newsfirstkannada.com

ಸಚಿನ್ ಕೊನೆಯ ಪಂದ್ಯವನ್ನು ಹೋಮ್​ಗ್ರೌಂಡ್​ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್​ ಮಾಡಿ..!

Share :

Published June 1, 2024 at 7:52am

Update June 1, 2024 at 7:55am

    ತವರು ವಾಂಖೆಡೆ ಮೈದಾನದಲ್ಲಿ ಕ್ರಿಕೆಟ್ ದೇವರ​ ಕೊನೆಯ ಪಂದ್ಯ

    ​ ವಿದಾಯದ ಪಂದ್ಯವನ್ನ ಆಡಿದ್ರ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆ

    200 ಟೆಸ್ಟ್​​, 463 ಏಕದಿನ, 1 ಟಿ20 ಪಂದ್ಯವನ್ನಾಡಿರೋ ಸಚಿನ್

ತವರು ವಾಂಖೆಡೆ ಮೈದಾನದಲ್ಲಿ ಸಚಿನ್​ ತೆಂಡುಲ್ಕರ್​ ಕೊನೆಯ ಬಾರಿ ಟೀಮ್​ ಇಂಡಿಯಾವನ್ನ ಪ್ರತಿನಿಧಿಸಿದ್ದು ಅನ್ನೋದು ನಿಮಗೆ ಗೊತ್ತಿದೆ. ಕ್ರಿಕೆಟ್​ ದೇವರು ಹೋಮ್​ಗ್ರೌಂಡ್​ನಲ್ಲೇ ಕೊನೆಯ ಪಂದ್ಯ ಆಡಿದ್ದು ಯಾಕೆ ಅನ್ನೋದು ನಿಮಗೆ ಗೊತ್ತಾ?

ಸಚಿನ್​ ತೆಂಡುಲ್ಕರ್​.. ಕ್ರಿಕೆಟ್​ ಲೋಕ ಕಂಡ ಮಾಂತ್ರಿಕ. ತನ್ನ ಅದ್ಭುತ ಬ್ಯಾಟಿಂಗ್​ ಕಲೆಯಿಂದಲೇ ಇಡೀ ವಿಶ್ವ ಕ್ರಿಕೆಟ್​​ ಸಾಮ್ರಾಜ್ಯವನ್ನ ಆಳಿದ ಚಕ್ರವರ್ತಿ. ಅಭಿಮಾನಿಗಳ ನೆಚ್ಚಿನ ದೇವರು. ಮುಂಬೈನ ವಾಂಖೆಡೆ ಮೈದಾನಕ್ಕೂ ಸಚಿನ್​ ತೆಂಡುಲ್ಕರ್​ಗೂ​​ ವಿಶೇಷವಾದ ಸಂಬಂಧ ಇದೆ ಅನ್ನೋದು ನಿಮಗೆ ಗೊತ್ತು. ಆಡಿ ಬೆಳೆದ ಮೈದಾನದೊಂದಿಗೆ ವಿಶೇಷವಾದ ನಂಟನ್ನ ಹೊಂದಿರುವ ಸಚಿನ್​, ಅದೇ ಮೈದಾನದಲ್ಲಿ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ರು. ವಾಂಖೆಡೆಯಲ್ಲೇ ಸಚಿನ್​ ವಿದಾಯದ ಪಂದ್ಯವನ್ನ ಆಡಿದ್ರ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆಯಿದೆ.

ಇದನ್ನೂ ಓದಿ:2 ವರ್ಷ.. 2 ಬಾರಿ ಹೃದಯ ಛಿದ್ರ.. ರೋಹಿತ್​​ ಶರ್ಮಾರ ಬೆನ್ನೇರಿದ ದುರಾದೃಷ್ಟಗಳು..!

24 ವರ್ಷಗಳ ಸುದೀರ್ಘ ಕ್ರಿಕೆಟ್​ ಕರಿಯರ್​ನಲ್ಲಿ 200 ಟೆಸ್ಟ್​​, 463 ಏಕದಿನ, 1 ಟಿ20 ಪಂದ್ಯವನ್ನಾಡಿರೋ ಸಚಿನ್, 800ಕ್ಕೂ ಹೆಚ್ಚು ಡೊಮೆಸ್ಟಿಕ್​​ ಪಂದ್ಯಗಳನ್ನಾಡಿದ್ದಾರೆ. ಒಂದೇ ಒಂದು ಪಂದ್ಯವನ್ನೂ ಕೂಡ ಅವರ ತಾಯಿ ಸ್ಟೇಡಿಯಂಗೆ ಬಂದು ನೋಡೇ ಇರಲಿಲ್ಲ. ಹೀಗಾಗಿಯೇ ಮುಂಬೈನಲ್ಲಿ ವಿದಾಯದ ಪಂದ್ಯಕ್ಕೆ ಸಚಿನ್​ ಬಿಸಿಸಿಐ ಬಳಿಕ ಬೇಡಿಕೆ ಇಟ್ಟಿದ್ದಂತೆ. ನವೆಂಬರ್​ 14ರಿಂದ 16ರವರೆಗೆ ನಡೆದ ಸಚಿನ್​ರ ಅಂತಿಮ ಟೆಸ್ಟ್​ ವೇಳೆ ಸ್ಟೇಡಿಯಂಗೆ ಆಗಮಿಸಿದ್ದ ಸಚಿನ್​ ತಾಯಿ ರಜ್ನಿ ಇಡೀ ಪಂದ್ಯವನ್ನ ವೀಕ್ಷಿಸಿದ್ರಂತೆ. ಪಂದ್ಯದ ವೇಳೆ ನಾನು ಬ್ಯಾಟಿಂಗ್​ ಮಾಡ್ತಿರುವಾಗ ಬಿಗ್​ ಸ್ಕ್ರೀನ್​ನಲ್ಲಿ ತಾಯಿಯನ್ನ ತೋರಿಸಿದ್ರು. ಇಡೀ ಮೈದಾನ ಸಚಿನ್​.. ಸಚಿನ್​ ಎಂದು ಕೂಗಿತು. ಅದನ್ನ ನೋಡಿ ನಾನು ತುಂಬಾ ಭಾವಕನಾದೆ ಅಂತಾ ಸಚಿನ್​​ ಇದೀಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಜಸ್ಟ್ ಗುರಾಯಿಸಿದ್ಕೆ.. ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಮೈಸೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿನ್ ಕೊನೆಯ ಪಂದ್ಯವನ್ನು ಹೋಮ್​ಗ್ರೌಂಡ್​ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್​ ಮಾಡಿ..!

https://newsfirstlive.com/wp-content/uploads/2024/06/SACHIN-2.jpg

Load More