newsfirstkannada.com

ಅಪ್ಪ ಕಳ್ಳ, ಮಗನೂ ಕಳ್ಳ.. ಮನೆಗಳ್ಳತನ ಮಾಡ್ತಿದ್ದ ಇವ್ರು ದೋಚಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ?

Share :

Published April 15, 2024 at 12:57pm

Update April 15, 2024 at 12:58pm

    ಕಳ್ಳನ ತಂದೆ ಮಿರ್ಜಾ ನೂರುದ್ದಿನ್ ಬೇಗ್‌ಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು

    ಹಣವಿಲ್ಲದಿದ್ದಾಗ ಮಗ ಸೈಯ್ಯದ್ ಬೇಗ್ ಕಳ್ಳತನ ಮಾಡಲು ಶುರು ಮಾಡಿದ್ದ

    ಮಾದನಾಯಕನಹಳ್ಳಿಯ ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ ಪೊಲೀಸರು!

ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸರು ಕುಖ್ಯಾತ ಮನೆಗಳ್ಳರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯ ಏನಪ್ಪಾ ಅಂದ್ರೆ ಅಪ್ಪ, ಮಗ ಇಬ್ಬರು ಮನೆಗಳ್ಳತನ ಮಾಡ್ತಿದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಪ್ಪ ಮಿರ್ಜಾ ನೂರುದ್ದಿನ್ ಬೇಗ್ ಹಾಗೂ ಮಗ ಮಿರ್ಜಾ ಸೈಯದ್ ಬೇಗ್ ಅಲಿಯಾಸ್‌ ಎಂಎಸ್ ಬೇಗ್ ಬಂಧಿತ ಆರೋಪಿಗಳು.

ತಂದೆ ಮಿರ್ಜಾ ನೂರುದ್ದಿನ್ ಬೇಗ್ ಅವರಿಗೆ ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಅಂದು ಹಣವಿಲ್ಲದಿದ್ದಾಗ ಮಗ ಸೈಯ್ಯದ್ ಬೇಗ್ ಕಳ್ಳತನ ಮಾಡಲು ಶುರು ಮಾಡಿದ್ದ. ಹೃದಯ ಶಸ್ತ್ರ ಚಿಕಿತ್ಸೆ ಪಡೆದು ಗುಣಮುಖನಾದ ನಂತರ ಮಗನ ಕೃತ್ಯಕ್ಕೆ ತಂದೆ ನೂರುದ್ದೀನ್ ಬೇಗ್ ಕೂಡ ಸಾಥ್ ನೀಡಿದ್ದ. ಕದ್ದು ಆರಾಮವಾಗಿ ಇರಬಹುದು ಎಂಬ ಕಾರಣಕ್ಕೆ ಆರೋಪಿಗಳು ಕಳ್ಳತನ ಮುಂದುವರಿಸಿದ್ದರು.

ಅಪ್ಪ, ಮಗ ಇಬ್ಬರು ಮಾದನಾಯಕನಹಳ್ಳಿಯ ಸಂಧ್ಯಾಕಿರಣ ರಿಹ್ಯಾಬಿಲಿಟೇಷನ್ ಸೆಂಟರ್ & ವೃದ್ದಾಶ್ರಮದಲ್ಲಿ ಕೈಚಳಕ ತೋರಿದ್ದರು. ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿ 11 ಲಕ್ಷ ರೂಪಾಯಿ ಹಣ ಹಾಗೂ ಸಂಧ್ಯಾಕಿರಣ ವೃದ್ದಾಶ್ರಮದ ಮಾಲೀಕರಾದ ಕಮಲಮ್ಮರ ಮನೆಯಲ್ಲಿಯೂ ದರೋಡೆ ಮಾಡಿದ್ದರು. 1.25 ಕೋಟಿ ಮೌಲ್ಯದ ಡೈಮಂಡ್ ಚಿನ್ನಾಭರಣ ಹಾಗೂ 21 ಲಕ್ಷ ನಗದು ಇಬ್ಬರು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಜಸ್ಟ್​ ಕಾರಿಗೆ ಬೈಕ್​ ಡಿಕ್ಕಿ, ವ್ಯಕ್ತಿಯ ಎದೆ ಮೇಲಿನ ಶರ್ಟ್​ ಹಿಡಿದ ಯುವತಿ.. ಮುಂದೇನಾಯ್ತು?

ವೃದ್ದಾಶ್ರಮದ ಮಾಲೀಕರಾದ ಕಮಲಮ್ಮರಿಗೆ ಅವರ ಪುತ್ರ ಇತ್ತೀಚೆಗೆ ಸಿಂಗಾಪುರದಿಂದ ಹಣ ಕಳಿಸಿದ್ದ. ಸೈಟ್ ತೆಗೆದುಕೊಳ್ಳಲಿಕ್ಕೆ ರೆಡಿಯಾಗಿದ್ದ ಕಮಲಮ್ಮ ಮನೆಯಲ್ಲಿ ನಗದು ಹಣ ಇಟ್ಟಿದ್ದರು. ಚುನಾವಣೆ ಮುಗಿದ ನಂತರ ಸೈಟ್ ರಿಜಿಸ್ಟ್ರೇಷನ್‌ಗೆ ಮುಂದಾಗಿದ್ರು ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಕಮಲಮ್ಮರ ಮನೆ ಹಾಗೂ ವೃದ್ಧಾಶ್ರಮ, ರಿಹ್ಯಾಬಿಲಿಟೇಷನ್ ಸೆಂಟರ್‌ಗೆ ಸೈಯ್ಯದ್ ಬೇಗ್ ಕ್ಲೀನಿಂಗ್ ಕೆಲಸಕ್ಕೆ ಬರ್ತಿದ್ದ. ಕಮಲಮ್ಮರ ಮನೆ ಹಾಗೂ ವೃದ್ದಾಶ್ರಮದಲ್ಲಿ ಹಣ ಚಿನ್ನಾಭರಣ ಇಟ್ಟಿರೋದು ತಂದೆ ನೂರುದ್ದೀನ್ ಬೇಗ್‌ಗೆ ತಿಳಿಸಿದ್ದ. ಒಂದೇ ಸಲ ದೊಡ್ಡ ಹಣ ಎಗರಿಸ್ಬೋದು ಅಂತ ಮಗನ ಕೃತ್ಯಕ್ಕೆ ಅಪ್ಪನೂ ಸಾಥ್ ಕೊಟ್ಟಿದ್ದ.

ಇತ್ತೀಚೆಗೆ ಅಪ್ಪ, ಮಗ ಇಬ್ಬರು ಕದ್ದ ಮಾಲನ್ನು ಕಡಬಗೆರೆ ಬಳಿಯ ರೂಮ್‌ನಲ್ಲಿ ಬಚ್ಚಿಟ್ಟಿದ್ದರು. ಲೋಕಸಭಾ ಚುನಾವಣೆ ಟೈಮ್‌ನಲ್ಲಿ ಹಣವನ್ನು ಹೊರಗೆ ತಂದ್ರೆ ಚೆಕ್ ಪೋಸ್ಟ್‌ನಲ್ಲಿ ಸೀಜ್ ಮಾಡುವ ಭಯ ಇವರಿಗಿತ್ತು. ಮಾದನಾಯಕನಹಳ್ಳಿ ಪೊಲೀಸರು ಬಂಧಿತ ಅಪ್ಪ, ಮಗನಿಂದ ಒಂದು ಕೋಟಿ ಮೌಲ್ಯದ 1.25 ಕೆಜಿ ತೂಕದ ಡೈಮಂಡ್ ಹಾಗು ಚಿನ್ನಾಭರಣ, ಎರಡು ಕೆಜಿ ಬೆಳ್ಳಿ, 21 ಲಕ್ಷ ನಗದು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 8 ಲಕ್ಷ ರೂಪಾಯಿ ಸಾಲ ಇತ್ತು. ಆರೋಗ್ಯದ ಸಮಸ್ಯೆಯೂ ಇತ್ತು. ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ಅಪ್ಪ ಮಕ್ಕಳು ತಪ್ಪು ಒಪ್ಪಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪ ಕಳ್ಳ, ಮಗನೂ ಕಳ್ಳ.. ಮನೆಗಳ್ಳತನ ಮಾಡ್ತಿದ್ದ ಇವ್ರು ದೋಚಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ?

https://newsfirstlive.com/wp-content/uploads/2024/04/Bangalore-Theft-Arrest.jpg

Load More