Advertisment

ಮಹುವಾ ಮೊಯಿತ್ರಾ ಹೇಳಿದ್ದು ಸೆಕ್ಸ್ ಅಲ್ಲ, ಮತ್ತೇನು..? ಹೊಸ ವಿವಾದದಲ್ಲಿ ಟಿಎಂಸಿ ನಾಯಕಿ..!

author-image
Ganesh
Updated On
ಮಹುವಾ ಮೊಯಿತ್ರಾ ಹೇಳಿದ್ದು ಸೆಕ್ಸ್ ಅಲ್ಲ, ಮತ್ತೇನು..? ಹೊಸ ವಿವಾದದಲ್ಲಿ ಟಿಎಂಸಿ ನಾಯಕಿ..!
Advertisment
  • ಮತ್ತೆ ವಿವಾದದಲ್ಲಿ ಟಿಎಂಸಿಯ ನಾಯಕಿ ಮಹುವಾ ಮೊಯಿತ್ರಾ
  • ವರದಿಗಾರ ಮತ್ತು ಮೊಯಿತ್ರಾ ನಡುವಿನ ಸಂಭಾಷಣೆ ಹೇಗಿತ್ತು?
  • ಮೊಯಿತ್ರಾ ಮಾತಿಗೆ ವರದಿಗಾರ ತಮಲ್‌ ಸಾಹ ಸ್ಪಷ್ಟೀಕರಣ

ಮಹುವಾ ಮೊಯಿತ್ರಾ.. ಟಿಎಂಸಿಯ ಈ ನಾಯಕಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ಮತ್ತೆ ಚರ್ಚೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಪ್ರಚಾರದ ಅಖಾಡದಲ್ಲಿ ಬೆಡ್​ರೂಂನ ರಹಸ್ಯದ ಬಗ್ಗೆ ಮಾತನಾಡಿರೋ ಆರೋಪದ ಬೆಂಕಿಗೆ ಬಿದ್ದಿದ್ದಾರೆ.
ಸದಾ ಕಾಲ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಸುದ್ದಿಯಾಗುತ್ತಿದ್ದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿರುಸಿನ ಪ್ರಚಾರ ನಡೆಸ್ತಿದ್ದಾರೆ.

Advertisment

ಇದನ್ನು ಓದಿ:ಮತ್ತೊಂದು ವಿವಾದದಲ್ಲಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ; ಏನಿದು ‘ಪೊಂಜಿ’ ಹಗರಣ?

publive-image

ಪತ್ರಕರ್ತ : ನಿಮ್ಮ ಎನರ್ಜಿಯ ಮೂಲ ಯಾವುದು?
ಮಹುವಾ ಮೊಯಿತ್ರಾ : ಸೆಕ್ಸ್...
ಮಹುವಾ ಮೊಯಿತ್ರಾ : ಇದು ನಿಜ

ಇದೇ ಮಾತು.. ಮಹುವಾ ಮೊಯಿತ್ರಾ ನೀಡಿದ ಇದೇ ಉತ್ತರವೀಗ ಭಾರೀ ಚರ್ಚೆಗೆ ಕಾರಣವಾಗಿರೋದು. ಕೃಷ್ಣನಗರ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದ ಮಹುವಾ ಮೊಯಿತ್ರಾಗೆ ವರದಿಗಾರ ಪ್ರಶ್ನೆಯೊಂದನ್ನ ಕೇಳಿದ್ದರು. ನಿಮ್ಮ ಎನರ್ಜಿಯ ರಸಹ್ಯವೇನು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಒಂಚೂರು ಯೋಚನೆ ಮಾಡದೇ ಸೆಕ್ಸ್‌ ಅಂತಾ ಉತ್ತರಿಸಿದ್ದರು. ಅಷ್ಟು ಮಾತ್ರವಲ್ಲದೇ ಇದು ನಿಜ ಅಂತಲೂ ಹೇಳಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ನೆಟ್ಟಿಗರಂತೂ ಮನಬಂದಂತೆ ಕಾಲೆಳೆಯುತ್ತಿದ್ದಾರೆ. ಬಿಜೆಪಿಗೂ ಅಸ್ತ್ರಸಿಕ್ಕಂತಾಗಿದೆ.

Advertisment

publive-image

ಮಹುವಾ ಮೊಯಿತ್ರಾ ಹೇಳಿದ್ದು ಸೆಕ್ಸ್ ಅಲ್ಲ.. ಎಗ್ಸ್ ಅಂತಾ!
ಸೋಶಿಯಲ್‌ ಮೀಡಿಯಾದಲ್ಲಿ ಕ್ಲಿಪ್‌ ವೈರಲ್‌ ಆಗ್ತಿದ್ದಂತೆ ಪ್ರಶ್ನೆ ಕೇಳಿದ್ದ ವರದಿಗಾರ ತಮಲ್‌ ಸಾಹ ಸ್ಪಷ್ಟೀಕರಣ ನೀಡಿದ್ದಾರೆ. ವಿಡಿಯೋದಲ್ಲಿ ಮೊಯಿತ್ರಾ ಸೆಕ್ಸ್ ಅಂತಾ ಹೇಳಿಲ್ಲ. ಎಗ್ಸ್ ಅಂತಾ ಹೇಳಿದ್ದು. ಆದ್ರೆ ಇದನ್ನ ತಿರುಚಲಾಗ್ತಿದೆ ಅಂತಾ ಸ್ಪಷ್ಟನೆ ನೀಡಿದ್ದಾರೆ.

‘ಸೆಕ್ಸ್‌ ಎಂದಿಲ್ಲ.. ಎಗ್ಸ್‌ ಎಂದಿದ್ದು’
ನಾನು ಸ್ಪಷ್ಟೀಕರಣ ನೀಡುತ್ತಿದ್ದೇನೆ. ಯಾಕೆಂದರೆ, ಇದು ನನ್ನ ಸಂದರ್ಶನ. ನಾನು ಮಹುವಾ ಮೊಯಿತ್ರಾಗೆ ಬೆಳಗ್ಗಿನ ನಿಮ್ಮ ಎನರ್ಜಿಯ ಮೂಲ ಯಾವುದು ಎಂದು ಹೇಳಿದೆ. ಅದಕ್ಕೆ ಮಹುವಾ ಎಗ್ಸ್‌ ಎಂದು ಹೇಳಿದ್ದರು. ಭಕ್ತ ಮಂಡಳಿಯವರು ಅದನ್ನು ಸೆಕ್ಸ್‌ ಎಂದು ಹೀಗೆ ತಿರುಚಿರೋದು ಹಾಸ್ಯಾಸ್ಪದವಾಗಿದೆ. ಉದ್ದೇಶಪೂರ್ವಕವಾಗಿ ಆಡಿಯೋವನ್ನು ತಿರುಚಲಾಗುತ್ತಿದೆ. ಸ್ಪಷ್ಟನೆ ಕೊಟ್ಟಿದ್ರೂ ಮಹುವಾ ಮೊಯಿತ್ರಾ ವಿರುದ್ಧ ಆಕ್ರೋಶಗಳು ಮಾತ್ರ ಕಡಿಮೆಯಾಗಿಲ್ಲ. ಪರ ವಿರೋಧದ ಚರ್ಚೆಗಳು ನಡೀತಾನೆ ಇದೆ.

ಇದನ್ನೂ ಓದಿ:ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್​..!

Advertisment

publive-image

ಮಹುವಾ ವಿರುದ್ಧ ಮಾತನಾಡ್ತಿರೋರು, ಸೆಕ್ಸ್​ ಅಂತಲೇ ಹೇಳಿದ್ದು ಅಂತಾ ವಾಕ್ಸಮರಕ್ಕೆ ಇಳಿದಿದ್ದಾರೆ. ಆದ್ರೆ, ಮಹುವಾ ಪರ ವಾದ ಮಾಡ್ತಿರೋರು ಎಗ್ಸ್​ ಎಂದಿದ್ದು ಅಂತಿದ್ದಾರೆ. ಎನರ್ಜಿಯ ಸೋರ್ಸ್ ಏನು ಎಂದಾಗ ಸೆಕ್ಸ್ ಅಂತಾ ಉತ್ತರಿಸಿ, ಬಳಿಕ ನಿಜ ಅಂತಲೂ ಹೇಳಿದ್ದಾರೆ. ಇದೇ ಸಾಕ್ಷಿ ಅನ್ನೋದು ವಾದ ಶುರುವಾಗಿದೆ. ಈ ವಿಡಿಯೋವನ್ನ ತಿರುಚಲಾಗಿದೆ ಅನ್ನೋದು ಮಹುವಾ ಮೊಯಿತ್ರಾ ಪರ ವಾದ ಮಾಡ್ತಿರೋರ ಉತ್ತರ. ಇನ್ನು, ಇಂಥಾ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತಿದೆ ಅಂತಾ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ಅನಗತ್ಯವಾಗಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗ್ತಿದೆ ಅಂತಾ ಟಿಎಂಸಿ ಕಾರ್ಯಕರ್ತರು ಸಮರ್ಥಿಸಿಕೊಳ್ತಿದ್ದಾರೆ.

ಇದನ್ನೂ ಓದಿ:ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾಱರು?

ಒಟ್ನಲ್ಲಿ, ‘ಲೋಕ’ಕದನದಲ್ಲಿ ಮೊಹುವಾ ಮೊಯಿತ್ರಾ ನೀಡಿರೋ ಸೆಕ್ಸ್ ಹೇಳಿಕೆಯ ಚರ್ಚೆ ಜೋರಾಗಿ ನಡೀತಿದೆ. ಅದರಲ್ಲೂ ಡಿವೋರ್ಸ್ ಆಗಿರೋ ಮೊಹುವಾ ಮೊಯಿತ್ರಾ ಎನರ್ಜಿ ಸೆಕ್ಸ್ ಆಗಿರೋಕೆ ಹೇಗೆ ಸಾಧ್ಯ ಅಂತೆಲ್ಲಾ ನೆಟ್ಟಿಗರು ಪ್ರಶ್ನಿಸ್ತಿದ್ದಾರೆ. ಸದ್ಯಕ್ಕಂತೂ ಇದು ಮುಗಿಯೋ ಲಕ್ಷಣ ಗೋಚರಿಸ್ತಿಲ್ಲ. ಮಹುವಾ ಮತ್ತೊಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕಾಕ್ಕೊಂಡಂತೆ ಕಂಡು ಬರ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment