newsfirstkannada.com

ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.. ಆದರೆ ಈ ಗ್ರಾಹಕರಿಗೆ ಮೂರು ತಿಂಗಳಿನಿಂದ ರಿಲೀಫ್ ಸಿಕ್ಕಿಲ್ಲ..!

Share :

Published June 1, 2024 at 12:50pm

    LPG ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದೆ

    ಚುನಾವಣಾ ಪ್ರಕ್ರಿಯೆ ಶುರುವಾದ ಮೇಲೆ 3 ಬಾರಿ ಇಳಿಕೆ

    ಇವತ್ತು ಎಷ್ಟು ರೂಪಾಯಿ ಇಳಕೆ ಆಗಿದೆ ಗೊತ್ತಾ

ವಾಣಿಜ್ಯ ಬಳಕೆಯ 19 ಕೆಜಿಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಲ್ಲಿ ಮತ್ತೆ 70 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಸತತ ಮೂರನೇ ಬಾರಿಗೆ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆಯ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಏರಿಳಿಕೆ ಆಗಿಲ್ಲ.

ಕಳೆದ ತಿಂಗಳು ಇಷ್ಟು ಇಳಿಕೆ ಆಗಿತ್ತು..?
ಕಳೆದ ತಿಂಗಳು ಕೂಡ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಆಗಿತ್ತು. ಏಪ್ರಿಲ್ 1ರಂದು ಪರಿಷ್ಕೃತಗೊಂಡ ದರದಲ್ಲಿ 19 ಕೆಜಿ LPG ಸಿಲಿಂಡರ್ ಬೆಲೆ 19 ರೂಪಾಯಿಗೆ ಇಳಿಕೆ ಆಗಿತ್ತು. ಮೇ 1 ರಂದು ಪರಿಷ್ಕೃತಗೊಂಡ ದರದಲ್ಲೂ 19 ರೂಪಾಯಿ ಇಳಿಕೆಯಾಗಿತ್ತು. ಇನ್ನೊಂದು ವಿಚಾರ ಅಂದರೆ ಏಪ್ರಿಲ್‌ಗೂ ಮೊದಲು ಸತತ ಮೂರು ತಿಂಗಳಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಏರಿಕೆಯಾಗಿತ್ತು.

ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..

ಈ ಗ್ರಾಹಕರಿಗೆ 3 ತಿಂಗಳಿಂದ ಪರಿಹಾರ ಸಿಕ್ಕಿಲ್ಲ
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಮಾರ್ಚ್​​ನಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಗುಡ್​ನ್ಯೂಸ್ ನೀಡಿದ್ದರು. 14 ಕೆಜಿಯ ಎಲ್​ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂಪಾಯಿ ಕಡಿತ ಮಾಡೋದಾಗಿ ಘೋಷಿಸಿದ್ದರು. ಜೊತೆಗೆ 2025ರ ಮಾರ್ಚ್ 31ರವರೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿಗಳ ಸಹಾಯಧನ ನೀಡುವುದಾಗಿ ಕೇಂದ್ರ ಸಚಿವ ಸಂಪುಟ ಘೋಷಣೆ ಮಾಡಿದೆ. ಅಂದಿನಿಂದ 14 ಕೆಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂದರೆ ಸುಮಾರು 3 ತಿಂಗಳಿನಿಂದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.. ಆದರೆ ಈ ಗ್ರಾಹಕರಿಗೆ ಮೂರು ತಿಂಗಳಿನಿಂದ ರಿಲೀಫ್ ಸಿಕ್ಕಿಲ್ಲ..!

https://newsfirstlive.com/wp-content/uploads/2023/10/LPG_Cylinder_Price.jpg

Load More