newsfirstkannada.com

ಫಸ್ಟ್​ ನೈಟ್​ ದಿನವೇ ಹೆಂಡತಿ ಮುಖ ನೋಡಿ ಶಾಕ್​​​​ ಆದ ಗಂಡ.. ಡಿವೋರ್ಸ್​ಗೆ ಬೇಡಿಕೆ ಇಟ್ಟಿದ್ದೇಕೆ?

Share :

Published May 28, 2024 at 7:32pm

Update May 28, 2024 at 7:48pm

    ಮದುವೆಯಾದ ಒಂದೇ ಒಂದು ದಿನಕ್ಕೆ ಹೆಂಡತಿಯನ್ನು ನೋಡಿ ಫುಲ್ ಶಾಕ್!

    ವಧುವಿನ ಸಮಸ್ಯೆ ಬಗ್ಗೆ ಹೇಳದೇ ನನಗೆ ಮೋಸ ಮಾಡಿದ್ದೀರಿ ಎಂದ ಯುವಕ

    ಯುವತಿಯ ಕುಟುಂಬಸ್ಥರು ಎಷ್ಟೇ ಮನವೊಲಿಸಿದರು ಕೇಳದ ಇಂಜಿನಿಯರ್

ಇತ್ತೀಚೆಗಂತೂ ಸಾಕಷ್ಟೂ ದಂಪತಿ ಸಿಲ್ಲಿ ಸಿಲ್ಲಿ ವಿಚಾರಕ್ಕೆ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ. ಆದರೆ ಕೆಲವರು ಮದುವೆಯಾದ 4 ವರ್ಷಕ್ಕೆ ಡಿವೋರ್ಸ್ ಪಡೆದುಕೊಂಡರೆ, ಇನ್ನೂ ಕೆಲವರು ಮದುವೆಯಾದ ಒಂದೇ ತಿಂಗಳಿಗೆ ವಿಚ್ಛೇದನ ನೀಡುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಪತಿ ಕುರ್ಕುರೆ ತಂದುಕೊಡಲಿಲ್ಲ ಅಂತ ಮಹಿಳೆಯೊಬ್ಬಳು ಡಿವೋರ್ಸ್ ನೀಡಲು ಮುಂದಾಗಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಇದೀಗ ಅಂತಹದ್ದೇ ಒಂದು ಘಟನೆ ಮತ್ತೆ ಮುನ್ನಲೆಗೆ ಬಂದಿದೆ. ಕುವೈತ್‌ನ ಅಲ್-ಸಬಾಹಿಯಾ ಮೂಲದ ಇಂಜಿನಿಯರ್​ ಮೊದಲ ರಾತ್ರಿಯಂದು ಹೆಂಡತಿಯ ಕಣ್ಣಿನ ಬಣ್ಣಕ್ಕೆ ಬೇಸರಗೊಂಡು ವಿಚ್ಛೇದನ ನೀಡಲು ಮುಂದಾದ ಅಚ್ಚರಿ ಘಟನೆ ನಡೆದಿದೆ. ಮೊದ ಮೊದಲು ಮದುವೆಯಾಗುವ ಯುವತಿಯ ಕಣ್ಣುಗಳ ಬಣ್ಣ ಕಪ್ಪು ಎಂದು ಭಾವಿಸಿದ್ದ. ನಿಶ್ಚಿತಾರ್ಥದ ದಿನ ಅಷ್ಟಾಗಿ ಗಮನಿಸಿರಲಿಲ್ಲ. ಮದುವೆಯ ದಿನ ವಧು ಲೆನ್ಸ್ ಹಾಕಿದ್ದರಿಂದ ಗೊತ್ತಾಗಿಲ್ಲ. ಆದರೆ, ಮದುವೆಯಾದ ಒಂದು ದಿನದ ನಂತರ ಹೆಂಡತಿಯ ಹಸಿರು ಬಣ್ಣದ ಕಣ್ಣುಗಳನ್ನು ನೋಡಿ ಫುಲ್ ಶಾಕ್​ ಆಗಿದ್ದಾನೆ.

ಆದರೆ ಇದೀಗ ವಧುವಿನ ನಿಜವಾದ ಕಣ್ಣುಗಳನ್ನು ನೋಡಿ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಕೆಯ ಕಣ್ಣಿಗೆ ಲೆನ್ಸ್‌ ಹಾಕಿ ನನಗೆ ಮೋಸ ಮಾಡಿದ್ದೀರಿ. ಮುಂದೆ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಯುವಕ ಆರೋಪಿಸಿದ್ದಾನೆ. ಆದರೆ ಇದನ್ನು ವಧುವಿನ ಕುಟುಂಬಸ್ಥರು ವರನಿಗೆ ಆಕೆಗೆ ದೃಷ್ಟಿ ಸಮಸ್ಯೆಗಳಿಂದಾಗಿ ಹೀಗೆ ಆಗಿದೆ ಅಂತ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಸ್ಟ್​ ನೈಟ್​ ದಿನವೇ ಹೆಂಡತಿ ಮುಖ ನೋಡಿ ಶಾಕ್​​​​ ಆದ ಗಂಡ.. ಡಿವೋರ್ಸ್​ಗೆ ಬೇಡಿಕೆ ಇಟ್ಟಿದ್ದೇಕೆ?

https://newsfirstlive.com/wp-content/uploads/2023/11/Marriage.jpg

Load More