ಮತ್ತೆ ಸುದ್ದಿಯಾದ ಮಲೈಕಾ ಮತ್ತು ಅರ್ಜುನ್ ಕಪೂರ್
ಅರ್ಜುನ್ ಕಪೂರ್ ಖಾಸಗಿ ಫೋಟೋ ಹಂಚಿಕೊಂಡ ನಟಿ ಮಲೈಕಾ
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟರ್ ವೈರಲ್
ವಯಸ್ಸು 49 ಆದ್ರೂ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುವ ಹಾಟ್ ಬ್ಯೂಟಿ ಎಂದರೆ ತಪ್ಪಲ್ಲ. ಆಗಾಗ ಮಾದಕ ಫೋಟೋ ಹಂಚಿಕೊಳ್ಳುತ್ತಿರುವುದಲ್ಲದೆ, ಏನಾದರೂ ಒಂದು ವಿಚಾರಕ್ಕೆ ಮಲೈಕಾ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಆದರೀಗ ಅರ್ಜುನ್ ಕಪೂರ್ ಖಾಸಗಿ ಫೋಟೋ ಹಂಚಿಕೊಂಡು ನಟಿ ಸುದ್ದಿಯಾಗಿದ್ದಾರೆ.
ಹೌದು. ಮಲೈಕಾ ಮತ್ತು ಅರ್ಜುನ್ ಕಪೂರ್ ಇಂದು ನಿನ್ನೆಯಿಂದ ಸುದ್ದಿಯಾಗುತ್ತಿರುವುದಲ್ಲ. ಆಗಾಗ ಇವರಿಬ್ಬರ ಚಲನ ವಲನಗಳು ಮುನ್ನಲೆಗೆ ಬರುತ್ತಿರುತ್ತವೆ. ಮಾತ್ರವಲ್ಲದೆ, ಏರ್ಪೋರ್ಟ್, ಮಾಲ್ಡೀವ್ಸ್ ಹೀಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ, ಎಂಜಾಯ್ ಮಾಡುತ್ತಾ, ಫೋಟೋ ಕ್ಲಿಕ್ಕಿಸುತ್ತಾ ಅಭಿಮಾನಿಗಳ ಬಾಯಲ್ಲಿ ಚರ್ಚೆಯಾಗುತ್ತಿರುತ್ತಾರೆ.
ಅರ್ಜುನ್ ವಯಸ್ಸಲ್ಲಿ ತೀರಾ ಮಲೇಕಾಗಿಂತ ಚಿಕ್ಕವನಾದರು ಇವರಿಬ್ಬರ ಒಡನಾಟ ಅಭಿಮಾನಿಗಳು ಬಾಯಲ್ಲಿ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಅರ್ಬಾಜ್ ಖಾನ್ ವಿಚ್ಛೇದನದ ಬಳಿಕ ಮಲೈಕಾ ಅರ್ಜುನ್ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಆತನನ್ನ ಹೆಚ್ಚು ಇಷ್ಟ ಪಡುತ್ತಾರೆ. ಅದಕ್ಕೆ ಸಾಕಿ ಎಂಬಂತೆ ಸಾಕಷ್ಟು ಫೋಟೋಗಳು ಮತ್ತು ಆಕೆ ಹಾಕಿಕೊಂಡಿರುವ ಪೋಸ್ಟರ್ಗಳೇ ಸಾಕ್ಷಿ.
ನನ್ನ ಲೇಝಿ ಬಾಯ್
ಆದರೀಗ ಮಾದಕ ನಟಿ ಮಲೈಕಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅರ್ಜುನ್ ಕಪೂರ್ಅವರ ಖಾಸಗಿ ಫೋಟೋ ಹಂಚಿಕೊಂಡಿದ್ದಾರೆ. ‘ನನ್ನ ಲೇಝಿ ಬಾಯ್’ ಎಂದು ಫೋಟೋದ ಜೊತೆಗೆ ಬರೆದುಕೊಂಡಿದ್ದಾರೆ. ಆದರೀಗ ಈ ಫೋಟೋ ಸದ್ಯ ಸುದ್ದಿಯಲ್ಲಿದೆ. ಮಾತ್ರವಲ್ಲದೆ ಟ್ರೋಲಿಗರಿಗೆ ಆಹಾರವಾಗಿದೆ.
ಅನೇಕರು ಮಲೈಕಾ ಹಂಚಿಕೊಂಡ ಅರ್ಜುನ್ ಫೋಟೋ ಕಂಡು ಬಗೆ ಬಗೆಯ ಕಾಮೆಂಟ್ ಬರೆಯುತ್ತಿದ್ದಾರೆ. ಅದರಲ್ಲೂ ಟ್ರೋಲಿಗರಂತೂ ಫೋಟೋವನ್ನ ಟ್ರೋಲ್ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಇನ್ನು ಫೋಟೋದಲ್ಲಿ ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೇಕಾ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ