/newsfirstlive-kannada/media/post_attachments/wp-content/uploads/2024/10/Mallavva-Libary.jpg)
ಗೃಹಲಕ್ಷ್ಮೀ ಹಣದಿಂದ ಕೆಲವರು ಟಿವಿ, ಫ್ರಿಜ್ ತೆಗೆದುಕೊಂಡು ಸುದ್ದಿಯಾದ್ರು. ಇದೇ ಬೆಳಗಾವಿಯ ಒಬ್ಬಳು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ರು. ಮತ್ತೊಬ್ರು ಮಗನಿಗೆ ಬೈಕ್ ಕೊಡಿಸಿದ್ರು. ಆದ್ರೆ ಇಲ್ಲೊಬ್ಬ ಮಹಿಳೆ ಮಾತ್ರ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಮಾದರಿ ಆಗುವ ಸಾಧನೆ ಮಾಡಿದ್ದಾರೆ.
ಇವಳ ಹೆಸರ ಮಲ್ಲವ್ವ. ಹೆಸರು ಮಲ್ಲವ್ವ ಭೀಮಪ್ಪ ಮೇಟಿ. ಬೆಳಗಾವಿ ಜಿಲ್ಲಾ ರಾಯಭಾಗ ತಾಲೂಕಿನ ಮಂಟೂರ ಊರಿನವಳು. ಮಲ್ಲವ್ವ ಅದೆಷ್ಟು ಚೆಂದದ ಕೆಲಸ ಮಾಡಿದ್ದಾಳೆ ಅಂದ್ರೆ, ಪ್ರತಿಯೊಬ್ಬರು ಖುಷಿ ಪಡುವಂತದ್ದಾಗಿದೆ.
ಇದನ್ನೂ ಓದಿ:ಟೀ ಅಂಗಡಿ ಮಾಲೀಕನಿಗೆ ಬಂಪರ್; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?
ಊರಲ್ಲ ರೀ ರಾಜ್ಯವೇ ಮೆಚ್ಚೋ ಕೆಲಸ ಮಾಡಿದ್ಲು ಮಲ್ಲವ್ವ!
ಸಿದ್ರಾಮಯ್ಯ ಸರ್ಕಾರ ಬಂದ ಮೇಲೆ ಗೃಹಲಕ್ಷ್ಮೀ ಅಂತ 2 ಸಾವಿರ ರೂಪಾಯಿ ಕೊಡುತ್ತಾರೆ. ಆ ಹಣದಲ್ಲಿ ಎಲ್ಲಾರೂ ಏನೆನೋ ಮಾಡುತ್ತಾರೆ. ಆದರೆ ಈ ಮಲ್ಲವ್ವ ಮಾತ್ರ ಮಕ್ಕಳ ಬದುಕಿಗೆ ಬೆಳಕು ತೋರೋ ಕೆಲಸ ಮಾಡಿದ್ದಾಳೆ. ಹಳ್ಳಿಯಲ್ಲಿ ಸರ್ಕಾರಿ ನೌಕರಿ ಸಂಬಂಧಿಸಿದಂತೆ ಓದುವ ಹುಡುಗರು ಜಾಸ್ತಿ ಇದ್ದಾರೆ. ಅವರು ಚೆನ್ನಾಗಿ ಓದಲು ಒಂದು ಲೈಬ್ರರಿನೂ ಇರಲಿಲ್ಲ. ಸರ್ಕಾರದಿಂದ ಬಂದ ಹಣವನ್ನು ಒಟ್ಟು ಮಾಡಿ ಒಂದೂವರೆ ಲಕ್ಷದಾಗ ಗ್ರಂಥಾಲಯ ಮಾಡಿದ್ದಾಳೆ. ಹದಿಮೂರು ತಿಂಗಳ ಗೃಹಲಕ್ಷ್ಮೀಯಲ್ಲಿ ಬಂದು 26 ಸಾವಿರ, ಮತ್ತು ಮಲ್ಲವ್ವ ಗ್ರಾಮ ಪಂಚಾಯಿತಿ ಮೆಂಬರ್ ಆಗಿದ್ದಾಳೆ. ಅಲ್ಲಿನೂ ಗೌರವ ಧನ ಸಿಗುತ್ತದೆ. ಆ ಎಲ್ಲಾ ಹಣದಿಂದ ಸಣ್ಣ ಕೆಲಸ ಮಾಡಿದ್ದೀನಿ ಎನ್ನುತ್ತಿದ್ದಾರೆ ಮಲ್ಲವ್ವ.
ಮಲ್ಲವ್ವ ಜಾಣೆ ಅಲ್ಲ
ಸಿದ್ದು ಕಾಲತಿಪ್ಪಿ ಎಂಬ ವಿದ್ಯಾರ್ಥಿ ಮಲ್ಲವ್ವನ ಬಗ್ಗೆ ಮಾತನಾಡಿದ್ದು, ಹಾಗಂತ ಮಲ್ಲವ್ವ ಏನು ದೊಡ್ಡ ಮಟ್ಟಿಗೆ ಜಾಣೆ ಅಲ್ಲ. ಸ್ವಲ್ಪ ಓದಿದ್ದಾರೆ. ಆದರೆ ಊರ ಮಕ್ಕಳು ಚೆಂದ ಓದಬೇಕು. ಇದೇ ಆಕೆಯ ಕನಸಾಗಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಿಂದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ! ಇವರು ಆಧುನಿಕ ಸಾವಿತ್ರಿ ಬಾಯಿ ಪುಲೆ
ಆಕೆಗೆ ಏನು ಗೊತ್ತಿಲ್ಲ
ಎಲ್ರೂ ಹೇಳುತ್ತಾರೆ. ಮಲ್ಲವ್ವ ಜಾಸ್ತಿ ಕಲಿಯಲಿಲ್ಲ. ಉಸ್ತುವಾರಿ ಮಾಡುತ್ತಾಳೆ. ಅದಕ್ಕಿಂತ ಆಕೆಗೆ ಏನು ಗೊತ್ತಿಲ್ಲ ಅಂತಾರೆ. ಆದರೆ ತನ್ನೂರಿನಲ್ಲಿ ಮಕ್ಕಳು ಕಲೀಲಿ ಅಂತ ಸ್ವಂತ ಹಣದಲ್ಲಿ ಯಾರು ಮಾಡುತ್ತಾರೆ ಹೇಳ್ರಿ. ಅದಕ್ಕೆ ನಾವು ಮಲ್ಲವ್ವನಿಗೆ ಈ ಕಾಲದ ಸಾವಿತ್ರಿಬಾಯಿ ಪುಲೆ ಎನ್ನುತ್ತೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ