Advertisment

ಚುನಾವಣೆ ಸೋಲು ಬೆನ್ನಲ್ಲೇ ಕೋಲಾಹಲ.. ಅಸ್ಥಿರಗೊಳ್ಳುವ ಆತಂಕದಲ್ಲಿ ಮಹಾರಾಷ್ಟ್ರ ಸರ್ಕಾರ..!

author-image
Ganesh
Updated On
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್; ಯಾರಾಗ್ತಾರೆ ‘ಮಹಾ’ ಸಿಎಂ?
Advertisment
  • ಡಿಸಿಎಂ ಅಜಿತ್ ಪವಾರ್​​ಗೆ ಕೈ ಕೊಡ್ತಾರಾ ಎನ್​ಸಿಪಿ ಶಾಸಕರು?
  • ಅಜಿತ್ ಪವಾರ್ ಬಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ
  • ಎನ್‌ಡಿಎ ಸಭೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೈರು

ಲೋಕಸಭೆ ಚುನಾವಣೆಯಲ್ಲಿ ಆದ ಹೀನಾಯ ಸೋಲು ಮಹಾರಾಷ್ಟ್ರದ ಅಜಿತ್ ಪವಾರ್ ಬಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಒಂದ್ಕಡೆ ಸೋಲಿನ ಹೊಣೆ ಹೊತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಅಜಿತ್ ಪವಾರ್ ಜೊತೆ ಬಂದಿದ್ದ ಶಾಸಕರು ಮತ್ತೆ ಮರಳಿಗೂಡು ಸೇರುವ ಸೂಚನೆ ಕೊಟ್ಟಿದ್ದಾರೆ. ಇದರಿಂದ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಅಸ್ಥಿರಗೊಳ್ಳುವ ಲಕ್ಷಣ ಗೋಚರಿಸಿದೆ.

Advertisment

ಕಳೆದ ವರ್ಷ ಶರದ್ ಪವಾರ್ ಎನ್​ಸಿಪಿಗೆ ಬಂಡಾಯದ ಬಾವುಟ ಹಾರಿಸಿ ಮೂಲ ಎನ್​ಸಿಪಿಯಿಂದ ಎಕ್ಸಿಟ್ ಆಗಿ ಶಿಂಧೆ ಸರ್ಕಾರದ ಭಾಗವಾಗಿದ್ದ ಡಿಸಿಎಂ ಅಜಿತ್ ಪವಾರ್​​ಗೆ ಮಹಾರಾಷ್ಟ್ರ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಪಕ್ಷಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದ್ದಾರೆ.. ಅಜಿತ್ ಪವಾರ್ ಬಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.

ಇದನ್ನೂ ಓದಿ:ಶತ್ರು ಸಂಹಾರಕ್ಕೆ ವೀರಸೇನಾನಿ ರೆಡಿ.. ಬಾಬರ್​ ಅಝಂ ಪಡೆಗೆ ಇನ್ನಿಲ್ಲದ ನಡುಕ.. ಕಾರಣ ಇಲ್ಲಿದೆ..!

ಲೋಕಸಭಾ ಚುನಾವಣೆಯಲ್ಲಿ ಸೋಲು.. ‘ಮಹಾ’ ಕೋಲಾಹಲ!
ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೈರುಹಾಜರಾದ ಬೆನ್ನಲ್ಲೇ ಅಜಿತ್ ಪವಾರ್ ಬಣದಲ್ಲಿ ಬಿರುಕು ಮೂಡಿದೆ. ಮಾವ ಶರದ್ ಪವಾರ್ ಕಟ್ಟಿದ್ದ ಎನ್​ಸಿಪಿಯನ್ನು 2023ರ ಜುಲೈನಲ್ಲಿ ಅಜಿತ್ ಪವಾರ್ ವಿಭಜಿಸಿದ್ದರು. 39 ಶಾಸಕರ ಬೆಂಬಲದೊಂದಿಗೆ ಆಡಳಿತಾರೂಢ ಏಕನಾಥ್ ಶಿಂಧೆ ಮೈತ್ರಿ ಸರ್ಕಾರದ ಭಾಗವಾಗಿದ್ದರು. ಎನ್​​ಸಿಪಿ ಹೆಸರು ಹಾಗೂ ಚಿಹ್ನೆಯನ್ನು ಪಡೆದ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳ ಪೈಕಿ ಮೂವರು ಮಕಾಡೆ ಮಲಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತವರು ಕ್ಷೇತ್ರದಲ್ಲೇ ಅಜಿತ್ ಪವಾರ್ ಪತ್ನಿ ಸುನೇತ್ರಾ ಸೋಲು ಅನುಭವಿಸಿದ್ದಾರೆ.

Advertisment

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಅಜಿತ್ ಬಣದ ಶಾಸಕರನ್ನು ಕಂಗಾಲಾಗಿಸಿದೆ. ಅಜಿತ್ ಪವಾರ್ ಜೊತೆ ಬಂದಿದ್ದ ಶಾಸಕರು ಮತ್ತೆ ಶರದ್ ಪವಾರ್​ ಜೊತೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಂದೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಎನ್​​ಸಿಪಿ ಶಾಸಕರೇ ಹೇಳ್ತಿದ್ದಾರೆ. ಅಂದು ಅವಕಾಶಕ್ಕಾಗಿ ಅಜಿತ್ ಪವಾರ್ ಜೊತೆ ಬಂದಿದ್ದ ಶಾಸಕರು ಇಂದು ಪಕ್ಷದ ಸಾಧನೆ ಉತ್ತಮವಾಗಿಲ್ಲ ದೋಣಿ ಬದಲಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!

ಶಾಸಕರ ಜೊತೆ ಅಜಿತ್ ಪವಾರ್ ಮಹತ್ವದ ಸಭೆ!
ಪಕ್ಷದ 10ರಿಂದ 12 ಶಾಸಕರು ಶರದ್ ಪವಾರ್ ಸಂಪರ್ಕದಲ್ಲಿದ್ದು ಪಕ್ಷ ಬಿಟ್ಟು ಹೋಗುವ ಆತಂಕದಲ್ಲಿರುವ ಅಜಿತ್ ಪವಾರ್ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಪಕ್ಷ ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದೇನೇ ಇರಲಿ ಅಂದು ಶರದ್ ಪವಾರ್​ಗೆ ಕೈಕೊಟ್ಟು ಬಂದಿದ್ದ ಅಜಿತ್ ಪವಾರ್​​ಗೆ ಇಂದು ಕರ್ಮ ಹಿಂಬಾಲಿಸಿದೆ. ಒಂದ್ಕಡೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ, ಮತ್ತೊಂದೆಡೆ ಶಾಸಕರು ಹೊರನಡೆಯುವ ಸೂಚನೆ ಚಿಂತೆಗೀಡು ಮಾಡಿದೆ. ಇದು ಮಹಾರಾಷ್ಟ್ರ ಸರ್ಕಾರದಲ್ಲಿ ಅಸ್ಥಿರತೆ ಸೃಷ್ಟಿ ಮಾಡುತ್ತೆ ಅಂತಿದ್ರೂ ಈ ಬೆಳವಣಿಗೆಗಳು ಮಹಾರಾಷ್ಟ್ರದ ಶಿಂಧೆ ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ ಎನ್ನಲಾಗ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment