/newsfirstlive-kannada/media/post_attachments/wp-content/uploads/2024/07/Aparna-Lung-Cancer.jpg)
ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಮಾರಕ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಅಪರ್ಣಾ ಸಾವಿನ ಬೆನ್ನಲ್ಲೇ ಈ ಲಂಗ್ ಕ್ಯಾನ್ಸರ್‌ಗೆ ಆತಂಕ ಎದುರಾಗಿದ್ದು, ಜನರು ಗೂಗಲ್​ನಲ್ಲಿ ಈ ಬಗ್ಗೆ ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ಈ ಅಪಾಯದ ಮಧ್ಯೆ ಲಂಗ್ ಕ್ಯಾನ್ಸರ್ ಶಾಕಿಂಗ್​ ಸುದ್ದಿಗಳು ಬಯಲಾಗಿದೆ.
ಇದನ್ನೂ ಓದಿ: ಅಪರ್ಣಾ ಬಲಿ ಪಡೆದ ಶ್ವಾಸಕೋಶ ಕ್ಯಾನ್ಸರ್​.. ಶೇ.50 ರಷ್ಟು ಧೂಮಪಾನ ಮಾಡದವ್ರಿಗೆ ಕಾಡ್ತಿದೆ ಈ ಮಾರಕ ಕಾಯಿಲೆ..!
ಹಲವಾರು ಅಧ್ಯಯನದ ಪ್ರಕಾರ ಈ ಶ್ವಾಸಕೋಶದ ಕ್ಯಾನ್ಸರ್​ಗೆ ಸಿಗರೇಟ್ ಸೇದುವುದು ಮಾತ್ರವೇ ಕಾರಣವಲ್ಲ. ಸ್ಮೋಕಿಂಗ್ ಮಾಡುವವರ ಪಕ್ಕದಲ್ಲಿ ನಿಂತಿದ್ದವರಿಗೂ ಈ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇನ್ನು ಅಚ್ಚರಿಯ ಸಂಗತಿ ಏನಂದ್ರೆ ಲಂಗ್ ಕ್ಯಾನ್ಸರ್ ಪೈಕಿ ಶೇಕಡಾ 50ರಷ್ಟು ಜನ ಪ್ಯಾಸಿವ್ ಸ್ಮೋಕರ್ಸ್ ಅಂದ್ರೆ ಸಿಗರೇಟ್ ಸೇದುವಾಗ ಪಕ್ಕದಲ್ಲಿ ನಿಂತವರು ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/07/Aparna-6.jpg)
ಲಂಗ್ ಕ್ಯಾನ್ಸರ್ ಭೀತಿ
ಭಾರತೀಯರಲ್ಲಿ 54-70 ವಯಸ್ಸಿನವರಿಗೆ ಈ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಲಂಗ್ ಕ್ಯಾನ್ಸರ್ 3ನೇ ಅತಿ ಭಯಾನಕ ಕ್ಯಾನ್ಸರ್. ಇದುವರೆಗೂ ಭಾರತದಲ್ಲಿ 72,510 ಶ್ವಾಸಕೋಶ ಕ್ಯಾನ್ಸರ್ ಪ್ರಕರಣ ಪತ್ತೆಯಾಗಿದ್ದು, 66,279 ಮಂದಿ ಈ ಶ್ವಾಸಕೋಶದ ಕ್ಯಾನ್ಸರ್​ಗೆ ಬಲಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಕ್ಕಿಂತ ಭಾರತೀಯರಲ್ಲಿ ಲಂಗ್ ಕ್ಯಾನ್ಸರ್‌ಗೆ ತುತ್ತಾದವರ ಸಂಖ್ಯೆ ಹೆಚ್ಚಾಗಿದೆ. ಸಿಗರೇಟ್‌ನಿಂದ ಮಾತ್ರವಲ್ಲ ಮೇಕ್ ಅಪ್ ಹಾಕುವವರಿಗೂ ಲಂಗ್ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಲಂಗ್ ಕ್ಯಾನ್ಸರ್ ಲಕ್ಷಣವೇನು?
1. ವಿಪರೀತ ಕೆಮ್ಮು
2. ಉಸಿರಾಟದ ತೊಂದರೆ
3. ತೂಕ ಇಳಿಕೆ
4. ಕೆಮ್ಮಿದಾಗ ರಕ್ತಸ್ರಾವ
5. ಎದೆ ನೋವು
6. ತಲೆನೋವು
7. ನಿಶಕ್ತಿ
8. ಮುಖ ಊದಿಕೊಳ್ಳುವುದು
ಲಂಗ್ ಕ್ಯಾನ್ಸರ್​ಗೆ ಕಾರಣ
1. ಧೂಮಪಾನ
2. ಧೂಮಪಾನ ಮಾಡುವವರ ಜೊತೆ ನಿಲ್ಲುವುದು
3. ಅಡುಗೆ ಮನೆಯ ಹೊಗೆ, ಫ್ಯಾಕ್ಟರಿ ಹೊಗೆ
4. ಡಯೆಟ್
5. ಫ್ಯಾಮಿಲಿ ಹಿಸ್ಟರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us