Advertisment

ಲಾಸ್ ಎಂಜಲೀಸ್​ನಲ್ಲಿ ಭಾರೀ ಆತಂಕದ ವಾತಾವರಣ; ಆಗ್ತಿರುವ ಅನಾಹುತಕ್ಕೆ ಬೆಚ್ಚಿಬಿದ್ದ ಜನ

author-image
Gopal Kulkarni
Updated On
ಲಾಸ್ ಎಂಜಲೀಸ್​ನಲ್ಲಿ ಭಾರೀ ಆತಂಕದ ವಾತಾವರಣ; ಆಗ್ತಿರುವ ಅನಾಹುತಕ್ಕೆ ಬೆಚ್ಚಿಬಿದ್ದ ಜನ
Advertisment
  • ಲಾಸ್ ಎಂಜೆಲ್ಸ್​ನಲ್ಲಿ ಹಾವಳಿಯೆಬ್ಬಿಸಿದ ಮಹಾಮಾರಿ ಡೆಂಗ್ಯು
  • ಒಂದೇ ತಿಂಗಳಲ್ಲಿ 3 ಪ್ರಕರಣ, ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚು
  • ಸ್ಥಳೀಯ ಆರೋಗ್ಯ ಇಲಾಖೆಗೆ ತಲೆನೋವಾಗುತ್ತಿರುವ ಪ್ರಕರಣಗಳು

ಅಮೆರಿಕಾದ ಲಾಸ್ ಎಂಜಲ್ಸಿ ನಗರ ಡೆಂಗ್ಯುಗಳ ತವರೂರಾಗುತ್ತಿದೆ. ನಗರವನ್ನು ಬಿಟ್ಟು ಹೊರ ಹೋಗದವರಲ್ಲಿಯೂ ಕೂಡ ಡೆಂಗ್ಯು ಜ್ವರ ಕಾಣಿಸಿಕೊಳ್ಳುತ್ತಿದ್ದು, ನಗರದ ಜನರನ್ನು ಆತಂಕಕ್ಕಿಡು ಮಾಡಿದೆ. ಈ ಒಂದೇ ತಿಂಗಳಲ್ಲಿ ಮೂವರಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ವರದಿ ಮಾಡಿದೆ.

Advertisment

ಇದನ್ನೂ ಓದಿ:2 ತಿಂಗಳ ಸ್ಕೆಚ್​.. ಪೇಜರ್‌ನಲ್ಲಿ 3 ಗ್ರಾಂ ಸ್ಫೋಟಕ; ಇಸ್ರೇಲ್‌ನ ಮೊಸಾದ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ!

ಮನೆಯ ಮುಂದೆ ನೀರು ನಿಲ್ಲುವುದರಿಂದ ಹೆಚ್ಚು ಗಲೀಜು ಇರುವುದರಿಂದ ಸೊಳ್ಳೆಗಳು ಉತ್ಪಾದನೆಯಾಗಿ ಆ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯು ಬರುತ್ತದೆ ಅನ್ನೋ ಮಾತುಗಳು ಇವೆ. ಅಮೆರಿಕಾದ ನಗರಗಳು ಸ್ವಚ್ಛತೆಗೆ ಹೆಸರುವಾಸಿಗಳು ಆದ್ರೆ, ಲಾಸ್​ ಎಂಜೆಲ್ಸ್​ನ ಬಾಲ್ಡವಿನ್ ಪಾರ್ಕ್​ನಿಂದ ಸೊಳ್ಳೆಗಳು ಹರಿದು ಬರುತ್ತಿದ್ದು ಅವು ಡೆಂಗ್ಯುವನ್ನು ಹರಡುತ್ತಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಲೆಬನಾನ್‌ ದೇಶದಲ್ಲಿ ಪೇಜರ್ ಬ್ಲಾಸ್ಟ್‌ ಬೆನ್ನಲ್ಲೇ ಮತ್ತೆ ನಿಗೂಢ ಸ್ಫೋಟಗಳು; ಡೆಡ್ಲಿ ಪ್ಲಾನ್‌ನ ರಹಸ್ಯ ಇಲ್ಲಿದೆ!

Advertisment

ಈ ಒಂದೇ ವರ್ಷದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಒಟ್ಟು 1 ಸಾವಿರಕ್ಕೂ ಅಧಿಕ ಡೆಂಗ್ಯು ಪ್ರಕರಣಗಳು ಕಾಣಿಸಿಕೊಂಡಿವೆ. ಸದ್ಯ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರವುದು ನಾಲ್ಕು ಪ್ರಕಾರಗಳಲ್ಲಿರುವ ಒಂದು ಡೆಂಗ್ಯು ಪ್ರಬೇಧ ಎಂದು ಹೇಳಲಾಗುತ್ತಿದೆ. ಕ್ಯಾಲಿಫೋರ್ನಿಯಾದ ಆರೋಗ್ಯ ಇಲಾಖೆ ಹೇಳುವ ಪ್ರಕಾರ, ಕಳೆದ ವರ್ಷ ಕೇವಲ ಒಂದೇ ಒಂದು ಪ್ರಕರಣ ದಾಖಲಾಗಿತ್ತು. ಅವರು ಹೇಳುವ ಪ್ರಕಾರ ಕಳೆದ ವರ್ಷದಿಂದ ಇಲ್ಲಿಯವರೆಗೂ ಒಟ್ಟು 1 ಸಾವಿರ ಕೇಸ್​ಗಳು ಪತ್ತೆಯಾಗಿವೆ. ಕಳೆದ ಒಂದೇ ತಿಂಗಳಲ್ಲಿ ಮತ್ತೆ ಹೊಸ ಮೂರು ಡೆಂಗ್ಯು ಪ್ರಕರಣಗಳು ಕಂಡು ಬಂದಿವೆ. ಲಾಸ್ ಎಂಜೆಲ್ಸ್​ನ ಆ ಪಾರ್ಕ್​​ನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು. ಒಂದೇ ವರ್ಷದಲ್ಲಿ ಈಗ 1 ಸಾವಿರ ಪ್ರಕರಣಗಳು ದಾಖಲಾಗಿವೆ. ಇದು ಸದ್ಯ ಕ್ಯಾಲಿಫೋರ್ನಿಯಾ ರಾಜ್ಯ ಆರೋಗ್ಯ ಇಲಾಖೆಗೆ ಚಿಂತೆಗೀಡು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment