/newsfirstlive-kannada/media/post_attachments/wp-content/uploads/2024/07/Bangaluru-lovers-Death.jpg)
ಬೆಂಗಳೂರು: ಯುವ ಪ್ರೇಮಿಗಳು ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಅಂಜನಾ(20) ಮತ್ತು ಶ್ರೀಕಾಂತ್(25) ಎಂದು ಗುರುತಿಸಲಾಗಿದೆ.
ಶ್ರೀಕಾಂತ್ ಈಗಾಗಲೇ ಬೇರೊಬ್ಬರ ಜೊತೆಗೆ ವಿವಾಹವಾಗಿತ್ತು. ಆದರು ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅಂಜನಾಳನ್ನ ಪ್ರೀತಿ ಮಾಡುತ್ತಿದ್ದನು. ಆದರೆ ಇಬ್ಬರು ಒಟ್ಟಿಗೆ ಬದುಕಲು ಆಗಲ್ಲ ಎಂದು ಸಾಯೊ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ಪೊಲೀಸರಿಗೆ ಅಂಜನಾ ಮೃತದೇಹ ಕೂಡ ಸಿಕ್ಕಿದೆ. ಪ್ರಾರಂಭದಲ್ಲಿ ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಇರೋದಿಲ್ಲ. ಆ ಬಳಿಕ ತನಿಖೆ ವೇಳೆ ಇಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಬಾಯ್ಫ್ರೆಂಡ್.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ
ಶ್ರೀಕಾಂತ್ ಮತ್ತು ಅಂಜನಾ ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ. ಈ ಕಾರಣಕ್ಕೆ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಅತ್ತ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಂಜನಾ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾಳೆ. ಅದನ್ನ ಆಟೋದಲ್ಲಿ ಬಿಟ್ಟು ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾರಿಕೇಡ್ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್ ಸವಾರರು.. ಸ್ಥಳದಲ್ಲೇ ಸಾವು
ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯುತ್ತಿದ್ದೇವೆ ಎಂದು ವಿಡಿಯೋ ಮಾಡಿ ಕೆರೆಗೆ ಹಾರಿದ್ದಾರೆ. ಸದ್ಯ ತಲಘಟ್ಟಪುರ ಪೊಲೀಸರು ಮೃತ ಅಂಜನಾಳ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ
ಶ್ರೀಕಾಂತ್ ಮತ್ತು ಅಂಜನಾ ಸಾವಿನ ಕುರಿತು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಮಾತನಾಡಿದ್ದು, ಅಂಜನಾಪುರ ಕೆರೆಯಲ್ಲಿ ನಿನ್ನೆ ಎರಡು ಶವಗಳು ಪತ್ತೆಯಾಗಿವೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಯು.ಡಿ.ಆರ್ ಕೇಸ್ ದಾಖಲಿಸಿದ್ದೇವೆ. ಮೃತ ಇಬ್ಬರು ಸ್ನೇಹಿತರಾಗಿದ್ರು, ಒಟ್ಟಿಗೆ ತಿರುಗಾಡ್ತಿದ್ರು. ಮೃತರ ಪೈಕಿ ಒಬ್ಬರಿಗೆ ಮದುವೆಯಾಗಿತ್ತು. ಮದುವೆಯಾದ ಕಾರಣ ಇಬ್ಬರೂ ಜೊತೆಯಲ್ಲಿ ಇರೋದಿಕ್ಕೆ ಆಗಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ