Advertisment

ಹಸುವನ್ನು ರಾಜ್ಯಮಾತಾ ಎಂದು ಘೋಷಣೆ ಮಾಡಿದ ಮಹಾರಾಷ್ಟ್ರ ಸರ್ಕಾರ; ಏನಿದರ ಉದ್ದೇಶ?

author-image
Gopal Kulkarni
Updated On
ಹಸುವನ್ನು ರಾಜ್ಯಮಾತಾ ಎಂದು ಘೋಷಣೆ ಮಾಡಿದ  ಮಹಾರಾಷ್ಟ್ರ ಸರ್ಕಾರ; ಏನಿದರ ಉದ್ದೇಶ?
Advertisment
  • ಮಹಾರಾಷ್ಟ್ರದಲ್ಲಿ ದೇಸಿ ಗೋವುಗಳಿಗೆ ರಾಜಮಾತಾ ಗೋಮಾತಾ ಸ್ಥಾನಮಾನ
  • ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಾಗ ಈ ನಿರ್ಣಯಕ್ಕೆ ಬಂದಿದ್ದೇಕೆ ?
  • ಚುನಾವಣೆಗೂ ಮುನ್ನ ಹಿಂದುತ್ವದ ದಾಳ ಉರುಳಿಸೀತಾ ಏಕನಾಥ್ ಸರ್ಕಾರ?

ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಚುನಾವಣೆಯ ಸಮೀಪವಿರುವಾಗಲೇ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದೇಸಿ ಗೋವುಗಳಿಗೆ ರಾಜಮಾತಾ ಗೋಮಾತ ಎಂಬ ಸ್ಥಾನಮಾನವನ್ನು ನೀಡಿದೆ.

Advertisment

ಭಾರತೀಯ ದೇಸಿ ಹಸುಗಳು ವೇದಗಳ ಕಾಲದಿಂದಲೂ ಪೂಜ್ಯನೀಯ ಸ್ಥಾನದಲ್ಲಿದ್ದನ್ನು ಗಮನದಲ್ಲಿಟ್ಟುಕೊಂಡು. ಅವು ನೀಡುವ ಹಾಲು ನಮ್ಮ ಬದುಕಿನ ಆಹಾರ ಪದ್ಧತಿಯೊಳಗೆ ಹಾಸುಹೊಕ್ಕಾಗಿದ್ದು. ಗೋಮೂತ್ರದಲ್ಲಿ ಔಷಧಿಗಳ ಗುಣವಿರೋದು. ಸಗಣಿಯಿಂದ ಸಾವಯವ ಕೃಷಿಗೆ ಸಹಕಾರಿಗಿರುವುದು ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಿ ದೇಸಿ ಹಸುಗಳಿಗೆ ರಾಜಮಾತಾ ಗೋಮಾತಾ ಎಂಬ ಸ್ಥಾನಮಾನ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಶಿಂಧೆ ಸರ್ಕಾರ ಹೇಳಿದೆ. ಸಚಿವ ಸಂಪುಟದ ತೀರ್ಮಾನವನ್ನು ಅಂಗೀಕರಿಸಿ ಸರ್ಕಾರದ ನಿರ್ಣಯಕ್ಕೆ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನವರು ಅಂಗೀಕರಸಿ ಸಹಿ ಹಾಕಿದ ಮೇಲೆ ಸರ್ಕಾರದ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

publive-image

ಗೋವುಗಳ ಪುರಾತನ ಕಾಲದಿಂದಲೂ ಮನುಷ್ಯನ ಬದುಕಿನ ಒಂದು ಭಾಗವಾಗಿ ಈ ನೆಲದಲ್ಲಿ ನಡೆದುಕೊಂಡು ಬಂದಿವೆ. ಅವುಗಳ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ವೈಜ್ಞಾನಿಕವಾಗಿ ಗುರುತಿಸಿಕೊಂಡು ಬಂದಿರುವುದರಿಂದಲೇ ಗೋವುಗಳನ್ನು ನಾವು ಕಾಮಧೇನು ಎಂದು ಕರೆಯುತ್ತೇವೆ. ಈ ದೇಶದಲ್ಲಿ ಹಲವು ತಳಿಯ ಗೋವುಗಳನ್ನು ನಾವು ಕಾಣುತ್ತೇವೆ. ಆದ್ರೆ ಕಾಲಕ್ರಮೇಣ ದೇಸಿ ಹಸುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅದು ಆತಂಕಕಾರಿ ವಿಷಯ. ಅವುಗಳನ್ನು ರಕ್ಷಿಸುವ ಕಾರ್ಯದುದ್ದೇಶದಿಂದ ಸರ್ಕಾರ ದೇಸಿ ಹಸುಗಳಿಗೆ ರಾಜಮಾತಾ ಗೋಮಾತಾ ಎಂಬ ಸ್ಥಾನಮಾನ ನೋಡಲಾಗಿದೆ ಎಂದು ಸರ್ಕಾರಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: BBK11: ಮನೆ ನಾಯಿಗೆ ಚಿನ್ನದ ಸರ.. ಗೋಲ್ಡ್ ಸುರೇಶ್ ಯಾರು? ಹಿನ್ನೆಲೆ ಏನು? ಇವರ ಆಸೆ ಏನು ಗೊತ್ತಾ? 

Advertisment

ಮಹಾರಾಷ್ಟ್ರದಲ್ಲಿ ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಬರಲಿದೆ. ಶಿವಸೇನೆ ಹಿಂದುತ್ವ ಮತ್ತು ಮರಾಠರ ಅಸ್ಮಿತೆಯ ಎತ್ತಿಹಿಡಿಯುವ ಮೂಲಕವೇ ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದು. ಗೋವು ಮತ್ತು ಗೋರಕ್ಷಣೆ ಎಂದಾಗ ಹಿಂದುತ್ವದ ಸಣ್ಣದೊಂದು ನೆರಳು ಸರಿದು ಹೋಗುತ್ತದೆ. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಏಕನಾಥ್ ಶಿಂಧೆ ಸರ್ಕಾರದ ಈ ನಿರ್ಧಾರ ಹಿಂದುತ್ವದ ದಾಳವಾಗಿ ರಾಜಕೀಯ‌ ಪಂಡಿತರಿಗೆ ಕಾಣಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment