Advertisment

ನಾಮಪತ್ರ ಸಲ್ಲಿಕೆ ವೇಳೆ ಖರ್ಗೆಯನ್ನೇ ಕಡೆಗಣಿಸಿದ್ರಾ? AICC ಅಧ್ಯಕ್ಷ ಬಾಗಿಲ ಸೆರೆಯಲ್ಲಿ ಇಣುಕುವ ದೃಶ್ಯ ವೈರಲ್

author-image
AS Harshith
Updated On
ನಾಮಪತ್ರ ಸಲ್ಲಿಕೆ ವೇಳೆ ಖರ್ಗೆಯನ್ನೇ ಕಡೆಗಣಿಸಿದ್ರಾ? AICC ಅಧ್ಯಕ್ಷ ಬಾಗಿಲ ಸೆರೆಯಲ್ಲಿ ಇಣುಕುವ ದೃಶ್ಯ ವೈರಲ್
Advertisment
  • ಉಪ ಚುನಾವಣೆ ಹಿನ್ನೆಲೆ ಪ್ರಿಯಾಂಕಾ ವಾದ್ರಾ ನಾಮಪತ್ರ ಸಲ್ಲಿಕೆ
  • ಕುಟುಂಬ ಸಮೇತ ವಯನಾಡಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ
  • ನಾಮಪತ್ರ ಸಲ್ಲಿಕೆ ವೇಳೆ ಬಾಗಿಲ ಹೊರಗೆ ನಿಂತ್ರಾ ಖರ್ಗೆ?

ಉಪ ಚುನಾವಣೆ ಹಿನ್ನೆಲೆ ಪ್ರಿಯಾಂಕಾ ವಾದ್ರಾ ಕುಟುಂಬ ಸಮೇತ ವಯನಾಡಿಗೆ ಆಗಮಿಸಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಉಪಸ್ಥಿತರಿದ್ದರು. ಆದ್ರೆ, ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಪ್ರಿಯಾಂಕಾ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಬಾಗಿಲ ಹೊರಗೆ ನಿಂತು ಖರ್ಗೆ ಇಣುಕಿ ನೋಡುತ್ತಿರುವುದು ಕಂಡು ಬಂದಿದೆ.

Advertisment

ಮಲ್ಲಿಕಾರ್ಜುನ ಖರ್ಗೆಯವರು ಬಾಗಿಲ ಸೆರೆಯಲ್ಲಿ ಇಣುಕಿ ನೋಡುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಿಜೆಪಿ ನಾಯಕರು ಈ ವಿಡಿಯೋ ಕಂಡು ವ್ಯಂಗ್ಯವಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿಯನ್ನ ಬೇರ್ಪಡಿಸಿದ ಪೊಲೀಸರು! ಪತ್ನಿಗಾಗಿ ಸ್ಟೇಷನ್ ಮುಂದೆ ಪತಿ ಪ್ರತಿಭಟನೆ

Advertisment


">October 23, 2024

ಬಿಜೆಪಿ ನಾಯಕ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾರವರು, ‘ಇಂದು ವಯನಾಡಿನಲ್ಲಿ ಹೋಲಿ ಟ್ರಿನಿಟಿ ಎಂದು ಕರೆಯಲ್ಪಡುವ ಹಿರಿಯ ಸಂಸದೀಯ ಮತ್ತು ದಲಿತ ನಾಯಕರಾದ ಶ್ರೀಖರ್ಗೆಯವರಿಗೆ ತೋರಿದ ಅಗೌರವ ನೋಡಿ ತುಂಬಾ ಬೇಸರವಾಗಿದೆ. ಎಐಸಿಸಿ ಅಥವಾ ಪಿಸಿಸಿ ಅಧ್ಯಕ್ಷರಾಗಿರಲಿ ಖರ್ಗೆಯವರನ್ನು ರಬ್ಬರ್​ ಸ್ಟ್ಯಾಂಪ್​ನಂತೆ ಪರಿಗಣಿಸಿ ಅಮಮಾನಿಸುವುದರಲ್ಲಿ ಕುಟುಂಬ ಹೆಮ್ಮೆ ಪಡುತ್ತದೆಯೇ?’ ಎಂದು ಹೇಳಿದ್ದಾರೆ

ಇದನ್ನೂ ಓದಿ: Rain Effect: ಕೆರೆಯಂತಾದ ರಸ್ತೆ, ರಸ್ತೆಯಲ್ಲಿ ಪಲ್ಟಿ ಹೊಡೆದ ಸ್ಕೂಟರ್​ ಸವಾರ.. ಬೆಂಗಳೂರಲ್ಲಿ ಸಾಲು ಸಾಲು ಅವಾಂತರ

ಮಾಜಿ ಸಚಿವ ರಾಜೀವ್​ ಚಂದ್ರಶೇಖರ್​ರವರು ಟ್ವೀಟ್​ ಮಾಡಿದ್ದು, ‘ಪ್ರಿಯಾಂಕಾ ವಾದ್ರಾ ವಯನಾಡಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ನೀವು ಎಲ್ಲಿದ್ರಿ ಖರ್ಗೆ ಸಾಹೇಬರೇ ? ನಿಮ್ಮನ್ನು ಹೊರಗೆ ಇರಿಸಲಾಗಿತ್ತಾ. ಯಾಕಂದ್ರೆ ನೀವು ಅವರ ಕುಟುಂಬವಲ್ಲ. ಸೋನಿಯಾ ಗಾಂಧಿ ಕುಟುಂಬದ ಅಹಂಕಾರ ಮತ್ತು ಅರ್ಹತೆಯ ಬಲಿಪೀಠದಲ್ಲಿ ಆತ್ಮಗೌರವ ಮತ್ತು ಘನತೆಯನ್ನು ಬಲಿಕೊಡಲಾಗಿದೆ. ಇವರು ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನು ಈ ರೀತಿ ನಡೆಸಿಕೊಂಡರೆ, ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಊಹಿಸಿ’ ಎಂದು ಬರೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment