newsfirstkannada.com

ಗಬ್ಬರ್​ ಸಿಂಗ್​ ಹೋರಾಟ ವ್ಯರ್ಥ.. ಲಕ್ನೋ ವಿರುದ್ಧ ಸೋಲುಂಡ ಪಂಜಾಬ್​

Share :

Published March 30, 2024 at 11:30pm

  ಅರ್ಧ ಶತಕ ಮೀರಿಸಿದಾಟವಾಡಿದ ಪಂಜಾಬ್​ ನಾಯಕ

  ಲಕ್ನೋಗೆ ತಲೆನೋವಾಗಿ ಪರಿಣಮಿಸಿದ ಗಬ್ಬರ್​ ಸಿಂಗ್

  ನಿಕೋಲಾಸ್​ ನಾಯಕತ್ವದ ಲಕ್ನೋ ತಂಡಕ್ಕೆ 21 ರನ್​ಗಳ ಭರ್ಜರಿ ಜಯ

ಶಿಖರ್​ ಧವನ್​ ಒಂಟಿ ಹೋರಾಟ ವ್ಯರ್ಥವಾಗಿದೆ. ಅರ್ಧ ಶತಕ ಮೀರಿಸಿದಾಟವಾಡಿ ಲಕ್ನೋಗೆ ತಲೆನೋವಾಗಿ ಪರಿಣಮಿಸಿದ್ದ ಗಬ್ಬರ್​ ಸಿಂಗ್​ ತಂಡ  21 ರನ್​ಗೆ ಸೋತಿದೆ.

ತವರಿನಲ್ಲೇ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಆಯ್ದುಕೊಂಡ ಲಕ್ನೋ ಅದ್ಭುತ ಆಟವಾಡಿದೆ. ತನ್ನ ಎದುರಾಳಿ ಪಂಜಾಬ್​ಗೆ 199 ರನ್​ಗಳ ದೊಡ್ಡ ಟಾರ್ಗೆಟ್​ ನೀಡಿತ್ತು.

ಆರಂಭಿಕ ಆಟಗಾರರಾಗಿ ಕ್ವಿಂಟನ್ ಡಿ ಕಾಕ್​ ಜೊತೆಗೆ ಮೈದಾನಕ್ಕಿಳಿದ ನಾಯಕ ಕೆ. ಎಲ್​ ರಾಹುಲ್ ದೊಡ್ಡ ರನ್​ ಕಲೆ ಹಾಕುವ ಗುರಿ ಹೊಂದಿದ್ದರು. ಅದರಲ್ಲೂ ಡಿ ಕಾಕ್​ ಅಬ್ಬರ ಬ್ಯಾಟಿಂಗ್​ ಪಂಜಾಬ್​ ಬೆಚ್ಚಿ ಬಿದ್ದಿತ್ತು. 38 ಎಸೆತಕ್ಕೆ 5 ಬೌಂಡರಿ ಮತ್ತು 2 ಸಿಕ್ಸ್​ ಹೊಡೆಯವ ಮೂಲಕ 54 ರನ್​ ಬಾರಿಸಿದ್ದರು. ಇವರ ಜೊತೆಯಾಟಗಾರ ರಾಹುಲ್​ 9 ಎಸೆತವನ್ನು ಎದರಿಸಿ 1 ಬೌಂಡರಿ ಮತ್ತು 1 ಸಿಕ್ಸ್​ ಬಾರಿಸುವ ಮೂಲಕ 15 ರನ್​ ಬಾರಿಸಿದರು. ಆದರೆ ಡಿ ಕಾಕ್​ ಅರ್ಷದೀಪ್​ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಜಿತೇಶ್​ ಶರ್ಮಾಗೆ ಕ್ಯಾಚ್​ ನೀಡಿದರು. ಇತ್ತ ರಾಹುಲ್​​ ಕೂಡ ಜಾನ್​ ಬೈರ್​ಸ್ಟೋವ್​ಗೆ ಕ್ಯಾಚ್​ ನೀಡಿ ಪೆವಿಲಿಯನ್ನತ್ತ ಸಾಗಿದರು.

ಲಕ್ನೋ ಹೈ-ಲೈಟ್ಸ್

ಕ್ವಿಂಟನ್ ಡಿ ಕಾಕ್- 54 ರನ್

ನಿಕೋಲಾಸ್​ ಪೂರನ್​- 42 ರನ್​

ಕೃನಾಲ್​ ಪಾಂಡ್ಯ – 43 ರನ್​

ನಂತರ ಬಂದ ದೇವದತ್ತ ಪಡಿಕಲ್​ ಮೇಲೆ ನಂಬಿಕೆ ಇದ್ದರೂ ಸಹ ಸ್ಯಾಮ್​​ ಕರ್ರಾನ್​ ಎಸೆತಕ್ಕೆ ಶಿಖರ್​ ಧವನ್​ಗೆ ಕ್ಯಾಚ್​ ನೀಡಿ ಹೊರನಡೆದರು. 6 ಎಸೆತವನ್ನು ಎದುರಿಸಿದ ಇವರು 2 ಬೌಂಡರಿ ಜೊತೆಗೆ 9 ರನ್ ಬಾರಿಸಿದರು.

ಮಾರ್ಕಸ್​ ಸ್ಟೋಯಿನಿಸ್ ಕೂಡ 12​ ಎಸೆತದಲ್ಲಿ 2 ಸಿಕ್ಸ್​ ಬಾರಿಸಿ 19 ರನ್​ ಕಲೆಹಾಕುವ ಮೂಲಕ ರಾಹುಲ್​ ಚಾಹರ್​ಗೆ ವಿಕೆಟ್​ ಒಪ್ಪಿಸಿ ಹೊರನಡೆದರು. ನಿಕೋಲಾಸ್​ ಪೂರನ್​​ ಮಾತ್ರ ನಾಯಕನಾಗಿ ತಂಡಕ್ಕೆ ಕೊಂಚ ರನ್​ ಸಂಪಾದಿಸಲು ಮುಂದಾದರು. 21 ಎಸೆತಕ್ಕೆ 3 ಸಿಕ್ಸ್​, 3 ಫೋರ್​ ಬಾರಿಸಿ 42 ರನ್​ಗಳನ್ನು ಬಾರಿಸಿದರು.

ಕೃನಾಲ್​ ಪಾಂಡ್ಯ 18 ಎಸೆತದಲ್ಲಿ 41 ರನ್​ ಬಾರಿಸಿದ್ದಾರೆ. ಅದರಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸಿದ್ದಾರೆ. ಇನ್ನು ಆಯುಷ್​ ಬದೋನಿ 8 ರನ್​ ಬಾರಿಸಿದರೆ. ಅತ್ತ ರವಿ ಬಿಷ್ಮೋಯಿ ಸೊನ್ನೆ ಸುತ್ತಿದ್ದಾರೆ. ಮೋಹಿಶ್​ ಕುಮಾರ್​ ಕೂಡ 2 ರನ್​ ಬಾರಿಸಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಕ್ವಿಂಟನ್​ ಡಿಕಾಕ್​ ಅರ್ಧ ಶತಕ ಬಾರಿಸಿದರೆ, ನಾಯಕ ನಿಕೊಲಾಸ್​ ಪೂರನ್​ ಮತ್ತು ಕೃಣಾಲ್​ ಪಾಂಡ್ಯ ಅದ್ಭುತವಾಗಿ ಆಡಿದ್ದಾರೆ.

ಅತ್ತ ಪಂಬಾಜ್​ ವೇಗಿಗಳ ದಾಳಿ ಬಗ್ಗೆ ಗಮನಿಸುವುದಾದರೆ, ಸ್ಯಾಮ್​ ಕರ್ರಾನ್​ 3 ವಿಕಟ್​ ಕಿತ್ತರೆ, ಅರ್ಷದೀಪ್​ 2, ರಬಾಡ ಮತ್ತು ರಾಹುಲ್​ ಚಾಹರ್​ ತಲಾ ಒಂದೊಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: ರಿಲೇಶನ್​ಶಿಪ್​ನಲ್ಲಿದ್ದೇನೆ ಎಂದ​ ವಿಜಯ್​ ದೇವರಕೊಂಡ! ಯಾರ ಜೊತೆಗೆ ಗೊತ್ತಾ?

ಪಂಜಾಬ್​ ಹೈ-ಲೈಟ್ಸ್​

ಶಿಖರ್​ ಧವನ್​- 70 ರನ್​

ಜಾನಿ ಬೈರ್ ​ಸ್ಟೋವ್- 42 ರನ್

ಲಕ್ನೋ ಟಾರ್ಗೆಟ್​ ಬೆನ್ನಟ್ಟಿದ ಶಿಖರ್​ ಧವನ್​ ಮತ್ತು ಜಾನಿ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದರು. ಶಿಖರ್​ 50 ಎಸೆತಕ್ಕೆ 70 ರನ್​ ಬಾರಿಸಿದರೆ, ಇತ್ತು ಬೈರ್​ ಸ್ಟೋವ್ 22 ಎಸೆತಕ್ಕೆ 42 ರನ್​ ಬಾರಿಸಿದರು. ಇನ್ನುಳಿದ ಆಟಗಾರರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ತಂಡವನ್ನು ಜಯದಡ ಸೇರಲು ವಿಫಲರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​

ಗಬ್ಬರ್​ ಸಿಂಗ್​ ಹೋರಾಟ ವ್ಯರ್ಥ.. ಲಕ್ನೋ ವಿರುದ್ಧ ಸೋಲುಂಡ ಪಂಜಾಬ್​

https://newsfirstlive.com/wp-content/uploads/2024/03/LSG-1-1.jpg

Load More