/newsfirstlive-kannada/media/post_attachments/wp-content/uploads/2024/08/Rohit-sharma-1-2.jpg)
ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆದಿದೆ. ಮತ್ತೆ ಮಹೇಲಾ ಜಯವರ್ಧನೆ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ನೇಮಕದ ಹಿಂದೆ ರೋಹಿತ್ ಪಾತ್ರ ಇದೆಯಾ ಎಂಬ ಅನುಮಾನ ಹುಟ್ಟಿಸಿದೆ. ರೋಹಿತ್, ಮತ್ತೆ ತಂಡದ ಚುಕ್ಕಾಣಿ ಹಿಡಿಯುತ್ತಾರಾ ಅನ್ನೋ ಅನುಮಾನವೂ ಹುಟ್ಟಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೂ ಮುನ್ನ ಫ್ರಾಂಚೈಸಿಗಳ ವಲಯದಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ. ರಿಟೈನ್, ರಿಲೀಸ್ ಲೆಕ್ಕಾಚಾರಗಳು ಜೋರಾಗಿ ನಡೀತಿವೆ. ಕೋಚ್, ಕ್ಯಾಪ್ಟನ್ ಬದಲಾವಣೆ ಸೇರಿದಂತೆ, ಆಟಗಾರರ ರಿಟೈನ್-ರಿಲೀಸ್ ವಿಚಾರದಲ್ಲಿ ಶಾಕಿಂಗ್ ಸುದ್ದಿಗಳು ಮೇಲಿಂದ ಮೇಲೆ ಹೊರ ಬರ್ತಿವೆ. ಇಂಥ ಸಪ್ರೈಸ್ಗಳಿಂದ ಮುಂಬೈ ಇಂಡಿಯನ್ಸ್ ಕೂಡ ಹೊರತಾಗಿಲ್ಲ.
ಇದನ್ನೂ ಓದಿ:ಅತಿಯಾದ ಸ್ಕ್ರೀನ್ ಟೈಮ್ ತುಂಬಾ ಡೇಂಜರ್; ನಿಮ್ಮ ಮಗುವಿನ ಮೇಲೆ ಎಷ್ಟು ಕೆಟ್ಟ ಪರಿಣಾಮ ಆಗ್ತದೆ?
ಕಳೆದ ಆವೃತ್ತಿಯಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದ 5 ಬಾರಿ ಚಾಂಪಿಯನ್ ಮುಂಬೈ, ಈ ಬಾರಿ ಸ್ಟ್ರಾಂಗ್ ಕಮ್ಬ್ಯಾಕ್ಗೆ ತಯಾರಿ ನಡೆಸುತ್ತಿದೆ. ಮೇಜರ್ ಸರ್ಜರಿಗೆ ಕೈ ಹಾಕಿರುವ ಮುಂಬೈ ಇಂಡಿಯನ್ಸ್, ನೂತನ ಕೋಚ್ಗಳ ನೇಮಿಸುವ ಮೂಲಕ ಹೊಸ ಸಂದೇಶ ರವಾನಿಸಿದೆ.
ಮತ್ತೆ ಮಹೇಲಾ ಹೆಡ್ ಕೋಚ್..!
ಮುಂಬೈ ಇಂಡಿಯನ್ಸ್ ಕೋಚಿಂಗ್ ಸ್ಟಾಫ್ನಲ್ಲಿ ಮೇಜರ್ ಸರ್ಜರಿ ನಡೆದಿದೆ. ಈ ಹಿಂದಿನ ಹೆಡ್ ಕೋಚ್ ಮಾರ್ಕ್ ಬೌಚರ್ಗೆ ಕಿಕ್ಔಟ್ ಮಾಡಿರುವ ಮುಂಬೈ ಫ್ರಾಂಚೈಸಿ, ಗ್ಲೋಬಲ್ ಹೆಡ್ ಮಹೇಲಾ ಜಯವರ್ಧನೆಯನ್ನ ಮತ್ತೆ ನೂತನ ಕೋಚ್ ಆಗಿ ನೇಮಿಸಿದೆ. 2017, 2019, 2020ರಲ್ಲಿ ಮುಂಬೈ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಜಯವರ್ಧನೆಯನ್ನೇ ಕೋಚ್ ಆಗಿ ಕರೆತಂದಿರುವ ಮುಂಬೈ, ಮತ್ತೊಬ್ಬ ಚಾಂಪಿಯನ್ ಕೋಚ್ಗೂ ಮಣೆಹಾಕುವ ಲೆಕ್ಕಚಾರದಲ್ಲಿದೆ.
ಮಹೇಲಾ ಜಯವರ್ಧನೆ ಕೋಚ್ ಆಗಿದ್ದೇ ತಡ, ಇತ್ತ ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ, ಮತ್ತೆ ಮುಂಬೈ ಬ್ರಿಗೇಡ್ಸ್ ಸೇರ್ತಾರೆ ಎನ್ನಲಾಗ್ತಿದೆ. ಇದಕ್ಕೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೇ ಅಧಿಕೃತ ಮುದ್ರೆ ಒತ್ತಬೇಕಿದೆ.
ಇದನ್ನೂ ಓದಿ:ದೇಶದ ಅತೀ ಉದ್ದದ ಗ್ಲಾಸ್ ಬ್ರಿಡ್ಜ್ ಇದು.. ಸಾಹಸಿ ಪ್ರವಾಸಿಗರು ನೋಡಲೇಬೇಕಾದ ಸ್ಥಳ..!
ರೋಹಿತ್ ಮುಂಬೈ ಆಫೀಸ್ ಭೇಟಿ ಬೆನ್ನಲ್ಲೇ ಮಹತ್ವದ ನಿರ್ಧಾರ
ಕೆಲ ದಿನಗಳ ಹಿಂದೆಯಷ್ಟೇ ರೋಹಿತ್, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಕಾರ್ಪೊರೇಟ್ ಆಫೀಸ್ಗೆ ಭೇಟಿ ನೀಡಿದ್ರು. ಈ ಭೇಟಿಯ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಆಗಿ ಮಹೇಲಾ ಜಯವರ್ಧನೆಯನ್ನ ಕೋಚ್ ಆಗಿ ನೇಮಿಸಿದೆ. ರೋಹಿತ್ಗೆ ಆಪ್ತರಾಗಿರುವ ಪರಾಸ್ ಮಾಂಬ್ರೆಯೂ ಮುಂಬೈ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಹೀಗಾಗಿ ಕೋಚ್ ಬದಲಾವಣೆ ಹಿಂದೆ ರೋಹಿತ್ ಶರ್ಮಾ ಪಾತ್ರ ಇದೆಯಾ ಎಂಬ ಅನುಮಾನವೂ ಹುಟ್ಟಿಕೊಂಡಿದೆ. ರೋಹಿತ್, ಜಯವರ್ಧನೆ ಜುಗಲ್ಬಂದಿಯಲ್ಲೇ ಮುಂಬೈ 3 ಬಾರಿ ಚಾಂಪಿಯನ್ ಆಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇವರಿಬ್ಬರ ನಡುವಿನ ಒಡನಾಟ ಉತ್ತಮವಾಗಿದೆ. ಈ ನಿರ್ಧಾರ ಮತ್ತೊಂದು ಪ್ರಶ್ನೆಗೂ ದಾರಿ ಮಾಡಿಕೊಟ್ಟಿದೆ.
ಕ್ಯಾಪ್ಟನ್ ಕೂಡ ಚೇಂಜ್..?
ಈಗಾಗಲೇ ಕೋಚಿಂಗ್ ಸ್ಟಾಫ್ ಬದಲಾಯಿಸಿರುವ ಮುಂಬೈ ಇಂಡಿಯನ್ಸ್, ನಾಯಕನ ಬದಲಾವಣೆ ಮಾಡುತ್ತಾ ಎಂಬ ಅನುಮಾನ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿ ಕೈ ಸುಟ್ಟುಕೊಂಡಿದ್ದ ಮುಂಬೈ, ಈಗ ರೋಹಿತ್ ಶರ್ಮಾ ಮಾತಿನಂತೆ ನಡೆದುಕೊಂಡು ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಹೊರಟಿದ್ಯಾ? ಇಲ್ಲ ರೋಹಿತ್ ಶರ್ಮಾಗೆ ಮತ್ತೆ ಪಟ್ಟ ಕಟ್ಟಲು ತೆರೆ ಹಿಂದೆ ನಡೆಯುತ್ತಿರುವ ಹೈಡ್ರಾಮಾನಾ ಎಂಬ ಪ್ರಶ್ನೆ ಸಹಜವಾಗೆ ತಲೆದೂರಿದೆ. ಇದೆಲ್ಲಕ್ಕೂ ಅಕ್ಟೋಬರ್ ಅಂತ್ಯದಲ್ಲೇ ಹೊರಬೀಳಬೇಕಿದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಮಾಸ್ಟರ್ ಸ್ಟ್ರೋಕ್; 3ನೇ ಟಿ20 ಪಂದ್ಯದಿಂದ ಸ್ಟಾರ್ ಪ್ಲೇಯರ್ ಔಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್