Advertisment

MNC ಜಾಬ್ ಮಾಡುವವರಿಗಿಂತ ಭಿಕ್ಷುಕರೇ ಇಲ್ಲಿ ಶ್ರೀಮಂತರು; ತಿಂಗಳ ಸಂಪಾದನೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!

author-image
Gopal Kulkarni
Updated On
MNC ಜಾಬ್ ಮಾಡುವವರಿಗಿಂತ ಭಿಕ್ಷುಕರೇ ಇಲ್ಲಿ ಶ್ರೀಮಂತರು; ತಿಂಗಳ ಸಂಪಾದನೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!
Advertisment
  • ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಲಖನೌ ಭಿಕ್ಷುಕರು
  • ಸರ್ವೆ ಮಾಡಲು ಇಳಿದ ಸಮಾಜ ಕಲ್ಯಾಣ ಇಲಾಖೆಗೆನೇ ಶಾಕ್
  • ಒಬ್ಬ ಭಿಕ್ಷುಕನ ಕೈಯಲ್ಲಂತೂ ಸ್ಮಾರ್ಟ್​ಫೋನ್​, ಪಾನ್ ಕಾರ್ಡ್!

ಇಕ್ಕಲಾರದ ಕೈ ಎಂಜಲು ಚಿಕ್ಕ ಮಕ್ಕಳು ಅಳುತಾವೆ ಹೋಗೋ ದಾಸಯ್ಯ ಎಂಬ ದಾಸರ ವಾಣಿಯಿದೆ. ಇದು ಕೈಯೆತ್ತಿ ನೀಡಲಾಗದವರು ಬೇಡುವವರರ ಬಗ್ಗೆ ಆಡುವ ಮಾತು.ಮೊದಲಿನಿಂದಲೂ ನಮ್ಮಲ್ಲಿ ದಾನ ಹಾಗೂ ನೀಡುವಿಕೆಗೆ ಒಂದು ಪ್ರಧಾನ್ಯತೆ ಇದೆ. ಬೇಡುವ ಕೈಗಳಲ್ಲಿ ನಿಯತ್ತು ಇದ್ದರೆ ಕೊಡುವ ಕೈಗಳಿಗೆ ಕೊರೆತಯಿಲ್ಲ ಎಂಬ ಗಾದೆಯೂ ಕೂಡ ಇದೆ. ಆದ್ರೆ ಬೇಡುವ ಕೈಗಳಲ್ಲಿ ನಿಯತ್ತು ಎಷ್ಟಿದೆಯೋ ಇಲ್ವೋ ಗೊತ್ತಿಲ್ಲ ಆದ್ರೆ ನೀಡುವವರು ನೀಡಿದ ಹಣದಿಂದ ಲಖನೌ ಭಿಕ್ಷಕರು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರಂತೆ.

Advertisment

ಇತ್ತೀಚೆಗೆ ಲಖನೌನ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನಗರ ಅಭಿವೃದ್ಧಿ ಸಂಸ್ಥೆ ನಡೆಸಿರುವ ಸರ್ವೆ ಒಂದರಲ್ಲಿ ಅಚ್ಚರಿಯ ಮಾಹಿತಿಯು ಹೊರಗೆ ಬಂದಿದೆ. ಇಲ್ಲಿನ ಭಿಕ್ಷುಕರು ತಿಂಗಳಿಗೆ 90 ಸಾವಿರ ರೂಪಾಯಿಂದ 1 ಲಕ್ಷ ರೂಪಾಯಿವರೆಗೂ ದುಡಿಯುತ್ತಿದ್ದಾರೆ ಎಂಬ ಮಾಹಿತಿಯನ್ನು ಸರ್ವೆ ಬಹಿರಂಗಗೊಳಿಸಿದೆ.

ಇದನ್ನೂ ಓದಿ:ಸಂಬಂಧಿಗಳಿಗೆ ಮಾತ್ರವಲ್ಲ ಪ್ರೀತಿಯ ಶ್ವಾನಕ್ಕೂ ಆಸ್ತಿಯಲ್ಲಿ ಪಾಲಿಟ್ಟಿರುವ ರತನ್​ ಟಾಟಾ! ಉಯಿಲಿನಲ್ಲಿ ಏನಿದೆ?

ಈ ಒಂದು ಸರ್ವೆಯಲ್ಲಿ ಒಟ್ಟು 5312 ಭಿಕ್ಷುಕರು ಲಖನೌನಲ್ಲಿ ಇರುವುದು ಕಂಡು ಬಂದಿದೆ. ಈ ಎಲ್ಲರೂ ತಿಂಗಳಿಗೆ 90 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಯವರೆಗೂ ಗಳಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಅಂದ್ರೆ ವರ್ಷಕ್ಕೆ ಅವರ ಗಳಿಕೆಯ ಪ್ರಮಾಣ ಬರೋಬ್ಬರಿ 12 ಲಕ್ಷ ರೂಪಾಯಿ. ಸರ್ವೆ ಅಧಿಕಾರಿಗಳೇ ದಂಗಾಗಿ ಹೋಗಿರುವ ಮತ್ತೊಂದು ವಿಷಯ ಅಂದ್ರೆ ಬರಬಾನ್ಕಿಯ ಲಕ್ಪಾಡ್​ನಲ್ಲಿರುವ ಅಮನ್ ಎನ್ನುವ ಭಿಕ್ಷುಕ ಸ್ಮಾರ್ಟ್​ಫೋನ್ ಜೊತೆಗೆ ಪಾನ್ ಕಾರ್ಡ್ ಕೂಡ ಹೊಂದಿದ್ದಾನಂತೆ. ಡುಡಾದ ಯೋಜನಾ ಅಧಿಕಾರಿ ಹೇಳುವ ಪ್ರಕಾರ ಶೇಕಡಾ 90 ರಷ್ಟು ಇಲ್ಲಿನ ಭಿಕ್ಷುಕರು ಪಕ್ಕಾ ಪ್ರೊಫೆಷನಲ್ ಭಿಕ್ಷುಕರು. ಪಕ್ಕದ ಜಿಲ್ಲೆಯಿಂದ ಇಲ್ಲಿಗೆ ವಲಸೆ ಬರುವಂತಹ ಇವರು ಇಲ್ಲಿ ಚೆನ್ನಾಗಿ ಗಳಿಸುತ್ತಾರೆ ಎಂದು ಹೇಳಲಾಗಿದೆ.

Advertisment

ಇದನ್ನೂ ಓದಿ:104 ಕೆಜಿ ಬಂಗಾರದ ಬೇಟೆ.. ಕೇರಳದಲ್ಲಿ ‘Torre del Oro’ ಮೆಗಾ ಆಪರೇಷನ್? ಏನಿದರ ಅರ್ಥ?

ಭಿಕ್ಷುಕರು ಪ್ರಮುಖವಾಗಿ ಮಕ್ಕಳನ್ನು ಹೊಂದಿರುವ ಮಹಿಳಾ ಭಿಕ್ಷುಕಿಯರನ್ನು ಕಳುಹಿಸಿ ಭಿಕ್ಷೆ ಬೇಡಲು ಬರುತ್ತಾರೆ. ಇವರ ಜೊತೆಗೆ ಮಕ್ಕಳನ್ನು ಕೂಡ ಭಿಕ್ಷೆ ಬೇಡಲು ತೊಡಗಿಸುತ್ತಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಸಂಗ್ರಹಿಸಲಾಗುತ್ತದೆ. ಮಹಿಳಾ ಭಿಕ್ಷುಕಿಯರಿಗೆ ದಿನಕ್ಕೆ 3 ಸಾವಿರ ರೂಪಾಯಿ ಗಳಿಸಿದರೆ, ಭಿಕ್ಷೆ ಬೇಡುವ ಮಕ್ಕಳಿಗೆ 900 ರೂಪಾಯಿಂದ 2 ಸಾವಿರ ರೂಪಾಯಿ ಗಳಿಸುತ್ತಾರೆ ಎಂಬುದು ಸರ್ವೆಯಲ್ಲಿ ಬಹಿರಂಗಗೊಂಡಿದೆ. ಈ ಒಂದು ಭಿಕ್ಷೆ ಬೇಡುವವರಿಗೆ ಭಿಕ್ಷೆ ನೀಡುವ ಮೂಲಕ ಲಖನೌ ಜನರು ದಿನಕ್ಕೆ 63 ಲಕ್ಷ ಭಿಕ್ಷುಕರ ಜೋಳಿಗೆಗೆ ಹಾಕುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment