newsfirstkannada.com

ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚಳ.. ಗಳಗಳನೇ ಅಳುತ್ತ ಮರ ಏರಿದ ಮದ್ಯಪ್ರಿಯ..! Video

Share :

Published March 23, 2024 at 2:55pm

    ಫೆಬ್ರವರಿಯಲ್ಲಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವಂತೆ

    ಬಾಡಿಗೆ ಕಟ್ಟಲು ಹಣವಿಲ್ಲ, ಅದರಲ್ಲಿ ಸರ್ಕಾರ ರೇಟ್ ಜಾಸ್ತಿ ಮಾಡಿದೆ ಎಂದು ಆರೋಪ

    ಬಿಯರ್, ಮದ್ಯದ ಮೇಲೆ 50 ರೂ. ಜಾಸ್ತಿ ಮಾಡಿದ್ರೆ ಬದುಕುವುದೇಗೆ? ಎಂದ ಕುಡುಕ

ಭೋಪಾಲ್: ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬರು ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನಿವಾಸಿ ಬ್ರಿಜ್‌ ಮೋಹನ್ ಶಿವಹರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮಧ್ಯಪ್ರದೇಶ ರಾಜ್ಯ ಸರ್ಕಾರ 100 ಇರುವ ಮದ್ಯದ ಮೇಲೆ 20 ರೂ. ಹಾಗೂ ಬಿಯರ್ ಬಾಟಲ್​ಗೆ​ 30 ರೂಪಾಯಿ ಹೆಚ್ಚಳ ಮಾಡಿದೆ. ಒಟ್ಟು 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದಂತೆ ಆಗಿದೆ. ಇದನ್ನು ಪ್ರಶ್ನಿಸಿ ವ್ಯಕ್ತಿಯು ಮುಖ್ಯಮಂತ್ರಿ ಸಹಾಯವಾಣಿ, ಜಿಲ್ಲಾಧಿಕಾರಿಗಳಿಗೆ, ಮಾನವ ಹಕ್ಕುಗಳ ಆಯೋಗ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಫೆಬ್ರವರಿಯಲ್ಲಿ ದೂರು ನೀಡಿದ್ದರು. ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕರುಳು ಬಗೆದು ಕೊಲೆ ಮಾಡಿದ ಕುಚುಕು ಗೆಳೆಯರು; ಹುಬ್ಬಳ್ಳಿಯಲ್ಲಿ ಭಯಾನಕ ಮರ್ಡರ್‌

ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸಪಟ್ಟು ವ್ಯಕ್ತಿಯನ್ನು ಕೆಳಗಿಳಿಸಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಳಗಳನೇ ಕಣ್ಣೀರುಡುತ್ತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡಿದ್ದಾನೆ. ನಾನು 2 ತಿಂಗಳಿನಿಂದ ಕೆಲಸಕ್ಕೆ ಹೋಗಿಲ್ಲ. ಅದರಲ್ಲಿ ಮನೆ ಬಾಡಿಗೆ ಬೇರೆ ಕಟ್ಟಿಲ್ಲ. ಹಣದ ಸಮಸ್ಯೆ ಇದೆ. ಆದರೂ ಸರ್ಕಾರ ಬಿಯರ್ ಸೇರಿ ಸರಾಯಿ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿ ಹಣ ವಸೂಲಿ ಮಾಡುತ್ತಿದೆ. ಇದು ಇನ್ನಷ್ಟು ಕಷ್ಟ ತಂದಿದೆ ಎಂದು ರೋದಿಸುತ್ತಲೇ ಹೇಳಿದ್ದಾನೆ.

ಈ ಬಗ್ಗೆ ಕಂಪ್ಲೇಟ್​ ನೀಡಿದ್ದಕ್ಕೆ ಮದ್ಯದ ಗುತ್ತಿಗೇದಾರರು, ಅಂಗಡಿ ಮಾಲೀಕರು ಥಳಿಸಿದ್ದಾರೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ಹಾಗೂ ಗಣರಾಜ್ಯೋತ್ಸವದಂದು ಮದ್ಯವನ್ನು ನಿರಂತರವಾಗಿ ಮಾರಾಟ ಮಾಡಿದ್ದಾರೆ ಎಂದು ಬ್ರಿಜ್‌ ಮೋಹನ್ ಶಿವಹರೆ ಪೊಲೀಸರ ಮುಂದೆ ಅಳುತ್ತಲೇ ಹೇಳಿದ್ದಾನೆ.ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚಳ.. ಗಳಗಳನೇ ಅಳುತ್ತ ಮರ ಏರಿದ ಮದ್ಯಪ್ರಿಯ..! Video

https://newsfirstlive.com/wp-content/uploads/2024/03/MP_MAN.jpg

Load More