/newsfirstlive-kannada/media/post_attachments/wp-content/uploads/2024/08/PSI-Parashuram-Death-Case.jpg)
ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ತೀವ್ರ ಆಕ್ರೋಶ, ಪ್ರತಿಭಟನೆಯ ಬಳಿಕ ಯಾದಗಿರಿ ನಗರ ಠಾಣೆಯಲ್ಲಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹಾಗೂ ಅವರ ಪುತ್ರ ಪಂಪಣ್ಣಗೌಡ ವಿರುದ್ಧ FIR ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ.. PSI ಪರಶುರಾಮ ಪತ್ನಿಯಿಂದ ಗಂಭೀರ ಆರೋಪ
ಪಿಎಸ್ಐ ಪರಶುರಾಮ ಅವರ ಸಾವು ತೀವ್ರ ಸಂಚಲನ ಮೂಡಿಸಿದೆ. ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕ ಹಾಗೂ ಅವರ ಪುತ್ರನೇ ಕಾರಣ ಅಂತ ಪರಶುರಾಮ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದರು. ಯಾದಗಿರಿಯ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಹೋರಾಟಗಾರರು ಆರೋಪಿಗಳನ್ನು 24 ಗಂಟೆ ಒಳಗೆ ಬಂಧಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಪರಶುರಾಮ ಪತ್ನಿ ಶ್ವೇತಾ ಅವರ ಈ ಹೋರಾಟಕ್ಕೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/PSI.jpg)
ಶಾಸಕರ ಮೇಲೆ ವರ್ಗಾವಣೆ ಆರೋಪ
ಪಿಎಸ್ಐ ಪರಶುರಾಮ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರೇ ಕಾರಣ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ದುಡ್ಡು ಕೊಟ್ಟಿಲ್ಲ ಎಂದು ನಿಯಮ ಬಾಹಿರವಾಗಿ ಪಿಎಸ್ಐ ಪರಶುರಾಮರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಮೃತ ಪಿಎಸ್ಐ ಪತ್ನಿ ಶ್ವೇತಾ ಆರೋಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/yadagiri-PSI.jpg)
ಕಳೆದ 8 ತಿಂಗಳ ಹಿಂದೆ ಯಾದಗಿರಿ ನಗರ ಠಾಣೆಗೆ ಪಿಎಸ್ಐ ಪರಶುರಾಮ ಅವರು ಪೋಸ್ಟಿಂಗ್‌ಗೆ 30 ಲಕ್ಷ ನೀಡಿದ್ದರಂತೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಪಿಎಸ್ಐ ಪರಶುರಾಮರನ್ನು ನಗರ ಠಾಣೆಯಿಂದ ಸೆನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನಗರ ಠಾಣೆಗೆ ಮುಂದುವರೆಯಬೇಕಾದ್ರೆ ಮತ್ತೆ ದುಡ್ಡು ನೀಡಬೇಕು ಅಂತ ಶಾಸಕ ಹಾಗೂ ಶಾಸಕರ ಪುತ್ರ ಒತ್ತಡ ಹೇರಿದ್ದರಂತೆ. ಹೀಗಾಗಿ ದುಡ್ಡು ನೀಡಲಾಗದೇ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿರಬಹುದು ಅಂತ ಆರೋಪಿಸಲಾಗಿದೆ.
ಇದನ್ನೂ ಓದಿ: PSI ಪತ್ನಿಯ ಆರೋಪವನ್ನೂ ಪರಿಗಣಿಸ್ತೇನೆ, ಶೀಘ್ರದಲ್ಲೇ FIR -ಪರಶುರಾಮ್ ಸಾವಿನ ಬಗ್ಗೆ ಸರ್ಕಾರ ಹೇಳಿದ್ದೇನು..?
ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಮಾಡಿಸುವಾಗ ಪಿಎಸ್‌ಐ ಪರಶುರಾಮ ಸಾಲ ಮಾಡಿ ಶಾಸಕರಿಗೆ ಹಣ ನೀಡಿದ್ದರಂತೆ. ಅದೇ ಸಾಲ ತೀರಿಸಲಾಗದೇ ಚಿಂತೆಗೀಡಾಗಿದ್ದ ಪಿಎಸ್ಐ ಪರಶುರಾಮಗೆ ಮತ್ತೆ ಹಣ ನೀಡುವಂತೆ ಕೇಳಿದಾಗ ಹಣ ನೀಡದೇ ಇರೋ ಹಿನ್ನೆಲೆ ನಗರ ಠಾಣೆಯಿಂದ ಟ್ರಾನ್ಸ್‌ಫರ್ ಮಾಡಲಾಗಿದೆ. ಹೀಗಾಗಿ ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್ ಶಾಸಕ ಹಾಗೂ ಅವರ ಪುತ್ರ ಕಾರಣ ಅಂತ ಪಿಎಸ್ಐ ಪತ್ನಿ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us