newsfirstkannada.com

ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿಂದೆ ಹಲವು ಅನುಮಾನ.. ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?

Share :

Published April 14, 2024 at 4:02pm

Update April 14, 2024 at 4:05pm

    ಮಹಾಲಕ್ಷ್ಮಿ ಲೇಔಟ್​​ ನಿವಾಸದಲ್ಲಿ ಪೊಲೀಸ್​ ಅಧಿಕಾರಿಗಳಿಂದ ಸ್ಥಳ ಮಹಜರು‌

    2 ಫೋನ್​​ಗಳನ್ನ FSL​ಗೆ ರವಾನಿಸಿ ಡೇಟಾ ರಿಟ್ರೀವಲ್ ಮಾಡಲಿರೋ ಪೊಲೀಸರು

    ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್​ ಕಾಲ್​ಗಳ ಬಗ್ಗೆ ತಪಾಸಣೆ

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಸ್ಯಾಂಡಲ್‌ವುಡ್‌ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಆಪ್ತರು, ಸ್ನೇಹಿತರು, ನಟರು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಸಾಲು, ಸಾಲು ದುರಂತ.. ಲವ್ಲಿಸ್ಟಾರ್ ಪ್ರೇಮ್ ಭಾವುಕ

ಇದೀಗ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಪೊಲೀಸರು ಸೌಂದರ್ಯ ಜಗದೀಶ್​ ಅವರ ಮೊಬೈಲ್ ಸೀಜ್ ಮಾಡಿದ್ದಾರೆ. ಸೌಂದರ್ಯ ಜಗದೀಶ್​ರಿಗೆ ಸೇರಿದ ಎರಡು ಫೋನ್​​ಗಳನ್ನು ಪೊಲೀಸರು ಈಗಾಗಲೇ ಸೀಜ್ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ಎಫ್.ಎಸ್.ಎಲ್​ಗೆ ಮೊಬೈಲ್ ರವಾನಿಸಿ ಅದರಲ್ಲಿರೋ ಡೇಟಾ ರಿಟ್ರೀವಲ್ ಮಾಡಿಸಲಿದ್ದಾರಂತೆ. ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್​ ಕಾಲ್​ಗಳ ಬಗ್ಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಸದ್ಯ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್​ನ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು‌ ನಡೆಸಲಾಗುತ್ತದೆ. ಸುಗುಣ ಆಸ್ಪತ್ರೆ ವೈದ್ಯರ ಮೆಮೊ ಆಧರಿಸಿ ದೂರು ದಾಖಲಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ನಿರ್ಮಾಪಕ್​ ಸೌಂದರ್ಯ ಜಗದೀಶ್​ ಅವರ ಆತ್ಮಹತ್ಯೆ ಕೇಸ್ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿಂದೆ ಹಲವು ಅನುಮಾನ.. ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?

https://newsfirstlive.com/wp-content/uploads/2024/04/jagadish.jpg

Load More