advertisment

ಸಿಎಂ ಸಿದ್ದು ಬೆನ್ನಲ್ಲೇ HDKಗೂ ಸಂಕಷ್ಟ.. ಪ್ರಾಸಿಕ್ಯೂಷನ್‌ಗೆ ಗವರ್ನರ್​ ಅನುಮತಿ ಕೊಡ್ತಾರಾ?

author-image
admin
Updated On
ಸಿಎಂ ಸಿದ್ದು ಬೆನ್ನಲ್ಲೇ HDKಗೂ ಸಂಕಷ್ಟ.. ಪ್ರಾಸಿಕ್ಯೂಷನ್‌ಗೆ ಗವರ್ನರ್​ ಅನುಮತಿ ಕೊಡ್ತಾರಾ?
Advertisment
  • ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಳ್ಳಾರಿಯಲ್ಲಿ ಜಾಗ ಮಂಜೂರು
  • ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್​ರಿಂದ ಗವರ್ನರ್​ಗೆ 2ನೇ ಪತ್ರ
  • ನ್ಯಾ. ಸಂತೋಷ್ ಹೆಗಡೆ ವರದಿಯನ್ನ ಆಧರಿಸಿ ತನಿಖೆ ಮಾಡ್ತಿರೋ SIT

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತನಿಖೆಗೆ ಅನುಮತಿ ನೀಡಿದ್ದಾರೆ. ಇದಾದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಗಣಿ ಸಂಕಷ್ಟ ಎದುರಾಗಿದ್ದು, ಪ್ರಾಸಿಕ್ಯೂಷನ್‌ ಸುಳಿಯಲ್ಲಿ ಸಿಲುಕಿದ್ದಾರೆ.

Advertisment

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್.. ಕೋರ್ಟ್‌ನಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವೇನು?

ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ 2ನೇ ಬಾರಿ ಪತ್ರವನ್ನು ರಾಜ್ಯಪಾಲರಿಗೆ ರವಾನೆ ಮಾಡಿದೆ. ನಿನ್ನೆ ಸಂಜೆಯೇ ಲೋಕಾಯುಕ್ತ ವಿಶೇಷ ತನಿಖಾ ತಂಡದ ಪತ್ರ ರಾಜ್ಯಭವನವನ್ನು ತಲುಪಿದೆ.

publive-image

ಏನಿದು ಪ್ರಕರಣ? ದಳಪತಿಗೂ ಢವ ಢವ!
2007ರಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಳ್ಳಾರಿಯಲ್ಲಿ ಜಾಗ ಮಂಜೂರು ಮಾಡಲಾಗಿತ್ತು. ಸಾಯಿ ವೆಂಕಟೇಶ್ವರ ಮಿನರಲ್ಸ್​ಗೆ 550 ಎಕರೆ ಜಾಗ ಗಣಿ ಗುತ್ತಿಗೆಗೆ ಹೆಚ್‌ಡಿಕೆ ಮಂಜೂರು ನೀಡಿದ್ದರು. ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್​ಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಆರೋಪ ಕೇಳಿ ಬಂದಿದೆ.

Advertisment

publive-image

ಈಗಾಗಲೇ ಸುಪ್ರೀಂಕೋರ್ಟ್​ನಲ್ಲಿ ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ವಿಶೇಷ ತನಿಖಾ ತಂಡ ನಿವೃತ್ತ ನ್ಯಾ. ಸಂತೋಷ್ ಹೆಗಡೆ ವರದಿಯನ್ನು ಆಧರಿಸಿ ತನಿಖೆ ಮಾಡುತ್ತಿದೆ. 2011ರಲ್ಲೇ ಲೋಕಾಯುಕ್ತ ಸಂತೋಷ್​ ಹೆಗಡೆ ವರದಿಯಲ್ಲಿ ಗಣಿ ಗುತ್ತಿಗೆಯಲ್ಲಿ ಅಕ್ರಮ ಆಗಿದೆ ಎಂದು ಉಲ್ಲೇಖವಾಗಿತ್ತು. ಆದರೆ ಈ ಬಗ್ಗೆ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಸಿಕ್ಕಿರಲಿಲ್ಲ. ಇದೀಗ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್​ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಮತ್ತೆ ಗವರ್ನರ್​ಗೆ 2ನೇ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: 40 ವರ್ಷದಲ್ಲೇ ಸಿದ್ದರಾಮಯ್ಯಗೆ ಬಿಗ್‌ ಶಾಕ್‌.. ಸಿಎಂ ಸ್ಥಾನಕ್ಕೆ ಎದುರಾಗೋ 10 ಪರಿಣಾಮಗಳೇನು?

ರಾಜ್ಯಪಾಲರ ಅನುಮತಿ ಯಾಕೆ?
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ಕ್ಕೆ 2018ರಲ್ಲಿ ತಿದ್ದುಪಡಿ ಆಗಿದೆ. ಅಲ್ಲಿವರೆಗೂ ಜನಪ್ರತಿನಿಧಿಗಳ ಮೇಲೆ ದೂರು ಸಲ್ಲಿಸುವಂತಿರಲಿಲ್ಲ. ನಿವೃತ್ತ ಅಧಿಕಾರಿಗಳ ವಿರುದ್ಧವೂ ದೂರು ಸಲ್ಲಿಸಲು ಅವಕಾಶವಿರಲಿಲ್ಲ. 2018ರ ತಿದ್ದುಪಡಿಯ ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯವಿದೆ. ಅಪರಾಧ ಹಿಂದೆಯೇ ನಡೆದಿದ್ದರೂ ತಿದ್ದುಪಡಿಯಿಂದಾಗಿ ಅನುಮತಿ ಅಗತ್ಯವಿದೆ. ಈ ಕಾರಣಕ್ಕಾಗಿಯೇ ರಾಜ್ಯಪಾಲರಿಗೆ SITಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment