newsfirstkannada.com

Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ.. ​

Share :

Published June 1, 2024 at 8:38am

    ತೈಲ ಕಂಪನಿಗಳು ಎಷ್ಟು ರೂಪಾಯಿ ಇಳಿಕೆ ಮಾಡಿವೆ?

    ಚುನಾವಣೆ ಶುರುವಾದ ಮೇಲೆ ಮೂರನೇ ಬಾರಿಗೆ ಇಳಿಕೆ

    ಕಳೆದ ತಿಂಗಳು 19 ರೂಪಾಯಿ ಇಳಿಕೆ ಮಾಡಿದ್ದ ತೈಲ ಕಂಪನಿಗಳು

ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕೂ ಮುನ್ನವೇ ಎಲ್‌ಪಿಜಿ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸತತ ಮೂರನೇ ಬಾರಿಗೆ ಇಳಿಸಿವೆ. ಚುನಾವಣಾ ಪ್ರಕ್ರಿಯೆ ಶುರುವಾದ ಬಳಿಕ ಮೂರನೇ ಬಾರಿಗೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ.

ಈ ಗ್ರಾಹಕರು ಪ್ರಯೋಜನ
ಇಂದಿನಿಂದ ದೇಶದ ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 70 ರೂಪಾಯಿ ಕಡಿಮೆ ಆಗಲಿದೆ. 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಇಳಿಕೆ ಮಾಡಲಾಗಿದೆ. ಈ ಬಾರಿಯೂ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇದನ್ನೂ ಓದಿ:ಸಚಿನ್ ಕೊನೆಯ ಪಂದ್ಯವನ್ನು ಹೋಮ್​ಗ್ರೌಂಡ್​ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್​ ಮಾಡಿ..!

ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 69.50 ರೂ.ನಿಂದ 1676 ರೂ.ಗೆ ಇಳಿದಿದೆ. ಏಪ್ರಿಲ್​ನಲ್ಲಿ 19 ರೂಪಾಯಿ ಇಳಿಕೆಯಾಗಿ 1745.50 ರೂಪಾಯಿಗೆ ಇಳಿದಿತ್ತು. ಕೋಲ್ಕತ್ತಾದಲ್ಲಿ 1,787 ರೂ.ಗೆ ಲಭ್ಯವಾಗಲಿದೆ. ಮುಂಬೈನಲ್ಲಿ 1,629 ರೂಪಾಯಿ ಪಾವತಿಸಬೇಕಾಗುತ್ತದೆ. ಚೆನ್ನೈನಲ್ಲಿ 1,840.50ಗೆ ಇಳಿಕೆಯಾಗಿದೆ. ಇನ್ನು ಬೆಂಗಳೂರಲ್ಲಿ 1,813 ರೂಪಾಯಿ ಆಗಿದೆ.

ಕಳೆದ ತಿಂಗಳು ಎಷ್ಟು ಇಳಿಕೆಯಾಗಿತ್ತು..?
ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ ಆಗಿತ್ತು. ಆದರೆ ಗ್ರಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ. ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಗೃಹ ಬಳಕೆಯ ಸಿಲಿಂಡರ್​ನಲ್ಲಿ 100 ರೂಪಾಯಿ ಕಡಿತ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದರು. ಅದಾದ ನಂತರ ಗೃಹ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ಏರಿಳಿತ ಆಗಿಲ್ಲ.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ.. ​

https://newsfirstlive.com/wp-content/uploads/2023/07/lpg-1.jpg

Load More