newsfirstkannada.com

ಹಿಟ್ಲರ್​ ಕಲ್ಯಾಣ ಸೀರಿಯಲ್ ಅರ್ಧಕ್ಕೆ ಬಿಡೋ ಪರಿಸ್ಥಿತಿ ಎದುರಾಗಿತ್ತು; ನಟಿ ಮಲೈಕಾ ವಸುಪಾಲ್​ ಬೇಸರ

Share :

Published March 15, 2024 at 7:46pm

    ಹಿಟ್ಲರ್​ ಕಲ್ಯಾಣ ಸೀರಿಯಲ್ ಮೂಲಕ ಅಭಿಮಾನಿಗಳನ್ನು ಗಳಿಸಿದ ನಟಿ

    ಕೇವಲ 2 ದಿನಗಳಲ್ಲಿ ಜನ ಮೆಚ್ಚಿದ ಸೀರಿಯಲ್​ ಹಿಟ್ಲರ್​​ ಕಲ್ಯಾಣ ಅಂತ್ಯ​​

    ಶೂಟಿಂಗ್​ ವೇಳೆ ರಸ್ತೆ ಅಪಘಾತಕ್ಕೆ ಸಿಲುಕಿದ್ದರಂತೆ ನಟಿ ಮಲೈಕಾ ವಸುಪಾಲ್

ಹಿಟ್ಲರ್​ ಕಲ್ಯಾಣ ಸೀರಿಯಲ್​​ ಅಂತಿಮ ಸಂಚಿಕೆಗಳು ನಡೆಯುತ್ತಿವೆ. ಕೇವಲ 2 ದಿನಗಳಲ್ಲಿ ಮಾತ್ರ ಹಿಟ್ಲರ್​​ ಕಲ್ಯಾಣ ಸೀರಿಯಲ್​​ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿದೆ. ಮಹಿಳೆಯರಿಂದ ಹಿಡಿದು ಕಾಲೇಜು ಹುಡುಗಿಯರಿಗೂ ಹಿಟ್ಲರ್​ ಕಲ್ಯಾಣದ ಮೇಲೆ ಕ್ರಶ್​ ಇತ್ತು. ಲೀಲಾ-ಸೊಸೆಯಂದಿರ ಕಾಂಬಿನೇಷನ್​ ಮೇಲೆ ವಿಶೇಷ ಪ್ರೀತಿ ತೋರಿಸಿದ್ದರು ವೀಕ್ಷಕರು.

ಇನ್ನೂ, ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಸಂದರ್ಭದಲ್ಲಿ ಕೇಕ್​ ಕಟ್​ ಮಾಡಿ ಜರ್ನಿಯನ್ನು ನೆನಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಮತ್ತೊಂದು ಪ್ರಾಜೆಕ್ಟ್​ ಬರುತ್ತೆ ಅನ್ನೋ ಸುಳಿವು ಕೂಡ ನೀಡಿದೆ. ಹಿಟ್ಲರ್​ ಕಲ್ಯಾಣ ಮೂಲಕ ಚಿಕ್ಕವಯಸ್ಸಲ್ಲೇ ಯಶಸ್ಸು ಕಂಡ ಚಲುವೆ ಮಲೈಕಾ ಟಿ ವಸುಪಾಲ್​ ಸೀರಿಯಲ್​ನಿಂದ ಸಿನಿಮಾ ಕಡೆ ಮೂಖ ಮಾಡಿದ್ದಾರೆ. ಈಗಾಗಲೇ ಬೆಳ್ಳಿತೆರೆಯಲ್ಲಿ ಯಶಸ್ಸಿನ ಮೊದಲ ಹೆಜ್ಜೆ ಇಟ್ಟು ಗೆದ್ದಿದ್ದಾರೆ. ಸಿನಿ ಜರ್ನಿ ಹಾಗೂ ಹಿಟ್ಲರ್​ ಕಲ್ಯಾಣ ಸೀರಿಯಲ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿರೋ ನಟಿ, ಹಿಟ್ಲರ್​ ಶೂಟಿಂಗ್​ ಸಂದರ್ಭದಲ್ಲಿ ನಡೆದ ಕೆಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹೌದು, ಹಿಟ್ಲರ್​ ಕಲ್ಯಾಣ ಧಾರಾವಾಹಿಯನ್ನು ಅರ್ಧಕ್ಕೆ ಬೀಡುವ ಪರಿಸ್ಥಿತಿ ಎದುರಾಗಿತ್ತಂತೆ. ಶೂಟಿಂಗ್​ ವೇಳೆ ರಸ್ತೆ ಅಪಘಾತಕ್ಕೆ ಇಡಾಗಿದ್ದರಂತೆ. ಈ ಸಂದರ್ಭದಲ್ಲಿ ಸಂಪೂರ್ಣ ಬೆಡ್​ ರೆಸ್ಟ್​ ಮಾಡಬೇಕು ಅಂತಾ ಡಾಕ್ಟರ್​ ಸಲಹೆ ನೀಡಿದ್ರಂತೆ. ಸೀರಿಯಲ್​ನ ಮುಂದುವರೆಸೋದು ಅನ್ನೋ ಯೋಚನೆ ಬಂದ್ರು ಕೂಡ ಮುಂದಿಟ್ಟ ಹೆಜ್ಜೆಯನ್ನ ಹಿಂದೆ ಇಡೋ ಮಾತಿಯಿಲ್ಲ ಅಂತಾ ಆ ಪರಿಸ್ಥಿತಿಯನ್ನ ಧೈರ್ಯವಾಗಿ ಎದುರಿಸಿ ಆ್ಯಕ್ಟಿಂಗ್​​ನ ಮುಂದುವರೆಸಿದ್ರಂತೆ. ಅಭಿನಯ ಅಂದ್ರೇ ನನಗೆ ಹುಚ್ಚು ಆಸಕ್ತಿ ಅನ್ನೋ ಮಲೈಕಾಗೆ ಸಿನಿಮಾ ಕ್ಷೇತ್ರದಿಂದ ಸಿಕ್ಕಾಪಟ್ಟೆ ಆಫರ್ಸ್​ ಬರ್ತಿವೆ. ಇದರಲ್ಲಿ ಬೇರೆ ಭಾಷೆಯ ಆಫರ್​ಗಳು ಹೆಚ್ಚಿವೆ ಅಂತಾರೆ ನಟಿ.

ಇದನ್ನು ಓದಿ: ಅಪ್ಪನ ಆರೋಗ್ಯದ ಬಗ್ಗೆ ನಿಖಿಲ್ ಭಾವುಕ; ಮಗನ ಮಾತು ಕೇಳಿ ವೇದಿಕೆಯಲ್ಲೇ ಗಳಗಳನೇ ಕಣ್ಣೀರಿಟ್ಟ ಕುಮಾರಸ್ವಾಮಿ

ಧಾರಾವಾಹಿ, ಸಿನಿಮಾ ಯಶಸ್ಸಿನ ನಂತರ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಬೆಳ್ಳಿತೆರೆಯಲ್ಲಿ ಮತ್ತಷ್ಟು ಸಾಧನೆ ಮಾಡೋ ಕನಸು ಮಲೈಕಾ ವಸುಪಾಲ್​ ಅವರದ್ದು. ಸದಾ ಹಾರ್ಡ್​ ವರ್ಕ್​ ಮಂತ್ರ ಜಪಿಸೋ ನಟಿ, ರೆಸ್ಟ್​ ಮಾಡೋದು ಇದ್ದಿದ್ದೇ ಈಗ ಕೆಲಸ ಮಾಡೋ ಸಮಯ ಹೆಚ್ಚೆಚ್ಚು ವರ್ಕ್​ ಮಾಡೋ ಆಸಕ್ತಿ ಇದೆ ಅಂತಾರೆ. ಮಲೈಕಾ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಹಿಟ್ಲರ್​ ಕಲ್ಯಾಣ ವರವಾಗಿದೆ. ಒಟ್ಟಿನಲ್ಲಿ 6.30ರ ಸ್ಲಾಟ್​ನಲ್ಲಿ 3.9 ಟಿಆರ್​ಪಿ ಪಡೆದುಕೊಂಡಿರೋದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಟ್ಲರ್​ ಕಲ್ಯಾಣ ಸೀರಿಯಲ್ ಅರ್ಧಕ್ಕೆ ಬಿಡೋ ಪರಿಸ್ಥಿತಿ ಎದುರಾಗಿತ್ತು; ನಟಿ ಮಲೈಕಾ ವಸುಪಾಲ್​ ಬೇಸರ

https://newsfirstlive.com/wp-content/uploads/2024/03/hitler-kalyana-3.jpg

Load More